HomeLifestyleಒಡೆದ ಹಾಲನ್ನು ಚೆಲ್ಲುವ ಮುನ್ನ ಇದನ್ನು ಓದಿ

ಒಡೆದ ಹಾಲನ್ನು ಚೆಲ್ಲುವ ಮುನ್ನ ಇದನ್ನು ಓದಿ

ಹಾಲು ಕಾಯಿಸಲು ಇಟ್ಟಿರುತ್ತೀರಿ, ನೋಡಿದರೆ ಸ್ವಲ್ಪ ಹೊತ್ತಿಗೆ ಒಡೆದು ಹೋಗಿರುತ್ತದೆ. ಹಾಗಾದಾಗ ಅದನ್ನು ಚೆಲ್ಲದೆ ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳನ್ನು ಪಡೆಯಬಹುದು.

* ಕಾಟೇಜ್‌ ಚೀಸ್‌ ಮಾಡಲು ಬಳಸುವ ಪ್ರಮುಖ ವಸ್ತು ಒಡೆದ ಹಾಲು. ಹಾಲು ಒಡೆದಾಗ ಹುಳಿಯಾಗುತ್ತದೆ. ಈ ಹುಳಿ ಹಾಲಿನಿಂದ ರುಚಿಕರವಾದ ಕಾಟೇಜ್‌ ಚೀಸ್‌ ತಯಾರಿಸಬಹುದು.

* ಟೈಫಾಯ್ಡ್ ಜ್ವರ ಬಂದಾಗ, ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಂಡಾಗ, ಅಪೆಂಡಿಕ್ಸ್, ಹೊಟ್ಟೆಹುರಿ, ಕರುಳಿನಲ್ಲಿ ಆಗುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಹಾಲು ಬೆಸ್ಟ್. ಈ ಹಾಲು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಂದು ಕರುಳಿನ ಆರೋಗ್ಯ ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಒಡೆದ ಹಾಲಿನಲ್ಲಿರುವ ಸಕ್ಕರೆಯಂಶವನ್ನು ಲ್ಯಾಕ್ಟಿಕ್‌ ಆಮ್ಲವಾಗಿ ಪರಿವರ್ತಿಸಿ ಯೋಗರ್ಟ್ ಆಗಿ ಬಳಸಬಹುದು.

* ಒಣ ತ್ವಚೆ ಇರುವವರು ಒಡೆದ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಮೃದುವಾಗುತ್ತದೆ. ಇದನ್ನು ಸ್ನಾನದ ನೀರಿಗೆ ಹಾಕಿದರೂ ತ್ವಚೆ ಮೃದುವಾಗುತ್ತದೆ.

* ಸೀಫುಡ್‌ ಸ್ಟಿವ್ಸ್, ಪೊಟೆಟೊ ಬೇಕ್ಸ್ ಇವುಗಳನ್ನು ಮಾಡುವಾಗ ಸ್ವಲ್ಪ ಒಡೆದ ಹಾಲನ್ನು ಹಾಕಿದರೆ ರುಚಿ ಹೆಚ್ಚುತ್ತದೆ.

* ಅಡುಗೆ ಮಾಡುವ ಮೊದಲು ಚಿಕನ್‌ ಅನ್ನು ಒಡೆದ ಹಾಲಿನಲ್ಲಿ ಹಾಕಿಡಿ, ನಂತರ ಮಸಾಲೆ ಹಚ್ಚಿ ತಯಾರಿಸಿದ ತಂದೂರಿ ಚಿಕನ್ ತುಂಬಾ ರುಚಿಕರವಾಗಿರುತ್ತದೆ.

* ಬೆಣ್ಣೆ, ಯೋಗರ್ಟ್, ಕ್ರೀಮ್ ಇವುಗಳ ಬದಲಿಗೆ ಅಡುಗೆಗೆ ಒಡೆದ ಹಾಲನ್ನು ಹಾಕಿ ತಯಾರಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular