HomeLatest NewsBIG NEWS: ಬ್ಯಾಗೇಜ್ ನಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಪತ್ತೆ: ಶ್ರೀನಗರ ಏರ್ ಪೋರ್ಟ್ ನಲ್ಲಿ...

BIG NEWS: ಬ್ಯಾಗೇಜ್ ನಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಪತ್ತೆ: ಶ್ರೀನಗರ ಏರ್ ಪೋರ್ಟ್ ನಲ್ಲಿ ಇಬ್ಬರು ಅಮೆರಿಕನ್ ಪ್ರಜೆಗಳು ವಶಕ್ಕೆ

ಶ್ರೀನಗರ: ಏರ್ ಪೋರ್ಟ್ ಗೆ ಬಂದಿದ್ದ ಇಬ್ಬರು ಅಮೆರಿಕನ್ ಪ್ರಜೆಗಳ ಬ್ಯಾಗೇಜ್ ನಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಪತ್ತೆಯಾಗಿದ್ದು, ಇಬ್ಬರನ್ನೂ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ಜಮ್ಮು-ಕಾಶ್ಮೀರದ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಶಕ್ಕೆ ಪಡೆದವರನ್ನು ಮೊಂಟಾನಾ ಮೂಲದ ಜೆಫ್ರಿ ಸ್ಕಾಟ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಇನ್ನೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರ ಬ್ಯಾಗೇಜ್‌ನಲ್ಲಿ ಗಾರ್ಮಿನ್ ಕಂಪನಿಯ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ.

ವಿಮಾನ ನಿಲ್ದಾಣದ ಭದ್ರತೆಗೆ ನಿಯೋಜನೆಗೊಂಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಇವರನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿ, ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವ್ಯಕ್ತಿಗಳು ಈ ಹಿಂದೆ ರಿಷಿಕೇಶದಲ್ಲಿ ತಂಗಿದ್ದು, ಅಲ್ಲಿಂದ ಶ್ರೀನಗರಕ್ಕೆ ಬಂದಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಾಧನವು ನೇರವಾಗಿ ಉಪಗ್ರಹದ ಮೂಲಕ ಸಂವಹನ ನಡೆಸುವುದರಿಂದ ಸಾಮಾನ್ಯ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಕೆಲಸ ಮಾಡುತ್ತದೆ. ಭಾರತದಲ್ಲಿ ಸ್ಯಾಟಲೈಟ್ ಫೋನ್‌ಗಳನ್ನು ಸರ್ಕಾರದ ಅನುಮತಿಯಿಲ್ಲದೆ ಬಳಸುವುದು ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ವೈರ್‌ಲೆಸ್ ಟೆಲಿಗ್ರಾಫಿ ಕಾಯ್ದೆಯಡಿ ಅಪರಾಧವಾಗಿದೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಸಾಧನಗಳ ಬಳಕೆಯನ್ನು ಭದ್ರತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ವ್ಯಕ್ತಿಗಳು ಅರಿವಿಲ್ಲದೆ ಇದನ್ನು ತಂದಿದ್ದಾರೆಯೇ ಅಥವಾ ಬೇರೆ ಉದ್ದೇಶವಿದೆಯೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿದೇಶಿ ಪ್ರವಾಸಿಗರು ಭಾರತಕ್ಕೆ ಬರುವಾಗ ಇಂತಹ ಸಂವಹನ ಸಾಧನಗಳನ್ನು ತರಬಾರದೆಂದು ಭಾರತೀಯ ರಾಯಭಾರ ಕಚೇರಿಗಳು ಎಚ್ಚರಿಸುತ್ತವೆ. ತುರ್ತು ಸಂದರ್ಭಕ್ಕಾಗಿ ತರಬೇಕಿದ್ದರೆ ಭಾರತದ ಟೆಲಿಕಾಂ ಇಲಾಖೆಯಿಂದ (DoT) ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular