HomeLifestyleನೂರು ಕೋಟಿ ಆಸ್ತಿ ಇದ್ದರೂ ಆಟೋದಲ್ಲಿ ಸವಾರಿ: ಈ ಕುಬೇರನ ಸರಳ ಜೀವನ ಕಂಡು ನೆಟ್ಟಿಗರು...

ನೂರು ಕೋಟಿ ಆಸ್ತಿ ಇದ್ದರೂ ಆಟೋದಲ್ಲಿ ಸವಾರಿ: ಈ ಕುಬೇರನ ಸರಳ ಜೀವನ ಕಂಡು ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಕೋಟ್ಯಂತರ ರೂಪಾಯಿ ಹಣ ಕೈಗೆ ಬಂದಾಗ ಮನುಷ್ಯನ ಜೀವನಶೈಲಿ ಸಂಪೂರ್ಣ ಬದಲಾಗುತ್ತದೆ. ಐಷಾರಾಮಿ ಕಾರುಗಳು, ದೊಡ್ಡ ಬಂಗಲೆ ಮತ್ತು ದುಬಾರಿ ಹೋಟೆಲ್ ಗಳ ವಾಸ ಇವರ ದಿನಚರಿಯ ಭಾಗವಾಗುತ್ತದೆ. ಆದರೆ ಉದ್ಯಮಿಯೊಬ್ಬರು ಸುಮಾರು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆಸ್ತಿ ಹೊಂದಿದ್ದರೂ ಸಹ ಸಾಮಾನ್ಯ ಮನುಷ್ಯನಂತೆ ಬದುಕುತ್ತಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಸರಳ ಜೀವನದ ಕಥೆ ರವಿ ಹಂದಾ ಎಂಬ ಉದ್ಯಮಿಯೊಬ್ಬರು ಹಣ ಮತ್ತು ಜೀವನಶೈಲಿಯ ಬಗ್ಗೆ ಹಂಚಿಕೊಂಡ ಪೋಸ್ಟ್ ಗೆ ಪ್ರತಿಕ್ರಿಯಿಸಿದ ವಿನೋದ್ ಚೆಂದಿಲ್ ಅವರು ತಮ್ಮ ಸ್ನೇಹಿತನ ಉದಾಹರಣೆ ನೀಡಿದ್ದಾರೆ. ಚೆಂದಿಲ್ ಅವರ ಈ ಸ್ನೇಹಿತ ನೂರು ಕೋಟಿ ರೂಪಾಯಿ ನಿವ್ವಳ ಮೌಲ್ಯದ ಒಡೆಯನಾಗಿದ್ದರೂ ಇಂದಿಗೂ ಮುಂಬೈಗೆ ಬಂದಾಗ ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲದೆ ಹಂಚಿಕೆಯ ಆಟೋ ಮತ್ತು ಟ್ಯಾಕ್ಸಿಗಳನ್ನು ಬಳಸುವ ಇವರು ಸಾಮಾನ್ಯ ಹೋಟೆಲ್ ಗಳಲ್ಲಿ ಉಳಿದುಕೊಳ್ಳುತ್ತಾರೆ. ಈವರೆಗೆ ಯಾವುದೇ ಐಷಾರಾಮಿ ಕಾರನ್ನು ಇವರು ಖರೀದಿಸಿಲ್ಲ ಎನ್ನುವುದು ವಿಶೇಷ.

ಇಂಟರ್ನೆಟ್ ನಲ್ಲಿ ಪರ-ವಿರೋಧ ಚರ್ಚೆ ಈ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರ ಅಭಿಪ್ರಾಯಗಳು ಎರಡು ಭಾಗವಾಗಿವೆ. ಕೆಲವರು ಈ ಸರಳತೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಇದನ್ನು ಟೀಕಿಸಿದ್ದಾರೆ. ಹಣ ಎನ್ನುವುದು ಜೀವನವನ್ನು ಸುಲಭವಾಗಿಸುವ ಸಾಧನ, ಅಷ್ಟು ಹಣವಿದ್ದರೂ ಕಷ್ಟಪಟ್ಟು ಆಟೋದಲ್ಲಿ ಹೋಗುವುದು ಅರ್ಥಹೀನ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಜೀವನದ ಸಂತೋಷವಲ್ಲ, ಬದಲಾಗಿ ದುಸ್ಥಿತಿ ಎಂದು ಅಣಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ಭಾರತದಲ್ಲಿ ಇಂತಹ ಉದಾಹರಣೆಗಳು ಸಾಮಾನ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಬೀದಿಗಳಲ್ಲಿ ಬಿಲಿಯನೇರ್ ಗಳು ಕೂಡ ಸಾಮಾನ್ಯ ಹವಾಯಿ ಚಪ್ಪಲಿ ಧರಿಸಿ ಓಡಾಡುವುದನ್ನು ಕಾಣಬಹುದು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಿಪರೀತ ಶ್ರೀಮಂತಿಕೆಯ ನಡುವೆಯೂ ಹಳೆಯ ಅಭ್ಯಾಸಗಳನ್ನು ಉಳಿಸಿಕೊಂಡಿರುವುದು ಅವರ ವೈಯಕ್ತಿಕ ಆಯ್ಕೆ ಮತ್ತು ಅದರಲ್ಲಿಯೇ ಅವರು ನೆಮ್ಮದಿ ಕಾಣುತ್ತಿದ್ದಾರೆ ಎಂಬುದು ಅವರ ಆಪ್ತರ ವಾದವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular