HomeLatest NewsBREAKING: ಜಿಮ್ ಟ್ರೇನರ್ ಗೆ ಪ್ರೇಯಸಿಯಿಂದಲೇ ಚಾಕು ಇರಿತ

BREAKING: ಜಿಮ್ ಟ್ರೇನರ್ ಗೆ ಪ್ರೇಯಸಿಯಿಂದಲೇ ಚಾಕು ಇರಿತ

ರಾಮನಗರ: ಜಿಮ್ ಟ್ರೇನರ್ ಗೆ ಪ್ರೇಯಸಿಯೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘೋರ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನಲ್ಲಿ ನಡೆದಿದೆ.

ರಾಮನಗರದ ಬಿಡದಿಯಲ್ಲಿ ಈ ಘಟನೆ ನಡೆದಿದೆ. ಜಿಮ್ ತರಬೇತುದಾರ ವೇಣುಗೋಪಾಲ್ (27) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ವೇಣುಗೋಪಾಲ್ ಪ್ರೇಯಸಿ ಸುಧಾ ಎಂಬುವವಳು ಚಾಕುವಿಂದ ಇರಿದು ಹಲ್ಲೆ ನಡೆಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೇಣುಗೋಪಾಲ್ ಹಾಗೂ ಸುಧಾ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪವುಂಟಾಗಿತ್ತು. ಇದೀಗ ಏಕಾಏಕಿ ಪ್ರಿಯಕರನ ಮೇಲೆಯೇ ಸುಧಾ ಚಾಕು ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ವೇಣುಗೋಪಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular