HomeEntertainmentಧ್ರುವ್ ರಾಠಿಗೆ ಪರೋಕ್ಷವಾಗಿ ಟಾಂಗ್ ನೀಡಿದ ರಣವೀರ್ ಸಿಂಗ್: ಜಾಹೀರಾತಿನ ಪೋಸ್ಟರ್ ಕಂಡು ಫ್ಯಾನ್ಸ್ ಫಿದಾ!

ಧ್ರುವ್ ರಾಠಿಗೆ ಪರೋಕ್ಷವಾಗಿ ಟಾಂಗ್ ನೀಡಿದ ರಣವೀರ್ ಸಿಂಗ್: ಜಾಹೀರಾತಿನ ಪೋಸ್ಟರ್ ಕಂಡು ಫ್ಯಾನ್ಸ್ ಫಿದಾ!

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ನಡುವಿನ ಪರೋಕ್ಷ ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ರೂಪೇ ಕಾರ್ಡ್‌ನ ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಅವರು ಧ್ರುವ್ ರಾಠಿ ನೀಡಿದ್ದ ಟೀಕೆಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಈ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಅವರು ತಮ್ಮ ಮಾವ ಮತ್ತು ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಿನಿಮಾ ಥಿಯೇಟರ್ ಮುಂಭಾಗದಲ್ಲಿ ನಿಂತು ಸಂಭಾಷಣೆ ನಡೆಸುವ ದೃಶ್ಯವಿದ್ದು ಅದರ ಹಿನ್ನೆಲೆಯಲ್ಲಿ ಒಂದು ಸಿನಿಮಾದ ಪೋಸ್ಟರ್ ಕಾಣಿಸುತ್ತದೆ. ಆ ಪೋಸ್ಟರ್ ಮೇಲೆ ರಣವೀರ್ ಸಿಂಗ್ ಅವರ ಭಾವಚಿತ್ರವಿದ್ದು ಅದಕ್ಕೆ ಭವಂದರ್ ಎಂದು ಹೆಸರಿಸಲಾಗಿದೆ. ಈ ಒಂದು ಸಣ್ಣ ದೃಶ್ಯವೇ ಈಗ ನೆಟ್ಟಿಗರ ಗಮನ ಸೆಳೆದಿದೆ.

ಏನಿದು ಭವಂದರ್ ವಿವಾದ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವು ದಿನಗಳ ಹಿಂದೆ ಧ್ರುವ್ ರಾಠಿ ಅವರು ರಣವೀರ್ ಸಿಂಗ್ ನಟನೆಯ ಧುರಂಧರ್ ಮತ್ತು ಧುರಂಧರ್ ದಿ ರಿವೆಂಜ್ ಸಿನಿಮಾಗಳನ್ನು ಕಟುವಾಗಿ ಟೀಕಿಸಿದ್ದರು. ಈ ಚಿತ್ರಗಳು ಕೇವಲ ಪ್ರಚಾರಕ್ಕಾಗಿ ಮಾಡಲಾದ ಸಿನಿಮಾಗಳು ಎಂದು ಹೇಳುವ ಭರದಲ್ಲಿ ಧ್ರುವ್ ಅವರು ಇವುಗಳ ಬದಲಾಗಿ ಆಪರೇಷನ್ ಭವಂದರ್ ಎಂಬ ಕಾಲ್ಪನಿಕ ಹೆಸರನ್ನು ಬಳಸಿದ್ದರು. ಈಗ ರಣವೀರ್ ಸಿಂಗ್ ತಮ್ಮ ಹೊಸ ಜಾಹೀರಾತಿನಲ್ಲಿ ಅದೇ ಭವಂದರ್ ಹೆಸರಿನ ಪೋಸ್ಟರ್ ಬಳಸುವ ಮೂಲಕ ಧ್ರುವ್ ರಾಠಿ ಅವರ ಕಾಲೆಳೆದಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಅಬ್ಬರ

ಒಂದೆಡೆ ವಿಮರ್ಶೆ ಮತ್ತು ಟೀಕೆಗಳು ನಡೆಯುತ್ತಿದ್ದರೆ ಇನ್ನೊಂದೆಡೆ ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಕೇವಲ ನಾಲ್ಕು ವಾರಗಳಲ್ಲಿ ಈ ಸಿನಿಮಾ ಭಾರತದಲ್ಲಿ 1000 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕವಾಗಿ ಈ ಚಿತ್ರ ಇದುವರೆಗೆ 1700 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಬಾಚಿಕೊಂಡಿದೆ.

ಧ್ರುವ್ ರಾಠಿ ಅವರ ಟೀಕೆಯನ್ನು ಗಂಭೀರವಾಗಿ ಪರಿಗಣಿಸದೆ ರಣವೀರ್ ಸಿಂಗ್ ಈ ರೀತಿ ಸೈಲೆಂಟ್ ಆಗಿ ರೋಸ್ಟ್ ಮಾಡಿರುವುದು ಅವರ ಅಭಿಮಾನಿಗಳಿಗೆ ಭಾರಿ ಖುಷಿ ನೀಡಿದೆ. ಸದ್ಯಕ್ಕೆ ಈ ಜಾಹೀರಾತು ಮತ್ತು ಅದರಲ್ಲಿರುವ ಮೆಟಾ ಜೋಕ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular