HomeKarnatakaBIG NEWS: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖಾಧಿಕಾರಿಗಳ ಎಡವಟ್ಟು: ಪೊಲೀಸರಿಗೆ ಎದುರಾಯ್ತು ಸಂಕಷ್ಟ

BIG NEWS: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖಾಧಿಕಾರಿಗಳ ಎಡವಟ್ಟು: ಪೊಲೀಸರಿಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಡವಟ್ಟು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ತನಿಖಾಧಿಕಾರಿ ಗಿರೀಶ್ ನಾಯಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳನ್ನು ಟೈಲ್ಸ್ ಇರೋ ಕ್ಯಾಬಿನ್ ಅಲ್ಲಿ ಫೋಟೋ ತೆಗೆಯಲಾಗಿತ್ತಂತೆ. ಆದರೆ, ಕಾಮಾಕ್ಷಿ ಪಾಳ್ಯದಲ್ಲಿ ಆ ರೀತಿಯ ಟೈಲ್ಸ್ ಇಲ್ಲ ಎಂದು ಹೇಳಲಾಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರೇಣಿಕಾಸ್ವಾಮಿ ಹತ್ಯೆ ಪ್ರಕರಣದ ಮೂವರು ಆರೋಪಿಗಳು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮೊಬೈಲ್ ವಶಕ್ಕೆ ಪಡೆಯುವಾಗ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದುಕೊಂಡಿಲ್ಲ. ಬೇರೊಂದು ಜಾಗದಲ್ಲಿ ವಶಕ್ಕೆ ಪಡೆದು ಅದನ್ನು ಕಾಮಾಕ್ಷಿಪಾಳ್ಯ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೋಷಾರೋಪಪಟ್ಟಿ ಸಲ್ಲಿಕೆಯಾದಾಗ ಫೋಟೋದಲ್ಲಿ ವೈಟ್ ಕಲರ್ ಟೈಲ್ಸ್ ಇದೆ. ಪೊಲೀಸ್ ಠಾಣೆಯಲ್ಲಿ ಹಳೆಯ ಮಾದರಿಯ ಮೊಜಾಕ್ ಇದೆ. ಹೀಗಾಗಿ ತನಿಖಾಧಿಕಾರಿ ಪ್ರಕರಣದ ದಾರಿ ತಪ್ಪಿಸಿದ್ದಾರೆ. ಹೀಗಾಗಿ ಖುದ್ದಾಗಿ ನ್ಯಾಯಾಧೀಶರೇ ಜೈಲಿಗೆ ಭೇಟಿ ಕೊಡಬೇಕು. ಅಲ್ಲದೇ ಸ್ಟೇಶನ್ ಸಿಸಿಟಿಯನ್ನು ವಶಕ್ಕೆ ಪಡೆಯಬೇಕು. ಬದಲಾವಣೆ ಮಾಡದಂತೆ ಎಚ್ಚರ ವಹಿಸಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಸ್ವೀಕರಿಸಿರುವ ಕೋರ್ಟ್ ವಿಚಾರಣೆ ನಿಗದಿ ಮಾಡಿದೆ. ಮುಂದಿನ ವಿಚಾರಣೆವರೆಗೂ ಸಿಸಿಟಿವಿಯನ್ನು ನಾಶಪಡಿಸದಂತೆ ಸೂಚಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular