HomeIndia'ಸಾರಾಭಾಯ್ ವರ್ಸಸ್ ಸಾರಾಭಾಯ್' ನಟಿ ವೈಭವಿ ಅಪಘಾತದಲ್ಲಿ ಸಾವು

‘ಸಾರಾಭಾಯ್ ವರ್ಸಸ್ ಸಾರಾಭಾಯ್’ ನಟಿ ವೈಭವಿ ಅಪಘಾತದಲ್ಲಿ ಸಾವು

ಬಣ್ಣದ ಲೋಕಕ್ಕಿಂದು ಬ್ಲ್ಯಾಕ್ ಡೇ. ಕಳೆದ ಮೂರ್ನಾಲ್ಕು ದಿನದಿಂದ ನಟರ ಸರಣಿ ಸಾವಿನ ಸುದ್ದಿಗಳು ಅಪ್ಪಳಿಸುತ್ತಿವೆ. ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಜನಪ್ರಿಯ ಟಿವಿ ಶೋ ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟಿ ವೈಭವಿ ಉಪಾಧ್ಯಾಯ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಈ ಆಘಾತದ ಸುದ್ದಿಯನ್ನ ನಿರ್ಮಾಪಕ ಜೆಡಿ ಮಜೇಥಿಯಾ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ನಲ್ಲಿ ಈ ಬಗ್ಗೆ ನೋವು ತೋಡಿಕೊಂಡಿರೋ ಅವರು ಉತ್ತರ ಭಾರತದಲ್ಲಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

“ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಸಾರಾಭಾಯಿ ವರ್ಸಸ್ ಸಾರಾಭಾಯಿಯಲ್ಲಿ ಜಾಸ್ಮಿನ್ ಎಂದು ಜನಪ್ರಿಯವಾಗಿರುವ ಅತ್ಯಂತ ಉತ್ತಮ ನಟಿ, ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯ ನಿಧನರಾಗಿದ್ದಾರೆ. ಅವರು ಉತ್ತರ ಭಾರತದಲ್ಲಿ ಅಪಘಾತಕ್ಕೀಡಾದರು. ಕುಟುಂಬವು ನಾಳೆ ಬೆಳಿಗ್ಗೆ 11 ಗಂಟೆಗೆ ಅವರ ಮೃತದೇಹವನ್ನು ಮುಂಬೈಗೆ ತರುತ್ತದೆ. RIP ವೈಭವಿ” ಎಂದು ಪೋಸ್ಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈಭವಿ 2020 ರಲ್ಲಿ ‘ಛಪಾಕ್’ ಚಿತ್ರ ಮತ್ತು ‘ತಿಮಿರ್’ (2023) ನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಕೆಲಸ ಮಾಡಿದ್ದರು.

ಮೇ 22 ರಂದು ಮುಂಬೈನ ಅಂಧೇರಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನಟ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾದ ಕೆಲವೇ ದಿನಗಳ ನಂತರ ವೈಭವಿ ಸಾವಿನ ಸುದ್ದಿ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular