ಬೆಂಗಳೂರು: ತರಕಾರಿ ವ್ಯಾಪಾರಿಯ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳಮುಖಿ ನಿಶಾಳನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ಪ್ರಕರಣದಲ್ಲಿ ಮಂಗಳಮುಖಿ ನಿಶಾಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ತರಕಾರಿ ವ್ಯಾಪಾರಿ ವೇಣು ಎಂಬುವವರ ವಾಹನ ಅಡ್ಡಗಟ್ಟಿ ನಿಶಾ ದರೋಡೆ ಮಾಡಿ ಹಣ ದೋಚಿ ಪರಾರಿಯಾಗಿದ್ದಳು.
ಜನವರಿ 23ರಂದು ಆಂಧ್ರಪ್ರದೇಶದ ಅನಂತಪುರದಿಂದ ವೇಣು ಬೆಂಗಳೂರೂರಿಗೆ ತರಕಾರಿ ತಂದಿದ್ದರು. ಮಾರ್ಕೆಟ್ ನಲ್ಲಿ ತರಕಾರಿ ಇಳಿಸಿ ಬೊಲೆರೋ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಟಿ.ಬೇಗೂರಿನಲ್ಲಿ ವಾಅಹನವನ್ನು ಅಡ್ಡಗಟ್ಟಿದ್ದ ಮಂಗಳಮುಖಿ ನಿಶಾ, ವೇಣು ಮೇಲೆ ಹಲ್ಲೆ ನಡೆಸಿ 38 ಸಾವಿರ ರೂಪಾಯಿ ಹಣ ದೋಚಿ ಎಸ್ಕೇಪ್ ಆಗಿದ್ದಳು.
ಈ ಬಗ್ಗೆ ವೇಣು ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಮಂಗಳಮುಖಿ ನಿಶಾಳನ್ನು ಬಂಧಿಸಿದ್ದಾರೆ.

