ಬೆಂಗಳೂರು: ರಾತ್ರಿ ವೇಳೆ ಆಟೋ ಅಥವಾ ಕ್ಯಾಬ್‌ನಲ್ಲಿ ಹೋಗುವಾಗ ಭಯವಾಗುತ್ತಿದೆಯೇ? ಚಾಲಕರು ಲೊಕೇಶನ್ ಬದಲಿಸಲು ಹೇಳಿದಾಗ ಆತಂಕವಾಗುತ್ತಿದೆಯೇ? ನಿಮ್ಮ ಈ ಎಲ್ಲ ಸಮಸ್ಯೆಗಳಿಗೆ ಈಗ ಸಖಿ ಆಟೋ ಪರಿಹಾರ ನೀಡುತ್ತಿದೆ. ಕೇವಲ 24 ವರ್ಷದ ಯುವ ಉದ್ಯಮಿ ಕೃಷ್ಣವಿ ಪರೇಖ್ ಅವರ ಕನಸಿನ ಕೂಸು ಈಗ ಸಿಲಿಕಾನ್ ಸಿಟಿಯಲ್ಲಿ ನನಸಾಗುತ್ತಿದೆ.ಕೇವಲ ಮಹಿಳೆಯರಿಗಾಗಿಯೇ, ಮಹಿಳೆಯರಿಂದಲೇ ನಡೆಸಲ್ಪಡುವ ಸಖಿ (Sakhi) ಆಟೋ ಸೇವೆ ಫೆಬ್ರವರಿ 14 ರಿಂದ ಅಧಿಕೃತವಾಗಿ ರಸ್ತೆಗಿಳಿಯುತ್ತಿದೆ.ಮನೆಯ ಜವಾಬ್ದಾರಿ ಹೊತ್ತಿರುವ ಆರ್ಥಿಕ ಸ್ವಾತಂತ್ರ್ಯ ಬಯಸುವ ಮಹಿಳೆಯರಿಗೆ ಇದು ದೊಡ್ಡ ಆಸರೆಯಾಗಿದೆ.
ಐಡಿಯಾ ಬಂದಿದ್ದು ಹೇಗೆ?
ಸಂಸ್ಥಾಪಕಿ ಕೃಷ್ಣವಿ ಪರೇಖ್ ಅವರು ಮುಂಬೈನಲ್ಲಿ ಕೆಲಸ ಮಾಡುವಾಗ ಅನುಭವಿಸಿದ ಸಂಕಷ್ಟಗಳೇ ಈ ಸಖಿ ಹುಟ್ಟಲು ಕಾರಣ. ಪುರುಷರ ಹಿಂದೆ ಬೈಕ್‌ನಲ್ಲಿ ಕೂರುವುದು ಅಥವಾ ರಾತ್ರಿ ವೇಳೆ ಕ್ಯಾಬ್ ಚಾಲಕರು ನಿಗದಿಪಡಿಸಿದ ಜಾಗ ಬಿಟ್ಟು ಬೇರೆಡೆ ಬರಲು ಹೇಳಿದಾಗ ನನಗೆ ತುಂಬಾ ಭಯವಾಗುತ್ತಿತ್ತು, ಎನ್ನುವ ಕೃಷ್ಣವಿ, ಆ ಭಯವನ್ನು ಹೋಗಲಾಡಿಸಲು ಈ ಯೋಜನೆಯನ್ನು ರೂಪಿಸಿದ್ದಾರೆ
ಏನಿದು ಸಖಿ ಸ್ಪೆಷಾಲಿಟಿ?
ಮುಂಬೈನಲ್ಲಿ ಓದುತ್ತಿದ್ದಾಗ ತಮಗಾದ ಕಹಿ ಅನುಭವಗಳಿಂದ ಪಾಠ ಕಲಿತ ಕೃಷ್ಣವಿ, ಮಹಿಳೆಯರಿಗಾಗಿಯೇ ಒಂದು ವಿಶೇಷ ವೇದಿಕೆ ಸಿದ್ಧಪಡಿಸಿದ್ದಾರೆ. ಇದರ ಹೈಲೈಟ್ಸ್ ಇಲ್ಲಿದೆ:
ನೋ ಸರ್ಜ್ ಪ್ರೈಸಿಂಗ್ (Surge Pricing): ಮಳೆ ಬರಲಿ ಅಥವಾ ಟ್ರಾಫಿಕ್ ಇರಲಿ, ಇಲ್ಲಿ ದರ ಏರಿಕೆಯ ಕಾಟವಿಲ್ಲ
ಕನಿಷ್ಠ ದರ: ಮೊದಲ 2 ಕಿ.ಮೀಗೆ ಕೇವಲ 50 ರೂ., ನಂತರದ ಪ್ರತಿ ಕಿ.ಮೀಗೆ 20 ರೂ. ನಿಗದಿಪಡಿಸಲಾಗಿದೆ.
ಕಾರ್ಯನಿರ್ವಹಣಾ ಸಮಯ: ಸದ್ಯಕ್ಕೆ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ ಲಭ್ಯವಿದ್ದು, ಬೇಡಿಕೆ ಹೆಚ್ಚಾದರೆ 24 ಗಂಟೆಯೂ ಸೇವೆ ನೀಡುವ ಪ್ಲಾನ್ ಇದೆ.
ಬುಕಿಂಗ್ ಹೇಗೆ?: ಮೊಬೈಲ್ ಆಪ್ ಸದ್ಯಕ್ಕೆ ಸಿದ್ಧವಾಗುತ್ತಿದೆ. ಸದ್ಯಕ್ಕೆ ನೀವು Web App ಅಥವಾ WhatsApp ಮೂಲಕ ಆಟೋ ಬುಕ್ ಮಾಡಬಹುದು.
ಬುಕಿಂಗ್ ಮಾಡೋದು ಸಿಂಪಲ್! ಸದ್ಯಕ್ಕೆ ಮೊಬೈಲ್ ಅಪ್ಲಿಕೇಶನ್ ರೆಡಿಯಾಗುತ್ತಿದ್ದು, ನೀವು ಈ ಕೆಳಗಿನ ಮಾರ್ಗಗಳ ಮೂಲಕ ಬುಕ್ ಮಾಡಬಹುದು:
ವೆಬ್‌ಸೈಟ್: ಗೆ ಭೇಟಿ ನೀಡಿ:ride.sakhiwomen.in.
ವಾಟ್ಸಾಪ್: 63619 33364 ನಂಬರ್‌ಗೆ ಸಂದೇಶ ಕಳುಹಿಸಿ.
ಮಹಿಳಾ ಸಬಲೀಕರಣಕ್ಕೆ ಹೊಸ ವೇದಿಕೆ
ಸದ್ಯ ಈ ಸಂಸ್ಥೆಯಲ್ಲಿ 21 ರಿಂದ 40 ವರ್ಷ ವಯಸ್ಸಿನ 50 ನುರಿತ ಮಹಿಳಾ ಚಾಲಕಿಯರಿದ್ದಾರೆ. * ಇವರು ಗಳಿಸುವ ಹಣ ಪೂರ್ತಿಯಾಗಿ ಅವರಿಗೆ ನೇರವಾಗಿ ಸಿಗುತ್ತಿದೆ (ನೋ ಕಮಿಷನ್).
ಮುಂದಿನ ದಿನಗಳಲ್ಲಿ ಟ್ರಾನ್ಸ್ ಮಹಿಳೆಯರಿಗೂ (Trans Women) ಈ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಮಾದರಿ ಎನಿಸಿಕೊಳ್ಳಲು ಸಖಿ ಸಜ್ಜಾಗಿದೆ.ಓಲಾ, ಉಬರ್ ನಡುವೆ ಸಖಿ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಅದೊಂದು ಸುರಕ್ಷತೆಯ ಭರವಸೆ. ಪ್ರಾಯೋಗಿಕ ಹಂತದಲ್ಲೇ 17 ಟ್ರಿಪ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ಸೇವೆ, ಈ ಬಾರಿಯ ವ್ಯಾಲೆಂಟೈನ್ಸ್ ಡೇ ದಿನದಿಂದ ಮಹಿಳೆಯರ ನೆಚ್ಚಿನ ಸಖಿಯಾಗುವುದರಲ್ಲಿ ಸಂಶಯವಿಲ್ಲ,ಪೈಲಟ್ ರನ್ ವೇಳೆ ಕೇವಲ ಒಂದು ವಾರದಲ್ಲಿ 17 ಯಶಸ್ವಿ ಟ್ರಿಪ್‌ಗಳನ್ನು ಪೂರೈಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈಗ ಸಖಿ ಫೋಟೋಗಳು ಫುಲ್ ವೈರಲ್ ಆಗುತ್ತಿವೆ

