HomeEntertainment'ರಮೇಶ್ ಸುರೇಶ್' ಚಿತ್ರದ ಟೀಸರ್ ರಿಲೀಸ್

‘ರಮೇಶ್ ಸುರೇಶ್’ ಚಿತ್ರದ ಟೀಸರ್ ರಿಲೀಸ್

ನಾಗರಾಜ್ ಮಲ್ಲೇನಹಳ್ಳಿ ಮತ್ತು ರಘು ರಾಜ್ ಗೌಡ ಒಟ್ಟಾಗಿ ಸೇರಿ ನಿರ್ದೇಶಿಸಿರುವ ರಮೇಶ್ ಸುರೇಶ್ ಚಿತ್ರದ ಟೀಸರ್ ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ನೋಡುಗರ ಗಮನ ಸೆಳೆಯುವ ಮೂಲಕ ಭರ್ಜರಿ ವೀಕ್ಷಣೆ ಕಂಡಿದೆ.ಈಗಾಗಲೇ ಈ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ.

ಈ ಚಿತ್ರವನ್ನು ಆರ್ಕೆ ಟಾಕೀಸ್ ಬ್ಯಾನರ್ ನಲ್ಲಿ ಪಿ ಕೃಷ್ಣ ಮತ್ತು ಬಿ ಶಂಕರ್ ನಿರ್ಮಾಣ ಮಾಡಿದ್ದು, ಬೆನಕ್ ಗುಬ್ಬಿ ವೀರಣ್ಣ ಸೇರಿದಂತೆ ಸಾಧುಕೋಕಿಲ, ಯಶ್ ರಾಜು, ಚಂದನ ಮತ್ತು ಸತ್ಯ ಪ್ರಕಾಶ್ ತಾರಾ ಬಳಗದಲ್ಲಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ನವನೀತ್ ಚಾರಿ ಅವರ ಸಂಗೀತ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular