HomeCrimeBig Update: ರೇಣುಕಾಸ್ವಾಮಿ ಕೇಸ್‌, ದರ್ಶನ್‌ಗೆ ಬಿಗ್ ರಿಲೀಫ್‌

Big Update: ರೇಣುಕಾಸ್ವಾಮಿ ಕೇಸ್‌, ದರ್ಶನ್‌ಗೆ ಬಿಗ್ ರಿಲೀಫ್‌

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರು ನಗರದ ಕೋರ್ಟ್‌ನಲ್ಲಿ ನಡೆಯುತ್ತಿದೆ. ಶನಿವಾರ ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ನಟ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ಪ್ರಾಸಿಕ್ಯೂಷನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿತ್ತು. ರತ್ನಪ್ರಭಾ ಅವರ ಹೇಳಿಕೆಯಲ್ಲಿ ಗೊಂದಲವಿದ್ದ ಕಾರಣ ಅವರ ಪಾಟಿ ಸವಾಲಿಗೆ ಅವಕಾಶ ನೀಡಬೇಕು ಎಂದು ಕೋರಿತ್ತು.

ಆದರೆ ಕೋರ್ಟ್ ಶನಿವಾರ ಈ ಮನವಿಯನ್ನು ತಿರಸ್ಕಾರ ಮಾಡಿದೆ. ಆದ್ದರಿಂದ ನಟ ದರ್ಶನ್, ಪವಿತ್ರಾ ಗೌಡಗೆ ಈ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. 57ನೇ ಸೆಷನ್ಸ್ ನ್ಯಾಯಾಲಯ ಪ್ರಾಸಿಕ್ಯೂಷನ್ ಮನವಿ ತಿರಸ್ಕಾರ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನ್‌ಗೆ ಪ್ಲಸ್ ಪಾಯಿಂಟ್ ಹೇಗೆ?: ಪ್ರಾಸಿಕ್ಯೂಷನ್ ಪರವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಅರ್ಜಿ ವಜಾಗೊಳಿಸಿದೆ.

ರತ್ನಪ್ರಭಾ ಅವರನ್ನು ಸಾಕ್ಷಿಯಾಗಿ ಪರಿಗಣನೆ ಮಾಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ರತ್ನಪ್ರಭಾ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸಾಕ್ಷಿ ಹೇಳಿಲ್ಲ. ಉಳಿದ ಸಾಕ್ಷಿಗಳು ಸಹ ಈ ಮಾದರಿಯಲ್ಲಿಯೇ ಹೇಳಿದರೆ ದರ್ಶನ್ ಸೇರಿ ಇತರ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಲಿದ್ದು, ಖುಲಾಸೆಯಾಗುವ ಸಾಧ್ಯತೆಯೂ ಇದೆ.

ರತ್ನಪ್ರಭಾ ಪೊಲೀಸರ ಮುಂದೆ, ಕೋರ್ಟ್ ಮುಂದೆ ನೀಡಿರುವ ಎರಡು ಹೇಳಿಕೆಗಳು ಭಿನ್ನವಾಗಿದೆ. ಮಗನ ಮೊಬೈಲ್ ನಂಬರ್ ಗುರುತಿಸಲು ಸಹ ಅವರು ವಿಫಲರಾಗಿದ್ದಾರೆ. ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಿದ್ದರೆ ಪ್ರಾಸಿಕ್ಯೂಷನ್ ಪಾಟಿ ಸವಾಲು ಮಾಡುವ ಅವಕಾಶವಿತ್ತು.

ಪವಿತ್ರ ಗೌಡ ಪರ ವಕೀಲ ಎಸ್. ಬಾಲನ್ ಪಾಟಿಸವಾಲು ಮಾಡುವಾಗ ರತ್ನಪ್ರಭಾ ನೀಡಿದ್ದ ಹೇಳಿಕೆ ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದ್ದು, ತೀರ್ಪು ಹೀಗೆಯೇ ಬರಲಿದೆ ಎಂದು ಹೇಳುವುದು ಕಷ್ಟ.

2025ರ ಡಿಸೆಂಬರ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಆರಂಭವಾಗಿತ್ತು. ಬೆಂಗಳೂರಿನ 57ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಐಪಿ ನಾಯಕ್‌  ಪ್ರಕರಣ ಸಂಬಂಧ ಮುಖ್ಯ ವಿಚಾರಣೆ ಆರಂಭಿಸಿದ್ದರು. ಮೃತನ ತಂದೆ ಮತ್ತು ತಾಯಿ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ಗೌಪ್ಯ ವಿಚಾರಣೆಯಲ್ಲಿ ಸಾಕ್ಷ್ಯ ನುಡಿದಿದ್ದರು.

ಪ್ರಾಸಿಕ್ಯೂಷನ್‌ ಮೊದಲ ಸಾಕ್ಷಿಯಾಗಿ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮತ್ತು ಎರಡನೇ ಸಾಕ್ಷಿ ತಂದೆ ಕಾಶಿನಾಥಯ್ಯ ತಮ್ಮ ಸಾಕ್ಷ್ಯವನ್ನು ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಅವರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಪರ ವಕೀಲ ಬಾಲನ್‌ ರತ್ನಪ್ರಭಾ ಅವರನ್ನು ಪಾಟೀ ಸವಾಲಿಗೆ ಗುರಿಪಡಿಸಿದ್ದರು. ಹಲವು ಪ್ರಶ್ನೆಗಳಿಗೆ ರತ್ನಪ್ರಭಾ ತಮಗಿದ್ದ ಮಾಹಿತಿಯನ್ನು ಆಧರಿಸಿ ಉತ್ತರಿಸಿದ್ದರು. ಕೆಲ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂದು ತಿಳಿಸಿದ್ದರು.

ರತ್ನಪ್ರಭಾ ಅವರು 2024ರ ಜೂನ್‌ 8ರಂದು ರೇಣುಕಸ್ವಾಮಿ ಬೆಳಗ್ಗೆ ಫಾರ್ಮಸಿ ಕೆಲಸಕ್ಕೆ ಹೋಗಿದ್ದ. ಮಧ್ಯಾಹ್ನ ಕರೆ ಮಾಡಿ ಸ್ನೇಹಿತರ ಜತೆ ಊಟಕ್ಕೆ ಹೋಗುತ್ತೇನೆ, ಬರುವುದು ತಡವಾಗುತ್ತದೆ ಎಂದು ತಿಳಿಸಿದ್ದ. ಸಂಜೆ 7 ಗಂಟೆಯಾದರೂ ಮನೆಗೆ ಬರಲಿಲ್ಲ. ಕರೆ ಮಾಡಿದರೆ ಮಗನ ಮೊಬೈಲ್‌ ಸ್ವಿಚ್ಡ್‌ ಆಫ್ ಆಗಿತ್ತು ಎಂದು ಹೇಳಿದ್ದರು.

ಎಲ್ಲಿ ಹುಡುಕಿದರೂ ಮಗ ಪತ್ತೆಯಾಗಿರಲಿಲ್ಲ. ಜೂನ್‌ 10ರಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಮಗೆ ಕರೆ ಮಾಡಿ ನಿಮ್ಮ ಮಗನ ವಿಚಾರವಾಗಿ ಬೆಂಗಳೂರಿಗೆ ಬರಬೇಕು ಎಂದು ಹೇಳಿದ್ದರು. ಇದರಿಂದ ಜೂನ್‌ 11ರಂದು ಬೆಂಗಳೂರಿಗೆ ಬಂದೆವು. ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಪುತ್ರನ ಮೃತದೇಹ ತೋರಿಸಿ, ದರ್ಶನ್‌ ಮತ್ತು ತಂಡ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು ಎಂದು ರತ್ನಪ್ರಭಾ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular