HomeIndiaGOOD NEWS: ಶಬರಿಮಲೆ ಯಾತ್ರಾರ್ಥಿಗಳಿಗೆ 5 ಲಕ್ಷ ರೂ. ವಿಮೆ ಯೋಜನೆ ಜಾರಿ

GOOD NEWS: ಶಬರಿಮಲೆ ಯಾತ್ರಾರ್ಥಿಗಳಿಗೆ 5 ಲಕ್ಷ ರೂ. ವಿಮೆ ಯೋಜನೆ ಜಾರಿ

ಶಬರಿಮಲೆ: ಶ್ರೀ ಕ್ಷೇತ್ರ ಶಬರಿಮಲೆ ಯಾತ್ರಾರ್ಥಿಗಳು, ದಿನಗೂಲಿ ನೌಕರರು ಮತ್ತು ಎಲ್ಲಾ ಸಿಬ್ಬಂದಿಗೆ 5 ಲಕ್ಷ ರೂಪಾಯಿ ವಿಮೆ ಯೋಜನೆ ಜಾರಿಗೆ ತರಲಾಗಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ಅಪಘಾತ ವಿಮೆ ಒದಗಿಸಲಿದೆ.

ಒಂದು ವರ್ಷದ ಅವಧಿಯ ವಿಮೆಯಲ್ಲಿ ಆಕಸ್ಮಿಕ ಮರಣ ಸಂಭವಿಸಿದರೆ ಮೃತರ ಅವಲಂಬಿತರಿಗೆ 5 ಲಕ್ಷ ರೂಪಾಯಿ ಲಭಿಸಲಿದೆ. ತಿರುವಾಂಕೂರು ದೇವಸ್ವಂ ಮಂಡಳಿ ವತಿಯಿಂದ ವಿಮೆಯ ಪ್ರೀಮಿಯಂ ಮೊತ್ತವನ್ನು ಭರಿಸಲಾಗುತ್ತದೆ.

ಶಬರಿಮಲೆ ಸನ್ನಿಧಾನಂ ಅಥವಾ ಆಸುಪಾಸಿನಲ್ಲಿ ಯಾತ್ರಾರ್ಥಿಗಳು ಹೃದಯಾಘಾತ ಅಥವಾ ಅಪಘಾತದಿಂದ ಮೃತಪಟ್ಟಲ್ಲಿ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಮನೆಗೆ ತಲುಪಿಸಲಾಗುವುದು. ದಿನಗೂಲಿ ನೌಕರರು, ಯಾತ್ರಾರ್ಥಿಗಳು, ಎಲ್ಲಾ ಸಿಬ್ಬಂದಿಗೆ ತಿರುವಾಂಕೂರು ದೇವಸ್ವಂ ಮಂಡಳಿಯಿಂದ 5 ಲಕ್ಷ ರೂ. ವಿಮೆ ಯೋಜನೆ ಜಾರಿಗೆ ತರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular