HomeKarnatakaರಥೋತ್ಸವ ವೇಳೆ ಅವಘಡ: ಬೆಳ್ಳಿ ಮೂರ್ತಿ ಬಿದ್ದು ಬಾಲಕ ದುರ್ಮರಣ

ರಥೋತ್ಸವ ವೇಳೆ ಅವಘಡ: ಬೆಳ್ಳಿ ಮೂರ್ತಿ ಬಿದ್ದು ಬಾಲಕ ದುರ್ಮರಣ

ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ರಥೋತ್ಸವದ ವೇಳೆ ರಥದ ಮೇಲಿಂದ ಬೆಳ್ಳಿ ಮೂರ್ತಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ.

ಸೋಮವಾರ ನಡೆದ ಸಂಗಮೇಶ್ವರ ರಥೋತ್ಸವದ ವೇಳೆ ಘಟನೆ ನಡೆದಿದೆ. ಶಿವಾನಂದ ಸಾವಳಗಿ(12) ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲಿದ್ದ 5 ಕೆಜಿ ತೂಕದ ಬೆಳ್ಳಿ ನವಿಲು ರಥ ಎಳೆಯುವಾಗ ಬಾಲಕನ ಮೇಲೆ ಬಿದ್ದು ಮೃತಪಟ್ಟಿದ್ದಾನೆ.

ರಥ ಸಾಗಬೇಕಾದ ದಾರಿಯಲ್ಲಿ ತಗ್ಗು ದಿನ್ನೆ ಇದ್ದು, ತಗ್ಗಿನಲ್ಲಿ ರಥದ ಚಕ್ರಗಳು ಸಿಲುಕಿದಾಗ ಭಕ್ತರು ಜೋರಾಗಿ ರಥದ ಎಳೆದಿದ್ದಾರೆ. ಈ ವೇಳೆ ಕಳಸದ ಮೇಲಿದ್ದ ಬೆಳ್ಳಿ ನವಿಲು ಮೂರ್ತಿ ಬಾಲಕನ ಮೇಲೆ ಬಿದ್ದಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular