HomeUncategorizedಕಾರು ಬೇಡ ಅಂದ್ರೆ ನಂಬರ್ ಪ್ಲೇಟ್ ಕೊಡಿ: ಅನಾಥ ಬಿಎಂಡಬ್ಲ್ಯು ಕಂಡು ನೆಟ್ಟಿಗರ ತಮಾಷೆ, ಅಸಲಿ...

ಕಾರು ಬೇಡ ಅಂದ್ರೆ ನಂಬರ್ ಪ್ಲೇಟ್ ಕೊಡಿ: ಅನಾಥ ಬಿಎಂಡಬ್ಲ್ಯು ಕಂಡು ನೆಟ್ಟಿಗರ ತಮಾಷೆ, ಅಸಲಿ ವಿಷಯ ಬೇರೆಯೇ ಇದೆ

ಮುಂಬೈನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿರುವ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 (BMW X7) ಕಾರಿನ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸುಮಾರು 1.5 ರಿಂದ 1.7 ಕೋಟಿ ರೂಪಾಯಿ ಬೆಲೆಬಾಳುವ ಈ ಕಾರು ಕಳೆದ ಕೆಲವು ವಾರಗಳಿಂದ ರಸ್ತೆ ಬದಿಯಲ್ಲಿ ದೂಳು ಹಿಡಿಯುತ್ತಾ ನಿಂತಿದೆ. ಕೇವಲ ಎರಡು ವರ್ಷ ಹಳೆಯದಾದ ಈ ಕಾರಿನ ಸ್ಥಿತಿ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಈ ಕಾರಿನ ಮತ್ತೊಂದು ವಿಶೇಷವೆಂದರೆ ಅದರ ನೋಂದಣಿ ಸಂಖ್ಯೆ. ಈ ಐಷಾರಾಮಿ ಎಸ್‌ಯುವಿ ‘0001’ ಎಂಬ ವಿಐಪಿ ನಂಬರ್ ಪ್ಲೇಟ್ ಹೊಂದಿದ್ದು, ಈ ನಂಬರ್ ಪಡೆಯಲು ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಇಷ್ಟು ದುಬಾರಿ ಕಾರು ಮತ್ತು ನಂಬರ್ ಪ್ಲೇಟ್ ಹೊಂದಿದ್ದರೂ ಕಾರು ರಸ್ತೆಯಲ್ಲಿ ಅನಾಥವಾಗಿ ನಿಂತಿರುವುದನ್ನು ನೋಡಿ ನೆಟ್ಟಿಗರು “ಕಾರು ಬೇಡದಿದ್ದರೆ ಆ ನಂಬರ್ ಅನ್ನಾದರೂ ನನಗೆ ಕೊಡಿ” ಎಂದು ತಮಾಷೆ ಮಾಡುತ್ತಿದ್ದಾರೆ.

ಯಾರಿದು ಕಾರಿನ ಮಾಲೀಕ? ಅನಾಥವಾಗಿ ನಿಲ್ಲಲು ಕಾರಣವೇನು? ವರದಿಗಳ ಪ್ರಕಾರ, ಈ ಕಾರನ್ನು ಯಾರೂ ಕೈಬಿಟ್ಟಿಲ್ಲ, ಬದಲಾಗಿ ಇದನ್ನು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕಾರು ಆಶೀಶ್ ದಿನೇಶ್ ಕುಮಾರ್ ಶಾ ಎಂಬುವವರಿಗೆ ಸೇರಿದ್ದಾಗಿದೆ. ಸುಮಾರು 400ಕ್ಕೂ ಹೆಚ್ಚು ಹೂಡಿಕೆದಾರರಿಗೆ 170 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಶೀಶ್ ಶಾ ತಾನು ಸೆಬಿ (SEBI) ನೋಂದಾಯಿತ ಏಜೆಂಟ್ ಎಂದು ಸುಳ್ಳು ಹೇಳಿ, ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ. 84 ರಷ್ಟು ಬಡ್ಡಿ ನೀಡುವುದಾಗಿ ಜನರನ್ನು ನಂಬಿಸಿದ್ದನು. ಆರಂಭದಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭ ನೀಡಿ ನಂಬಿಕೆ ಗಳಿಸಿದ ಈತ, ನಂತರ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದನು. ತಾನು ಐಷಾರಾಮಿ ಜೀವನ ನಡೆಸುತ್ತಿರುವ ಫೋಟೋಗಳನ್ನು ಜನರಿಗೆ ತೋರಿಸಿ ನಂಬಿಸುತ್ತಿದ್ದನು ಎನ್ನಲಾಗಿದೆ.

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದು, ಆತನಿಗೆ ಸೇರಿದ ಚಿನ್ನ, ನಗದು ಹಾಗೂ ಈ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಕಾರಣ ಈ ಕೋಟಿ ಬೆಲೆಯ ಕಾರು ಈಗ ಮುಂಬೈ ರಸ್ತೆಯ ಬದಿಯಲ್ಲಿ ದೂಳು ತಿನ್ನುತ್ತಾ ನಿಂತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular