HomeIndiaಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಮುಂಬೈ: ಕಟ್ಟಡದಿಂದ ಜಿಗಿದು ಎಂಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನ ಮಲಾಡ್ ನಲ್ಲಿ ನಡೆದಿದೆ.

22 ವರ್ಷದ ಧ್ರುವಿಲ್ ವೋರಾ ಮೃತ ವಿದ್ಯಾರ್ಥಿ. ಮೊದಲ ವರ್ಷದ ಎಂಬಿಎ ಓದುತ್ತಿದ್ದ ಧ್ರುವಿಲ್ ವೋರಾ, ಕಟ್ಟಡದ 7ನೇ ಮಹಡಿಯಿಮ್ದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶೈಕ್ಷಣಿಕ ಒತ್ತಡದಿಂದ ಮನೆಯ ವಸತಿ ಕಟ್ಟಡ ವಾಸುದೇವಂ ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಕೂಟರ್ ರಿಪೇರಿಗೆ ಕೊಡುವುದಾಗಿ ಹೇಳಿ ಮನೆಯಿಂದ ಹೊರಟ ಧ್ರುವಿಲ್, ಕಟ್ಟಡದ ಏಳನೇ ಮಹಡಿಗೆ ತೆರಳಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular