HomeLatest NewsBIG NEWS : ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚುವರಿ ಬೋಧನೆಗೆ 'ಅತಿಥಿ ಉಪನ್ಯಾಸಕರ ಆಯ್ಕೆ' :...

BIG NEWS : ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚುವರಿ ಬೋಧನೆಗೆ ‘ಅತಿಥಿ ಉಪನ್ಯಾಸಕರ ಆಯ್ಕೆ’ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

2025-26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಸಂಬಂಧ ಹೊರಡಿಸಲಾಗಿರುವ ಉಲ್ಲೇಖಿತ ಈ ಕಛೇರಿಯ ಸುತ್ತೋಲೆಯಲ್ಲಿನ ನಿಬಂಧನೆಗಳ ಕ್ರಮ ಸಂಖ್ಯೆ (19) ರಲ್ಲಿ ‘ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ನಿರ್ವಹಣೆ ಭಾಷಾ ವಿಷಯಗಳಲ್ಲಿ ಕನಿಷ್ಠ 04 ಗಂಟೆಗಳು ಹಾಗೂ ವಿಜ್ಞಾನ ವಿಷಯ/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಕನಿಷ್ಠ 05 ಗಂಟೆಗಳ ಕಾರ್ಯಭಾರ’ ಎಂದಿರುವುದನ್ನು “ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ನಿರ್ವಹಣೆ ಭಾಷಾ ವಿಷಯಗಳಿಗೆ ಹಾಗೂ ವಿಜ್ಞಾನ ವಿಷಯ/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಕನಿಷ್ಠ 04 ಗಂಟೆಗಳ ಕಾರ್ಯಭಾರ” ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular