ತಿರುಚನಾಪಳ್ಳಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳ ಮತ್ತು ತಮಿಳುನಾಡು ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ ಅವರು ಮಂಗಳೂರು ಸಂಪರ್ಕಿಸುವ ಎರಡು ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ರಾಮೇಶ್ವರಂ -ಮಂಗಳೂರು ಎಕ್ಸ್ ಪ್ರೆಸ್, ತಿರುನಲ್ವೇಲಿ- ಮಂಗಳೂರು ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆಯುವ ಸಮಾರಂಭದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ. ಪವಿತ್ರ ಕ್ಷೇತ್ರ ರಾಮೇಶ್ವರಂಗೆ ನೇರವಾಗಿ ಪ್ರಯಾಣಿಸಲು ರಾಜ್ಯದ ಕರಾವಳಿ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಮಾರ್ಗವು ತಮಿಳುನಾಡು, ಕೇರಳ, ಕರ್ನಾಟಕವನ್ನು ಒಳಗೊಂಡಿದ್ದು ಮೂರು ರಾಜ್ಯದವರಿಗೂ ಅನುಕೂಲವಾಗಲಿದೆ.
ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಕೇರಳ ಮತ್ತು ತಮಿಳುನಾಡಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

