HomeLatest Newsಕ್ರಿಕೆಟಿಗ ರಿಂಕು ಸಿಂಗ್ ತಂದೆ ಇನ್ನಿಲ್ಲ: ಸಿಲಿಂಡರ್ ಡೆಲಿವರಿ ಮಾಡಿ ಮಗನ ಭವಿಷ್ಯ ಕಟ್ಟಿದ್ದ ತಂದೆ;...

ಕ್ರಿಕೆಟಿಗ ರಿಂಕು ಸಿಂಗ್ ತಂದೆ ಇನ್ನಿಲ್ಲ: ಸಿಲಿಂಡರ್ ಡೆಲಿವರಿ ಮಾಡಿ ಮಗನ ಭವಿಷ್ಯ ಕಟ್ಟಿದ್ದ ತಂದೆ; ವಿಡಿಯೊ

ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಓರ್ವರಾದ ರಿಂಕು ಸಿಂಗ್ ಅವರ ತಂದೆ ಖಾನ್ ಚಂದ್ ಸಿಂಗ್ ವಿಧಿವಶರಾಗಿದ್ದಾರೆ.

ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದ್ದ ಅವರು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಾ ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು. ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರ ಸ್ಥಿತಿ ಗಂಭೀರಗೊಂಡ ಕಾರಣ ಕಳೆದ ವಾರವಷ್ಟೇ ಅವರನ್ನು ವೆಂಟಿಲೇಟರ್ ವಿಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಲುವಾಗಿ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ರಿಂಕು ಸಿಂಗ್ ಜಿಂಬಾಬ್ವೇ ವಿರುದ್ಧದ ಸೂಪರ್ 8 ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿಂಕು ಸಿಂಗ್ ತಂದೆ ವಿಧಿವಶರಾಗಿದ್ದಾರೆ.

ಸದ್ಯ ರಿಂಕು ಸಿಂಗ್ ತಂದೆ ಸಿಲಿಂಡರ್ ಡೆಲಿವರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ರಿಂಕು ಸಿಂಗ್ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರ ತಂದೆ ಸಿಲಿಂಡರ್ ಡೆಲಿವರಿ ಮಾಡಿ ಕುಟುಂಬವನ್ನು ನಡೆಸಿ ಮಗ ಅಂತರರಾಷ್ಟ್ರೀಯ ಕ್ರಿಕೆಟಿಗನಾಗುವಲ್ಲಿ ಮಹತ್ವದ ಕೊಡುಗೆ ನೀಡಿದವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಣ್ಣ ವಯಸ್ಸಿನಲ್ಲಿ ರಿಂಕು ಸಿಂಗ್ ಕ್ರಿಕೆಟ್ ಆಡಲು ಹೋದರೆ ಅದನ್ನು ಕಂಡ ಅವರ ತಂದೆ ಅದೆಲ್ಲಾ ವ್ಯರ್ಥ ಎಂದು ಬಯ್ಯುತ್ತಿದ್ದರಂತೆ ಹಾಗೂ ಹಲವಾರು ಬಾರಿ ಥಳಿಸಿದ್ದು ಉಂಟು ಎಂದು ರಿಂಕು ಸಿಂಗ್ ಹೇಳಿಕೊಂಡಿದ್ದರು. ಆದರೂ ಛಲ ಬಿಡದೆ ರಿಂಕು ಸಿಂಗ್ ಕ್ರಿಕೆಟ್ ಅಭ್ಯಾಸ ಮಾಡುತ್ತಾ ಬಂದಿದ್ದು ದಿನ ಕಳೆದಂತೆ ಅವರ ತಂದೆ ಮಗನಿಗೆ ಬೆಂಬಲ ನೀಡಲು ಆರಂಭಿಸಿದ್ದರು. ಬೆವರು ಹರಿಸಿ ಸಂಪಾದನೆ ಮಾಡಿ ಮಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸಂದರ್ಭವನ್ನು ಸಂಪೂರ್ಣವಾಗಿ ಅನುಭವಿಸುವ ಮುನ್ನವೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular