HomeKarnatakaರೇಣುಕಾಸ್ವಾಮಿ ಹತ್ಯೆ ಪ್ರಕರಣ; ಆರೋಪಿಗಳಿಗೆ ಆಘಾತದ ಮೇಲೆ ಆಘಾತ; ದರ್ಶನ್ ಆಪ್ತ ಪ್ರದೋಶ್ ಅಜ್ಜಿ ನಿಧನ

ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಆರೋಪಿಗಳಿಗೆ ಆಘಾತದ ಮೇಲೆ ಆಘಾತ; ದರ್ಶನ್ ಆಪ್ತ ಪ್ರದೋಶ್ ಅಜ್ಜಿ ನಿಧನ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗ್ಯಾಂಗ್ ಗೆ ಆಘಾತದ ಮೇಲೆ ಆಘಾತ ಎದುರಾಗಿದೆ. ದರ್ಶನ್ ಆಪ್ತ, ಆರೋಪಿ ಪ್ರದೋಶ್ ಅಜ್ಜಿ ಸಾವನ್ನಪ್ಪಿದ್ದಾರೆ.

ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗ್ಯಾಂಗ್ ಗೆ ಕೆಲ ದಿನಗಳಿಂದ ಹತ್ತಿರದ ಸಂಬಂಧಿಗಳ ಅಗಲಿಕೆ ಮತ್ತೊಂದು ಶಾಕ್ ನೀಡಿದೆ. ಇತ್ತೀಚೆಗೆ ಆರೋಪಿಗಳಾದ ಅನು ತಂದೆ ಹಾಗೂ ರಘು ತಾಯಿ ನಿಧನ ಹೊಂದಿದ್ದರು. ಇದೀಗ ಆರೋಪಿ ಪ್ರದೋಶ್ ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಿವಾಸದಲ್ಲಿ ಪ್ರದೋಶ್ ಅಜ್ಜಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪ್ರದೋಶ್, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 14ನೇ ಆರೋಪಿಯಾಗಿದ್ದಾನೆ. ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಪ್ರದೋಶ್ ಗೆ ಅವಕಾಶ ಸಿಗುತ್ತದೆಯೇ ಕಾದುನೋಡಬೇಕಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular