HomeKarnatakaನಿವೃತ್ತಿ ನಂತರವೂ ಸರ್ಕಾರದಿಂದ ಆರೋಗ್ಯ ಭದ್ರತೆ: ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆ ಜಾರಿ

ನಿವೃತ್ತಿ ನಂತರವೂ ಸರ್ಕಾರದಿಂದ ಆರೋಗ್ಯ ಭದ್ರತೆ: ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆ ಜಾರಿ

ಬೆಂಗಳೂರು: ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ವಾರ್ಷಿಕ ₹5 ಲಕ್ಷದವರೆಗೆ ನಗದು ರಹಿತ ಆರೋಗ್ಯ ಸೇವೆ ಒದಗಿಸುವ ಈ ಯೋಜನೆಯಿಂದ ಮೊದಲ ಹಂತದಲ್ಲಿ 4.93 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಇದು ಪಿಂಚಣಿದಾರರ ಆರೋಗ್ಯ ರಕ್ಷಣೆಗೆ ಸರ್ಕಾರದ ಭರವಸೆಯ ಹೆಜ್ಜೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಧ್ಯಾ ಕಿರಣ ನಗದುರಹಿತ ಆರೋಗ್ಯ ಯೋಜನೆ ಜಾರಿ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ಪಿಂಚಣಿದಾರರ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.5.00 ಲಕ್ಷಗಳವರೆಗೆ ವಂತಿಕೆ ಆಧಾರಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ನೀತಿಯನ್ವಯ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆಯನ್ನು ಈ ಕೆಳಕಂಡ ಅಂಶ /ಮಾರ್ಗಸೂಚಿಗಳೊಂದಿಗೆ ಜಾರಿಗೆ ತರಲು ಅನುಮೋದನೆ ನೀಡಿ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ವೈದ್ಯಕೀಯ ಹಾಜರಾತಿ ನಿಯಮಗಳು 1969 ರ ಪ್ರಕಾರ ಪಿಂಚಣಿದಾರರ ಕುಟುಂಬದ ವ್ಯಾಖ್ಯಾನ ಕೆಳಗಿನಂತಿದೆ

ನಿವೃತ್ತ ಪಿಂಚಣಿದಾರರು. ‘ಕರ್ನಾಟಕ ಸರ್ಕಾರದ ಪಿಂಚಣಿದಾರ’ ಎಂದರೆ 01 ನವೆಂಬರ್ 1956ರ ನಂತರ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ ಕರ್ನಾಟಕ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ವ್ಯಕ್ತಿ.

ಕುಟುಂಬ ಪಿಂಚಣಿದಾರರ ಪತಿ ಅಥವಾ ಪತ್ನಿ

2. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ AB. ArK ನಿಯಮಾವಳಿಗಳ ಪ್ರಕಾರ ಪಟ್ಟಿ ಮಾಡಲಾದ ಆಸ್ಪತ್ರೆಗಳ ಮೂಲಕ ರೆಫರಲ್ ಆಧಾರದ ಮೇಲೆ ಆರ್ಥಿಕ ಸಹಭಾಗಿತ್ವದ ನಗದುರಹಿತ ಆರೋಗ್ಯ ಸೌಲಭ್ಯವನ್ನು ವಿಸ್ತರಿಸುವುದು ಹಾಗೂ ಈ ಯೋಜನೆಯಲ್ಲಿ ಒಟ್ಟು ವೆಚ್ಚದ 70% ಅನ್ನು(ವಂತಿಕೆ ಮೂಲಕ) ಪಿಂಚಣಿದಾರರು ಮತ್ತು ಉಳಿದ 30% ಅನ್ನು ಸರ್ಕಾರ ಭರಿಸುವುದು.

3. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿಯಮಿತ ಪಿಂಚಣಿದಾರರಿಂದ 1.25% ಹಾಗೂ ಕುಟುಂಬ ಪಿಂಚಣಿದಾರರಿಂದ 0.75% ಮೂಲ ಪಿಂಚಣಿಯ ಆಧಾರದ ಮೇಲೆ ವಂತಿಕ ಮೊತ್ರವನ್ನು ಸಂಬಳ ವಿತರಣೆ ಅಥವಾ ಖಜಾನೆ ಮಟ್ಟದಲ್ಲಿ ವಸೂಲಿ ಮಾಡಿ SAST ಗೆ ಜಮಾ ಮಾಡುವುದು. SAST ಸಂಸ್ಥೆಯು 2% ಆಡಳಿತ ವೆಚ್ಚವನ್ನು ಒಳಗೊಂಡಂತೆ ಈ ನಿಧಿಯನ್ನು ಬಳಸಿಕೊಳ್ಳಬಹುದು. ಯೋಜನೆ ಜಾರಿಗೆ ಬಂದ ನಂತರ ಅಗತ್ಯವಿದ್ದಲ್ಲಿ ವಂತಿಕೆ ಪ್ರಮಾಣವನ್ನು ತಿದ್ದುಪಡಿ ಮಾಡಬಹುದಾಗಿದೆ.

4. ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಯೋಜನೆಯ ಅನುದಾನದ ಬಳಕೆಯ ಅನುಪಾತವು (ಒಟ್ಟು ಸಂಗ್ರಹಿತ ನಿಧಿಗೆ ಹೋಲಿಸಿದಾಗ ಬಳಸಿದ ವಿಧಿಯ ಪ್ರಮಾಣ) 25% ಕ್ಕಿಂತ ಅಧಿಕವಾದಲ್ಲಿ ನಿವೃತ್ತ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಂದ ಸಂಗ್ರಹಿಸುವ ವಂತಿಕೆಯನ್ನು ಶೇಕಡ 0.05% ಪ್ರಮಾಣದಲ್ಲಿ ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸರ್ಕಾರ) ವತಿಯಿಂದ ಕೈಗೊಳ್ಳತಕ್ಕದ್ದು.

5. ಈ ಯೋಜನೆಗೆ ವಂತಿಕೆ ನೀಡಲು ಇಚ್ಛಿಸುವ ಈಗಾಗಲೇ ನಿವೃತ್ತರಾಗಿರುವ ಪಿಂಚಣಿದಾರರ ನೋಂದಣಿಗಾಗಿ ಮೂರು ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ನಂತರ ನಿವೃತ್ತಿಯಾಗುವ ಪಿಂಚಣಿದಾರರು ನಿವೃತ್ತಿಯ ದಿನಾ೦ಕದಿಂದ ಎರಡು ತಿಂಗಳೊಳಗಾಗಿ ನೋಂದಾಯಿಸಿಕೊಳ್ಳಬೇಕು; ವಿಫಲವಾದಲ್ಲಿ ಅವರು ಅನರ್ಹರಾಗುತ್ತಾರೆ.

6. ರಾಜ್ಯ ಸರ್ಕಾರದ ವರ್ಷದ ಪಾಲನ್ನು ಒಟ್ಟು ನಿಧಿಯು ಅದರ ವಾರ್ಷಿಕ ಬಳಕೆಯ ಮಟ್ಟದ ಶೇಕಡಾ 80 ರಷ್ಯನ್ನು ತಲುಪಿದಾಗ ಮಾತ್ರ ಬಿಡುಗಡೆ ಮಾಡಲಾಗುವುದು.

7. ಲಭ್ಯವಿರುವ ಆರ್ಥಿಕ ಮಿತಿಯೊಳಗೆ ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸಲು ಮತ್ತು ಅದರ ಲಭ್ಯತೆಯನ್ನು ಹೆಚ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆಯ ಅನುಮತಿಯೊಂದಿಗೆ, ನಿರ್ದಿಷ್ಟಪಡಿಸದ ಅಥವಾ ಹೊಸ ಚಿಕಿತ್ಸಾ ವಿಧಾನಗಳನ್ನು ಸೇರ್ಪಡೆಗೊಳಿಸುವಿಕೆ ಸೇರಿದಂತೆ ಯೋಜನೆಯ ಜಾರಿ ಅವಧಿಯಲ್ಲಿನ ಆರೋಗ್ಯ ಸೇವೆಗಳ ಬಳಕೆ ಮಾದರಿ ಮತ್ತು ಯೋಜನೆಯ ಅನುಭವಗಳ ಆಧಾರದ ಮೇಲೆ ನೀತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಕ್ರಮವಹಿಸತಕ್ಕದ್ದು.

8. ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಬಳಕೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ವಂತಿಕೆ ಮೊತ್ತದಲ್ಲಿ ತಿನ್ನುಪಡಿ ಮಾಡುವ ಅಧಿಕಾರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ,ಆರೋಗ್ಯ ಮತ್ತು కుటుంబ ಕಲ್ಯಾಣ ಇಲಾಖೆರವರಿಗೆ ಪ್ರತ್ಯಾಯೋಜಿಸಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 749 ವೆಚ್ಚ-5/2025, ದಿನಾಂಕ: 23-06-2026 ರಲ್ಲಿ ನೀಡಿರುವ ಸಹಮತಿ ಹಾಗೂ ಸಚಿವ ಸಂಪುಟ ನಿರ್ಣಯ ಸಂಖ್ಯೆ: ಸಿ-388/2026, ದಿನಾಂಕ: 10-06-2026ರಲ್ಲಿ ನೀಡಿರುವ ಅನುಮೋದನೆಯಗಳನ್ನಯ ಹೊರಡಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular