HomeEntertainmentರಿಲೀಸ್ ಆಯ್ತು 'ರಮೇಶ್ ಸುರೇಶ್' ಟ್ರೈಲರ್; ಜೂನ್ 21ಕ್ಕೆ ಸಿನಿಮಾ ಬಿಡುಗಡೆ

ರಿಲೀಸ್ ಆಯ್ತು ‘ರಮೇಶ್ ಸುರೇಶ್’ ಟ್ರೈಲರ್; ಜೂನ್ 21ಕ್ಕೆ ಸಿನಿಮಾ ಬಿಡುಗಡೆ

ಮೊನ್ನೆ ಅಷ್ಟೇ ಟೀಸರ್ ಬಿಡುಗಡೆ ಮಾಡಿದ್ದ ರಮೇಶ್ ಸುರೇಶ್ ಚಿತ್ರತಂಡ ಇದೀಗ ಟ್ರೈಲರನ್ನು ರಿಲೀಸ್ ಮಾಡಿದ್ದು, ಈ ಟ್ರೈಲರ್ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಇದೆ  ಜೂನ್ 21ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.

ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಾಘು ರಾಜ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬೆನಕ್ ಗುಬ್ಬಿ ವೀರಣ್ಣ ಸೇರಿದಂತೆ ಯಶು ರಾಜ್, ಸಾಧುಕೋಕಿಲ, ಚಂದನ ಸೇಗು, ಮತ್ತು ಸತ್ಯ ಪ್ರಕಾಶ್ ತೆರೆ ಹಂಚಿಕೊಂಡಿದ್ದಾರೆ.

ಆರ್ಕೆ ಟಾಕೀಸ್ ಬ್ಯಾನರ್ ನಲ್ಲಿ ಪಿ ಕೃಷ್ಣ ಮತ್ತು ಬಿ ಶಂಕರ್ ನಿರ್ಮಾಣ ಮಾಡಿದ್ದಾರೆ.  ಕೆಎಂ ಪ್ರಕಾಶ್ ಸಂಕಲನ, ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ. ಇನ್ನುಳಿದಂತೆ ನವನೀತ್ ಚಾರಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular