HomeEntertainmentರಿಲೀಸ್ ಆಯ್ತು 'ರಣಾಕ್ಷ' ಟ್ರೈಲರ್

ರಿಲೀಸ್ ಆಯ್ತು ‘ರಣಾಕ್ಷ’ ಟ್ರೈಲರ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ಅಭಿನಯಿಸಿರುವ ‘ರಣಾಕ್ಷ’ ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ  ಬಿಡುಗಡೆಯಾಗಿದೆ. ತಮ್ಮ ಹಾಸ್ಯದ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಸೀರುಂಡೆ ರಘು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಫಿದಾ ಆಗಿದ್ದಾರೆ.

ಕೆ ರಾಘವ್ ನಿರ್ದೇಶನದ ಈ ಚಿತ್ರವನ್ನು ಕೆ ವಿ ಆರ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಎಚ್ ಎಸ್ ರಾಮು, ಹಾಗೂ ಶ್ರೀಮತಿ ಶೋಭಾ ಶಿವಾಜಿ ರಾವ್ ನಿರ್ಮಾಣ ಮಾಡಿದ್ದು, ಸೀರುಂಡೆ ರಘು ಸೇರಿದಂತೆ ರಕ್ಷಾ ಹನುಮಂತು, ಅಪೂರ್ವ, ಮುನಿರಾಜು ಬಣ್ಣ ಹಚ್ಚಿದ್ದಾರೆ. ಧನುಷ್ ಎಲ್ ಬಿದ್ರೆ ಸಂಕಲನ, ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣವಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ದಾರಿತ ಸಿನಿಮಾ ಎಂದು ಹೇಳಲಾಗಿದ್ದು, ಇದೇ ಸೆಪ್ಟೆಂಬರ್ 27ರಂದು  ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

For Latest News Updates, Join Our Whatsapp Community🚩
RELATED ARTICLES

Most Popular