HomeIndia'ಆನ್‌ಲೈನ್' ವಂಚನೆಗೆ 'RBI' ಬ್ರೇಕ್ : 10,000 ಕ್ಕೂ ಹೆಚ್ಚಿನ ಹಣ ವರ್ಗಾವಣೆಗೆ ಇನ್ಮುಂದೆ 1...

‘ಆನ್‌ಲೈನ್’ ವಂಚನೆಗೆ ‘RBI’ ಬ್ರೇಕ್ : 10,000 ಕ್ಕೂ ಹೆಚ್ಚಿನ ಹಣ ವರ್ಗಾವಣೆಗೆ ಇನ್ಮುಂದೆ 1 ಗಂಟೆ ಕಾಯಬೇಕು !

ಡಿಜಿಟಲ್ ವಂಚನೆಗಳನ್ನು ತಡೆಗಟ್ಟಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ಮಾದರಿಯ ಯೋಜನೆಯನ್ನು ಸಿದ್ಧಪಡಿಸಿದೆ. ಇನ್ನು ಮುಂದೆ ನೀವು ಫೋನ್-ಪೇ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಯಾರಿಗಾದರೂ ಕಳುಹಿಸಿದರೆ, ಆ ಹಣ ತಕ್ಷಣವೇ ಅವರ ಖಾತೆಗೆ ಸೇರುವುದಿಲ್ಲ.

ಹೌದು.  ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರಾಂತಿಕಾರಿ ನಿಯಮವೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಹೊಸ ಪ್ರಸ್ತಾವನೆಯ ಪ್ರಕಾರ, ಗ್ರಾಹಕರು ಫೋನ್-ಪೇ, ಜಿಪೇ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 10,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಅಪರಿಚಿತರಿಗೆ ಅಥವಾ ಹೊಸಬರಿಗೆ ವರ್ಗಾಯಿಸಿದರೆ, ಆ ಹಣ ತಕ್ಷಣವೇ ವರ್ಗಾವಣೆಯಾಗದೆ ಒಂದು ಗಂಟೆಯ ಕಾಲ ತಡೆಹಿಡಿಯಲ್ಪಡುತ್ತದೆ (Hold). ಈ ವಿರಾಮದ ಅವಧಿಯಲ್ಲಿ ಗ್ರಾಹಕರು ತಪ್ಪು ಅಥವಾ ವಂಚನೆಯ ವಹಿವಾಟನ್ನು ಗುರುತಿಸಿದರೆ ತಕ್ಷಣವೇ ಅದನ್ನು ರದ್ದುಗೊಳಿಸಲು ಅವಕಾಶ ನೀಡಲಾಗಿದ್ದು, ವೃದ್ಧರ ರಕ್ಷಣೆಗಾಗಿ ‘ವಿಶ್ವಾಸಾರ್ಹ ವ್ಯಕ್ತಿ’ಯ ಅನುಮತಿ ಹಾಗೂ ತುರ್ತು ಸಂದರ್ಭದಲ್ಲಿ ಖಾತೆ ಸ್ಥಗಿತಗೊಳಿಸಲು ‘ಕಿಲ್ ಸ್ವಿಚ್’ ಬಟನ್‌ನಂತಹ ಸುಧಾರಿತ ಸುರಕ್ಷತಾ ಕ್ರಮಗಳನ್ನು ಆರ್‌ಬಿಐ ಪರಿಚಯಿಸುತ್ತಿದೆ.

ಒಂದು ಗಂಟೆಯ ‘ಹೋಲ್ಡ್’ ಅವಧಿ : ನೀವು ಹಣ ಕಳುಹಿಸಿದ ನಂತರ ಕನಿಷ್ಠ ಒಂದು ಗಂಟೆಯವರೆಗೆ ಆ ಹಣ ತಡೆಹಿಡಿಯಲ್ಪಡುತ್ತದೆ (Hold). ಈ ಅವಧಿಯಲ್ಲಿ ನಿಮಗೆ ವಂಚನೆಯ ಸಂಶಯ ಬಂದರೆ ಅಥವಾ ತಪ್ಪಾಗಿ ಹಣ ಕಳುಹಿಸಿದ್ದೀರಿ ಎಂದು ಅನಿಸಿದರೆ, ಕೂಡಲೇ ಆ ವ್ಯವಹಾರವನ್ನು (Transaction) ರದ್ದುಗೊಳಿಸಬಹುದು. ಸೈಬರ್ ಅಪರಾಧಿಗಳು ಹಣ ಲಪಟಾಯಿಸಿದಾಗ, ಅದು ಅವರ ಖಾತೆಗೆ ತಲುಪುವ ಮೊದಲೇ ತಡೆಯಲು ಈ ಒಂದು ಗಂಟೆಯ ಕಾಲಾವಕಾಶ ಸಹಕಾರಿಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೃದ್ಧರು ಮತ್ತು ದಿವ್ಯಾಂಗರಿಗೆ ವಿಶೇಷ ರಕ್ಷಣೆ : ಸೈಬರ್ ಮಾಯಾಜಾಲಕ್ಕೆ ವೃದ್ಧರು ಮತ್ತು ದಿವ್ಯಾಂಗರು ಬೇಗನೆ ಬಲಿಯಾಗುತ್ತಿದ್ದಾರೆ ಎಂದು ಗಮನಿಸಿರುವ ಆರ್‌ಬಿಐ, 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾವಣೆಗೆ ‘ವಿಶ್ವಾಸಾರ್ಹ ವ್ಯಕ್ತಿ’ಯ (Trusted Person) ಅನುಮತಿಯನ್ನು ಕಡ್ಡಾಯಗೊಳಿಸುತ್ತಿದೆ. ಅಂದರೆ, ವೃದ್ಧರು ಹೆಚ್ಚಿನ ಮೊತ್ತ ಕಳುಹಿಸುವಾಗ ಅವರು ಮೊದಲೇ ಸೂಚಿಸಿದ ನಂಬಿಕಸ್ತ ವ್ಯಕ್ತಿ ಕೂಡ ಅದನ್ನು ಓಕೆ ಮಾಡಿದರೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.

‘ಕಿಲ್ ಸ್ವಿಚ್’ (Kill Switch) ಬಟನ್: ನಿಮ್ಮ ಖಾತೆಯಲ್ಲಿ ಏನೋ ಅಕ್ರಮ ನಡೆಯುತ್ತಿದೆ ಎಂದು ಅನಿಸಿದ ಕೂಡಲೇ, ಕೇವಲ ಒಂದು ಸೆಕೆಂಡ್‌ನಲ್ಲಿ ನಿಮ್ಮೆಲ್ಲಾ ಡಿಜಿಟಲ್ ಸೇವೆಗಳನ್ನು ನಿಲ್ಲಿಸಲು ಬ್ಯಾಂಕುಗಳು ‘ಕಿಲ್ ಸ್ವಿಚ್’ ಬಟನ್ ನೀಡಬೇಕು. ಇದನ್ನು ಒತ್ತಿದರೆ ಸಾಕು, ನಿಮ್ಮ ಖಾತೆಯಿಂದ ಒಂದು ರೂಪಾಯಿಯೂ ಕದಲುವುದಿಲ್ಲ.

ವಿನಾಯಿತಿಗಳು ಯಾವುವು ?

  • ನೀವು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದಾಗ ಅಥವಾ ಪ್ರತಿ ತಿಂಗಳು ಪಾವತಿಸುವ ಕರೆಂಟ್ ಬಿಲ್, ಇನ್ಶೂರೆನ್ಸ್ ಪಾವತಿಗಳಿಗೆ ಈ ಒಂದು ಗಂಟೆಯ ಕಾಯುವಿಕೆ ಇರುವುದಿಲ್ಲ.
  • ನೀವು ಪದೇ ಪದೇ ಹಣ ಕಳುಹಿಸುವ ‘ವಿಶ್ವಾಸಾರ್ಹರ ಪಟ್ಟಿ’ಯಲ್ಲಿದ್ದರೆ (Trusted Contacts) ಅವರಿಗೂ ಕೂಡ ಹಣ ತಕ್ಷಣವೇ ವರ್ಗಾವಣೆಯಾಗುತ್ತದೆ.

ಹೆಚ್ಚಿನ ಹಣದ ಒಳಹರಿವಿನ ಮೇಲೆ ನಿಗಾ: ಒಂದು ವರ್ಷದಲ್ಲಿ ಖಾತೆಗೆ 25 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಬಂದರೆ, ಆ ಹಣದ ಮೂಲದ ಬಗ್ಗೆ ಬ್ಯಾಂಕುಗಳು ತನಿಖೆ ನಡೆಸಲಿವೆ. ಹಣ ಎಲ್ಲಿಂದ ಬಂದಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಅದನ್ನು ಖಾತೆಗೆ ವರ್ಗಾಯಿಸಲಾಗುತ್ತದೆ.

ಜಾರಿಗೆ ಯಾವಾಗ ? ಈ ಹೊಸ ನಿಯಮಗಳ ಬಗ್ಗೆ ಮೇ 8 ರವರೆಗೆ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲಾಗುವುದು. ಆ ನಂತರ ಈ ನಿಯಮಗಳನ್ನು ಅಧಿಕೃತವಾಗಿ ಜಾರಿಗೆ ತರಲು ಆರ್‌ಬಿಐ ನಿರ್ಧರಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular