ನವದೆಹಲಿ: ದೇಶದಲ್ಲಿ 10, 20 ರೂ. ಮತ್ತು 50 ರೂ. ನೋಟುಗಳ ಕೊರತೆ ಇಲ್ಲವೆಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಇದೇ ವೇಳೆ ಮಾಹಿತಿ ನೀಡಿ, ಎಟಿಎಂಗಳಲ್ಲಿ ಚಿಲ್ಲರೆ ನೋಟುಗಳನ್ನು ಪೂರೈಸುವ ಪ್ರಾಯೋಗಿಕ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಡಿಜಿಟಲ್ ಪಾವತಿ ಹೆಚ್ಚಾಗುತ್ತಿದ್ದರಿಂದ ಸಣ್ಣ ಮೊತ್ತದ ನೋಟುಗಳ ಕೊರತೆ ಇದೆ ಎನ್ನುವ ಭಾವನೆ ಬರುತ್ತದೆ. ಹೀಗಾಗಿ ಎಟಿಎಂಗಳಿಂದ ಸಣ್ಣ ಮೊತ್ತದ ನೋಟುಗಳ ವಿತರಣೆ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದು, ಶೀಘ್ರವೇ ಆರಂಭಿಸಲಾಗುವುದು. ಸಾಂಪ್ರದಾಯಿಕ ಎಟಿಎಂಗಳಲ್ಲಿ ಚಿಕ್ಕ ಮೊತ್ತದ ನೋಟುಗಳು ಕೂಡ ಬರುವಂತೆ ವಿನ್ಯಾಸಗೊಳಿಸಲಾಗಿಲ್ಲ. ಹೊಸ ಮಾದರಿಯ ಯಂತ್ರಗಳ ಮೂಲಕ ಚಿಲ್ಲರೆ ನೋಟುಗಳನ್ನು ಒದಗಿಸಲಾಗುವುದು ಎಂದು ಸಚಿವ ಪಂಕಜ್ ಚೌಧರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

