HomeKarnatakaಇಂದು ಮಧ್ಯಾಹ್ನ 3 ಗಂಟೆಗೆ ‘ದ್ವಿತೀಯ PUC' ಫಲಿತಾಂಶ ಪ್ರಕಟ ; 'ಡಿಜಿಲಾಕರ್'ನಲ್ಲಿ ತಕ್ಷಣವೇ ಅಧಿಕೃತ...

ಇಂದು ಮಧ್ಯಾಹ್ನ 3 ಗಂಟೆಗೆ ‘ದ್ವಿತೀಯ PUC’ ಫಲಿತಾಂಶ ಪ್ರಕಟ ; ‘ಡಿಜಿಲಾಕರ್’ನಲ್ಲಿ ತಕ್ಷಣವೇ ಅಧಿಕೃತ ಅಂಕಪಟ್ಟಿ ಲಭ್ಯ !

ಬೆಂಗಳೂರು  : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ರ ದ್ವಿತೀಯ ಪಿಯುಸಿ (Exam-1) ಫಲಿತಾಂಶದ ದಿನಾಂಕವನ್ನು ಘೋಷಿಸಿದೆ. ಏಪ್ರಿಲ್ 9, 2026 (ಗುರುವಾರ) ಮಧ್ಯಾಹ್ನ 3:00 ಗಂಟೆಗೆ ಫಲಿತಾಂಶ ಪ್ರಕಟವಾಗುತ್ತಿದೆ. ಅಧಿಕೃತ ವೆಬ್‌ಸೈಟ್ karresults.nic.in ಅಥವಾ ಕರ್ನಾಟಕ ಒನ್ ಮೊಬೈಲ್ ಆಪ್‌ನಲ್ಲಿ ವೀಕ್ಷಿಸಬಹುದು.ವಿದ್ಯಾರ್ಥಿಗಳ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಫಲಿತಾಂಶ ಬರಲಿದೆ.

ಡಿಜಿಟಲ್ ಅಂಕಪಟ್ಟಿ: ಈ ಬಾರಿ ಮೊದಲ ಬಾರಿಗೆ ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ (DigiLocker) ಮೂಲಕ ಅಧಿಕೃತ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ ಅನ್ನು ಗಮನಿಸುತ್ತಿರಲು ಸೂಚಿಸಲಾಗಿದೆ.

ದಿನಾಂಕ: 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಸದರಿ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಹಾಗೂ KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ದಿನಾಂಕ: 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ ಲಭ್ಯಗೊಳಿಸಲಾಗುವುದು. https://www.digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.ಅಂಕಪಟ್ಟಿಯನ್ನು ಡಿಜಿಲಾಕರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಈ Video link https://tinyurl.com/mw84wmh9 ಅನ್ನು ಬಳಸಿ ತಿಳಿದುಕೊಳ್ಳಬಹುದು.ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಕಾಲೇಜುಗಳಿಗೆ ದಿನಾಂಕ: 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ ಲಭ್ಯಗೊಳಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular