HomeIPL 2026IPL 2026: ಏಳನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದು ಮಾನ ಉಳಿಸಿಕೊಂಡ ಕೆಕೆಆರ್

IPL 2026: ಏಳನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದು ಮಾನ ಉಳಿಸಿಕೊಂಡ ಕೆಕೆಆರ್

ಇಂದು ( ಏಪ್ರಿಲ್ 19 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 28ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಏಳನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 160 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಸಹ ಒಳ್ಳೆಯ ಆಟವನ್ನಾಡಲಿಲ್ಲ. ಈ ಇಬ್ಬರು ಔಟ್ ಆದ ಬಳಿಕ ರಾಜಸ್ಥಾನ್ ಆಟಗಾರರು ಸಾಲು ಸಾಲಾಗಿ ವಿಕೆಟ್ ಒಪ್ಪಿಸಿ, ಕೊಲ್ಕತ್ತಾ ಬೌಲಿಂಗ್ ದಾಳಿಗೆ ನಿರುತ್ತರರಾದರು. ವೈಭವ್ 46 ರನ್ ಗಳಿಸಿದರೆ, ಜೈಸ್ವಾಲ್ 39 ರನ್ ಬಾರಿಸಿದರು. ಇನ್ನುಳಿದಂತೆ ಧ್ರುವ್ ಜುರೆಲ್ 5, ನಾಯಕ ರಿಯಾನ್ ಪರಾಗ್ 12, ಶಿಮ್ರಾನ್ ಹೆಟ್ಮಾಯೆರ್ 15, ಡೊನೊವನ್ ಫೆರೇರಾ 7, ರವೀಂದ್ರ ಜಡೇಜಾ 9, ಜೋಫ್ರಾ ಆರ್ಚರ್ 8, ರವಿ ಬಿಷ್ಣೋಯಿ ಡಕ್‌ಔಟ್ ಹಾಗೂ ಬ್ರಿಜೇಶ್ ಶರ್ಮಾ ಅಜೇಯ 1 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ ಹಾಗೂ ಕಾರ್ತಿಕ್ ತ್ಯಾಗಿ ತಲಾ ಮೂರು ವಿಕೆಟ್ ಪಡೆದರೆ, ಸುನಿಲ್ ನರೇನ್ ಎರಡು ವಿಕೆಟ್ ಪಡೆದರು.

ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಟಿಮ್ ಸೈಫರ್ಟ್ ಮೊದಲ ಎಸೆತದಲ್ಲೇ ಔಟ್ ಆದರೆ, ಎರಡನೇ ಓವರ್‌ನಲ್ಲಿ ಮತ್ತೋರ್ವ ಆರಂಭಿಕ ಅಜಿಂಕ್ಯ ರಹಾನೆ ಡಕ್‌ಔಟ್ ಆದರು. ಹೀಗೆ ಕೇವಲ 5 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಕೆಕೆಆರ್ ಆರಂಭಿಕ ಆಘಾತ ಅನುಭವಿಸಿತು. ಕೆಲ ಸಮಯದಲ್ಲೇ 27 ರನ್ ಗಳಿಸಿದ್ದ ಕ್ಯಾಮ್ ಗ್ರೀನ್ ಹಾಗೂ ಅಂಗ್‌ಕ್ರಿಶ್ ರಘುವಂಶಿ 10 ರನ್ ಗಳಿಸಿ ಔಟ್ ಆದರು. ರೊವ್‌ಮನ್ ಪೊವೆಲ್ 23 ಹಾಗೂ ರಮಣ್‌ದೀಪ್ ಸಿಂಗ್ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಅಲ್ಲಿಗೆ 85 ರನ್‌ಗೆ 6 ವಿಕೆಟ್ ಕಳೆದುಕೊಂಡ ಕೆಕೆಆರ್ ಪರ ಏಳನೇ ವಿಕೆಟ್‌ಗೆ ಜತೆಯಾದ ರಿಂಕು ಸಿಂಗ್ ಹಾಗೂ ಅನುಕುಲ್ ರಾಯ್ 76 ರನ್‌ಗಳ ಅಜೇಯ ಜತೆಯಾಟವನ್ನಾಡಿ ತಂಡಕ್ಕೆ ಗೆಲುವು ತಂದಿಟ್ಟರು. ಅನುಕುಲ್ ರಾಯ್ ಅಜೇಯ 29 ರನ್ ಹಾಗೂ ರಿಂಕು ಸಿಂಗ್ 34 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ರವೀಂದ್ರ ಜಡೇಜಾ ಎರಡು ವಿಕೆಟ್, ಜೋಫ್ರಾಆರ್ಚರ್, ನಾಂದ್ರೆ ಬರ್ಗರ್, ರವಿ ಬಿಷ್ಣೋಯಿ ಹಾಗೂ ಯಶ್ ರಾಜ್ ಪೂಂಜಾ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular