HomeLatest NewsBIG NEWS : ತ್ರ್ಯಂಬಕೇಶ್ವರ ದೇವಾಲಯದಲ್ಲಿ ಅಪರೂಪದ ಆವಿಷ್ಕಾರ ; ಅಮೃತಕುಂಡದಲ್ಲಿ ಶಿವಲಿಂಗ ದರ್ಶನ |WATCH...

BIG NEWS : ತ್ರ್ಯಂಬಕೇಶ್ವರ ದೇವಾಲಯದಲ್ಲಿ ಅಪರೂಪದ ಆವಿಷ್ಕಾರ ; ಅಮೃತಕುಂಡದಲ್ಲಿ ಶಿವಲಿಂಗ ದರ್ಶನ |WATCH VIDEO

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪ್ರಸಿದ್ಧ ತ್ರ್ಯಂಬಕೇಶ್ವರ ದೇವಾಲಯದ ಆವರಣದಲ್ಲಿರುವ ಐತಿಹಾಸಿಕ ಅಮೃತಕುಂಡದಲ್ಲಿ ಹಲವು ದಶಕಗಳ ಬಳಿಕ ಶಿವಲಿಂಗವು ಗೋಚರವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಕೈಗೊಂಡಿರುವ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾಮಗಾರಿಗಳ ವೇಳೆ ಈ ಅಪರೂಪದ ಆವಿಷ್ಕಾರ ಬೆಳಕಿಗೆ ಬಂದಿದೆ.

ಹೌದು. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ತ್ರ್ಯಂಬಕೇಶ್ವರ ದೇವಾಲಯದ ಐತಿಹಾಸಿಕ ಅಮೃತಕುಂಡದಲ್ಲಿ ಹಲವು ದಶಕಗಳ ಬಳಿಕ ಶಿವಲಿಂಗವು ಗೋಚರಿಸಿದ್ದು, ಭಕ್ತರಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಕೈಗೊಂಡಿರುವ ಸಂರಕ್ಷಣೆ ಕಾಮಗಾರಿಗಳ ವೇಳೆ ಕುಂಡದ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಿದಾಗ ಸುಮಾರು 65 ಅಡಿ ಆಳದಲ್ಲಿದ್ದ ಶಿವಲಿಂಗ ದರ್ಶನ ನೀಡಿದೆ.

ಅಮೃತಕುಂಡದಲ್ಲಿದ್ದ ನೀರನ್ನು ಸಂಪೂರ್ಣವಾಗಿ ಹೊರತೆಗೆದು ಸ್ವಚ್ಛಗೊಳಿಸಿದಾಗ ಸುಮಾರು 65 ಅಡಿ ಆಳದಲ್ಲಿ ಶಿವಲಿಂಗ ಕಾಣಿಸಿಕೊಂಡಿದೆ. ಪೇಶ್ವೆಗಳ ಕಾಲಕ್ಕೆ ಸೇರಿದ ಈ ಪುರಾತನ ಅಮೃತಕುಂಡದ ನೀರನ್ನೇ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗದ ಪೂಜೆ ಹಾಗೂ ಅಭಿಷೇಕಗಳಿಗೆ ಬಳಸಲಾಗುತ್ತದೆ. ವಾಸ್ತವವಾಗಿ 2026ರ ಸಿಂಹಸ್ಥ ಕುಂಭಮೇಳದ ಸಿದ್ಧತಾ ಕಾಮಗಾರಿಗಳ ಸಂದರ್ಭದಲ್ಲಿ ಈ ಶಿವಲಿಂಗದ ಅಸ್ತಿತ್ವ ಪತ್ತೆಯಾಗಿತ್ತು. ಇದೀಗ ಪುರಾತತ್ವ ಇಲಾಖೆ ಕೈಗೊಂಡಿರುವ ಸಂರಕ್ಷಣಾ ಕಾರ್ಯಗಳ ಭಾಗವಾಗಿ ಕುಂಡದ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕ ಶಿವಲಿಂಗ ಸ್ಪಷ್ಟವಾಗಿ ಗೋಚರಿಸಿದೆ. ಸಾಮಾನ್ಯವಾಗಿ ಅಮೃತಕುಂಡದಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತದೆ. ಆದ್ದರಿಂದ ಕುಂಡದ ತಳದಲ್ಲಿರುವ ಶಿವಲಿಂಗ ಭಕ್ತರ ಕಣ್ಣಿಗೆ ಕಾಣಿಸುವುದಿಲ್ಲ. ಹಲವು ವರ್ಷಗಳ ಬಳಿಕ ನೀರನ್ನು ಸಂಪೂರ್ಣವಾಗಿ ಹೊರತೆಗೆದ ಪರಿಣಾಮ ಈ ಅಪರೂಪದ ದರ್ಶನ ಸಾಧ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ಆದರೆ ಭದ್ರತಾ ಕಾರಣಗಳಿಂದ ಸಾಮಾನ್ಯ ಭಕ್ತರಿಗೆ ಅಮೃತಕುಂಡದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ನಾಸಿಕ್ ನಗರದಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ತ್ರ್ಯಂಬಕೇಶ್ವರ ದೇವಾಲಯವು ದೇಶದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಶಿವಲಿಂಗವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ತ್ರಿಮೂರ್ತಿಗಳ ಸಂಕೇತವಾಗಿ ಪೂಜಿಸಲ್ಪಡುತ್ತದೆ. ಅಲ್ಲದೆ, ಪವಿತ್ರ ಗೋದಾವರಿ ನದಿಯ ಉಗಮಸ್ಥಳವೂ ಇದೇ ಆಗಿರುವುದರಿಂದ ಈ ಕ್ಷೇತ್ರಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular