HomeKarnatakaಸೋತವರಿಗೆ ಡಿಸಿಎಂ ಹುದ್ದೆ ನೀಡಿದರೂ ಬಿಜೆಪಿಗೆ ನಿಷ್ಠೆ ತೋರಲಿಲ್ಲ: ಪೀಡೆ ತೊಲಗಿ ಒಳ್ಳೆ ಕಾಲ ಶುರುವಾಗಿದೆ:...

ಸೋತವರಿಗೆ ಡಿಸಿಎಂ ಹುದ್ದೆ ನೀಡಿದರೂ ಬಿಜೆಪಿಗೆ ನಿಷ್ಠೆ ತೋರಲಿಲ್ಲ: ಪೀಡೆ ತೊಲಗಿ ಒಳ್ಳೆ ಕಾಲ ಶುರುವಾಗಿದೆ: ಸವದಿಗೆ ರಮೇಶ ಜಾರಕಿಹೊಳಿ ಟಾಂಗ್

ಬೆಳಗಾವಿ: ಸೋತವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೂ ಬಿಜೆಪಿಗೆ ನಿಷ್ಠೆ ತೋರಿಸಲಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಅಥಣಿಯಲ್ಲಿ ಸಮಾವೇಶ ನಡೆಸಿದ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೀಡೆ ಹೋಗಿದೆ. ಇದರಿಂದ ನಮಗೆ ಒಳ್ಳೆಯ ಕಾಲ ಶುರುವಾಗಿದೆ. ಅಥಣಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಮೇಶ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಗೆ ಹೋಗುತ್ತಾನೆ ಎನ್ನುವುದು ಸವದಿ ತಲೆಯಲ್ಲಿತ್ತು. ಆದರೆ ನನಗೆ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದಲ್ಲಿದ್ದೆ. ಇಂದು ನನಗೆ ಸಂತೋಷವಾಗಿದೆ. ಉದ್ದ ಅಂಗಿ ಹಾಕಿದವರು ಹೊರಗೆ ಹೋಗಿದ್ದಾರೆ. ಬಿದ್ದವರನ್ನು ಉಪಮುಖ್ಯಮಂತ್ರಿ ಮಾಡಿದರೂ ನಿಷ್ಠೆ ತೋರಿಸಲಿಲ್ಲ. ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಮಗೆ ಒಳ್ಳೆಯದೇ ಆಯಿತು ಎಂದರು.

ರಾಜ್ಯ ಮತ್ತು ರಾಷ್ಟ್ರದ ಬಿಜೆಪಿ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಉದ್ದ ಅಂಗಿಯವನನ್ನು ನೀವು ಮನೆಗೆ ಕಳುಹಿಸಬೇಕು. ಯಾವುದೇ ದಬ್ಬಾಳಿಕೆಗೆ ಅಂಜಬೇಡಿ. ಲಕ್ಷ್ಮಣ ಸವದಿ ನಮ್ಮ ಪಕ್ಷದಲ್ಲಿದ್ದರು ಎಂದು ನಾನು ಸುಮ್ಮನಿದ್ದೆ. ಇನ್ನು ಮೇಲೆ ಅಥಣಿ ಕ್ಷೇತ್ರಕ್ಕೆ ಬರುತ್ತೇನೆ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular