HomeLatest NewsSHOCKING: ರೌಡಿಶೀಟರ್ ಪತಿಯ ಮೇಲೆ ಪತ್ನಿ ಮಾರಣಾಂತಿಕ ಹಲ್ಲೆ: ಕೈ ಮುರಿದು, ಕಣ್ಣಿಗೆ ಚಾಕು ಇರಿದು...

SHOCKING: ರೌಡಿಶೀಟರ್ ಪತಿಯ ಮೇಲೆ ಪತ್ನಿ ಮಾರಣಾಂತಿಕ ಹಲ್ಲೆ: ಕೈ ಮುರಿದು, ಕಣ್ಣಿಗೆ ಚಾಕು ಇರಿದು ಬುದ್ಧಿ ಹೇಳಿದ ಮೊದಲ ಹೆಂಡತಿ

ಬೆಂಗಳೂರು: ಎಲ್ಲರೂ ರೌಡಿಶೀಟರ್ ಅಟ್ಟಹಾಸಕ್ಕೆ ನಲುಗಿ ಪೊಲೀಸರ ಮೊರೆ ಹೋದರೆ ಇಲ್ಲಿ ಪತ್ನಿ ಕೊಟ್ಟ ಏಟಿಗೆ ರೌಡಿಶೀಟರ್ ಓರ್ವ ಕಂಗಾಲಾಗಿ ಜೀವ ಉಳಿಸಿಕೊಳ್ಳಲು ಪೊಲೀಸರ ಮೊರೆ ಹೋಗಿರುವ ಘಟನೆ ಬೆಂಗಳೂರಿನ ಜೆ.ಜೆ.ನಗರದಲ್ಲಿ ನಡೆದಿದೆ.

ರೌಡಿಶೀಟರ್ ಸೈಯದ್ ಅಸ್ಗರ್ ಗೆ ಮೊದಲ ಪತ್ನಿ ಮನಬಂದಂತೆ ಥಳಿಸಿ ಕೈ ಮುರಿದು, ಕಣ್ಣಿಗೆ ಚಾಕು ಇರಿದಿದ್ದಾಳಂತೆ. ಎರಡನೇ ಹೆಂಡತಿಯನ್ನು ಬಿಟ್ಟು ತನ್ನೊಂದಿಗೆ ತೆಪ್ಪಗೆ ಇರುವಂತೆ ಬುದ್ಧಿಹೇಳಿದ್ದಾಳಂತೆ ಮೊದಲ ಪತ್ನಿಯಿಂದ ಹಲ್ಲೆಗೊಳಗಾದ ರೌಡಿಶೀಟರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಗಾಂಜಾ ಪೆಡ್ಲಿಂಗ್, ಕಳ್ಳತನ, ಕೊಲೆಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ರೌಡಿಶೀಟರ್ ಸೈಯದ್ ಅಸ್ಗರ್ ಗೆ ಸಾಲದ್ದಕ್ಕೆ ಇಬ್ಬರು ಪತ್ನಿಯರು. ಸೈಯದ್ ಅಸ್ಗರ್ ಗೆ ಈ ಹಿಂದೆ ಮೊದಲ ಪತ್ನಿ ವಿಡಿಯೋ ಮಾಡಿ ವಾರ್ನಿಂಗ್ ಕೊಟ್ಟಿದ್ದಳು. ಎರಡನೇ ಪತ್ನಿ ಸಹವಾಸ ಬಿಟ್ಟು ತನ್ನೊಂದಿಗೆ ಇರು. ಎರಡು ದಿನ ಟೈಂ ಕೊಡ್ತೀನಿ. ಇಲ್ಲವಾದಲ್ಲಿ ತಲೆ ಕಡಿಯುತ್ತೇನೆ ಎಂದು ಬೆದರಿಕೆಹಾಕಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೇಳಿದ ಎರಡೇ ದಿನಕ್ಕೆ ಪತಿ ಮೇಲೆ ಮೊದಲ ಪತ್ನಿ ಅಟ್ಯಾಕ್ ಮಾಡಿಯೇ ಬಿಟ್ಟಿದ್ದಾಳೆ. ಸೈಯದ್ ಮೇಲೆ ಹಲ್ಲೆ ನಡೆಸಿ ಕೈ ಮುರಿದಿದ್ದಲ್ಲದೇ ಚಾಕುವಿನಿಂದ ಕಣ್ಣಿಗೆ ಇರಿದಿದ್ದಾಳೆ. ಪತ್ನಿಯಿಂದ ತಪ್ಪಿಸಿಕೊಂಡು ಬಂದ ಸಯ್ಯದ್ ಅಸ್ಗರ್ ಪೊಲೀಸ್ ಠಾಣೆಗೆ ಬಂದು ತನಗೆ ರಕ್ಷಣೆ ನೀಡುವಂತೆ ಕೋರಿದ್ದಾನೆ. ಮೊದಲ ಪತ್ನಿ ರುದ್ಧ ದೂರು ದಾಖಲಿಸಿದ್ದಾನೆ. ಆತನಗೆ ಎರಡನೇ ಹೆಂಡತಿಯೂ ಸಾಥ್ ನೀಡಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

Most Popular