HomeEntertainment'ರಣಾಕ್ಷ' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ರಣಾಕ್ಷ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಸೀರುಂಡೆ ರಘು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಸೀರುಂಡೆ ರಘು ನಾಯಕನಾಗಿ ನಟಿಸಿರುವ ‘ರಣಾಕ್ಷ’ ಚಿತ್ರದ ಮೆಲೋಡಿ ಹಾಡೊಂದು ನಿನ್ನೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದೆ.”ಇರಲೇ ಜೊತೆಗೆ” ಎಂಬ ಈ ಹಾಡಿಗೆ ಅಭಿಷೇಕ್ ಹಾಗೂ ಸುನಿಧಿ ಗಣೇಶ್ ಧ್ವನಿಯಾಗಿದ್ದು, ವಿಶಾಲ್ ಆಲಾಪ್ ಸಂಗೀತ ಸಂಯೋಜನೆ ನೀಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.

ಕೆ ವಿ ಆರ್ ಪಿಚರ್ಸ್ ಬ್ಯಾನರ್ ನಡಿ ರಾಮು ಮತ್ತು ಶ್ರೀಮತಿ ಶೋಭಾ ಶಿವಾಜಿ ರಾವ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕೆ ರಾಘವ್ ನಿರ್ದೇಶಿಸಿದ್ದಾರೆ. ಸೀರುಂಡೆ ರಘು ಸೇರಿದಂತೆ ರಕ್ಷಾ, ಹನುಮಂತು, ಅಪೂರ್ವ, ಮುನಿರಾಜು ತೆರೆ ಹಂಚಿಕೊಂಡಿದ್ದಾರೆ. ಧನುಷ್ ಎಲ್ ಬಿದ್ರೆ ಸಂಕಲನ, ದೀಪಕ್ ಕುಮಾರ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular