HomeLatest Newsಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳದೇ ಪರದಾಡುತ್ತಿದ್ದ ಶ್ರೇಯಸ್‌ಗೆ ಹೇಗೆ ನಾಯಕತ್ವ ಕೊಟ್ರಿ? ಪಾಪ ಸೂರ್ಯಗೆ ಅನ್ಯಾಯವಾಯ್ತು;...

ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳದೇ ಪರದಾಡುತ್ತಿದ್ದ ಶ್ರೇಯಸ್‌ಗೆ ಹೇಗೆ ನಾಯಕತ್ವ ಕೊಟ್ರಿ? ಪಾಪ ಸೂರ್ಯಗೆ ಅನ್ಯಾಯವಾಯ್ತು; ಬಿಸಿಸಿಐ ವಿರುದ್ಧ ಕೆಂಡಕಾರಿದ ಅಶ್ವಿನ್

ನಿನ್ನೆ ( ಜೂನ್ 6 ) ಬಿಸಿಸಿಐ ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಟಿ ಟ್ವೆಂಟಿ ಸರಣಿಗಳು ಹಾಗೂ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಪ್ರಕಟಿಸಿದ್ದು, ಇಲ್ಲಿಯವರೆಗೆ ಭಾರತ ತಂಡವನ್ನು ಚುಟುಕು ಕ್ರಿಕೆಟ್ ಮಾದರಿಯಲ್ಲಿ ನಾಯಕನಾಗಿ ಮುನ್ನಡೆಸಿದ್ದ ನಾಯಕ ಸೂರ್ಯಕುಮಾರ್ ಯಾದವ್‌ರನ್ನು ತಂಡದಿಂದ ಕೈಬಿಡಲಾಗಿದೆ.

ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನನ್ನಾಗಿ ಆರಿಸಲಾಗಿದೆ. ಇನ್ನು ಸೂರ್ಯಕುಮಾರ್ ನಾಯಕತ್ವದಡಿಯಲ್ಲಿ ಮಾರ್ಚ್‌ನಲ್ಲಿ ಟಿ ಟ್ವೆಂಟಿ ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ತಂಡದಿಂದ ಆತನನ್ನೇ ಹೊರಹಾಕಿದ್ದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಈ ಕುರಿತು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಇಎಸ್‌ಪಿಎನ್ ಜತೆ ಮಾತನಾಡಿದ್ದು ಸೂರ್ಯಕುಮಾರ್ ಯಾದವ್ ಚೆನ್ನಾಗಿ ನಾಯಕತ್ವ ನಿಭಾಯಿಸಿದ್ದ ಆಟಗಾರ ಎಂದು ಹೊಗಳಿದ್ದು, ಅಂತಹ ಆಟಗಾರನನ್ನು ಹೀಗೆ ಇದ್ದಕ್ಕಿದ್ದ ಹಾಗೆ ನಾಯಕತ್ವದಿಂದ ಹಾಗೂ ತಂಡದಿಂದ ಕೈಬಿಡುವುದು ಸರಿಯಲ್ಲ ಎಂದಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್‌ ಗೆಲ್ಲಿಸಿಕೊಟ್ಟ ನಾಯಕನನ್ನು ತಂಡದಿಂದ ಹೊರಹಾಕುವುದು ಎಷ್ಟು ಸರಿ ಎಂದ ಅಶ್ವಿನ್ ಆತನಿಗೆ ಇನ್ನೂ ಸ್ವಲ್ಪ ಸಮಯಾವಕಾಶ ಕೊಡಬಹುದಿತ್ತು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಸೂರ್ಯಕುಮಾರ್ ಯಾದವ್‌ಗೆ ಅನ್ಯಾಯವಾಯಿತು ಎಂದ ಅಶ್ವಿನ್ ಶ್ರೇಯಸ್ ಅಯ್ಯರ್ ಆಯ್ಕೆ ಬಗ್ಗೆ ಸಹ ಅಸಮಾಧಾನ ಹೊರಹಾಕಿದ್ದಾರೆ. ವಿಶ್ವಕಪ್ ಗೆದ್ದ ತಂಡದಲ್ಲಿ ಸ್ಥಾನ ಪಡೆಯದ ಓರ್ವನಿಗೆ ಇದ್ದಕ್ಕಿದ್ದ ಹಾಗೆ ನಾಯಕತ್ವ ನೀಡಿದರೆ ಆ ತಂಡದಲ್ಲಿ ಭಾಗವಹಿಸಿದ್ದ ಆಟಗರರ ಮನಸ್ಸಿನಲ್ಲಿ ಏನು ಮೂಡಬಹುದು ಯೋಚಿಸಿ, ಅಲ್ಲದೇ ತಂಡ ಹೇಗಿದೆ ಎಂಬುದರ ಮಾಹಿತಿ ಇಲ್ಲದಾತನಿಗೆ ಇದ್ದಕ್ಕಿದ್ದ ಹಾಗೆ ನಾಯಕತ್ವ ಕೊಡುವುದು ಸರಿಯಾದ ಆಯ್ಕೆಯಲ್ಲ, ಇನ್ನೂ ಕೆಲಕಾಲ ಕಾದು ಆತನಿಗೆ ನಾಯಕತ್ವ ಕೊಡಬಹುದಿತ್ತು ಎಂದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular