HomeLatest NewsSHOCKING: ಗರ್ಭಿಣಿ ಸೊಸೆಯನ್ನು ಕೊಂದ ಮಾವ ಪ್ರಕರಣಕ್ಕೆ ಟ್ವಿಸ್ಟ್

SHOCKING: ಗರ್ಭಿಣಿ ಸೊಸೆಯನ್ನು ಕೊಂದ ಮಾವ ಪ್ರಕರಣಕ್ಕೆ ಟ್ವಿಸ್ಟ್

ರಾಯಚೂರು: ಮಾವನೇ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಕೊಲೆಗೈದಿದ್ದ ಪ್ರಕರಣ ಹೊಸ ತಿರುವು ಪದೆದುಕೊಂಡಿದೆ. ಸೊಸೆಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿರುವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಕೊಲೆಗೈದ ಮಾವ ಬಳಿಕ ನಾಪತ್ತೆಯಾಗಿದ್ದ. ಕೌಟುಂಬಿಕ ಕಲಹದಿಂದ ಕೊಲೆಯಾಗಿರಬಹುದು ಎಂದು ಆರಂಭದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ ನಾಪತ್ತೆಯಾಗಿದ್ದ ಮಾವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಲು ಕಾರಣವೇನೆಂಬುದನ್ನು ಬಾಯ್ಬಿಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೊಸೆ ರೇಖಾ (24) ಕೊಲೆಯಾದ ಮಹಿಳೆ. ರೇಖಾ ಗುರುವಾರ ಮನೆಗೆ ಬಂದಾಗ ಮಾವ ಸಿದ್ದಪ್ಪ ಸೊಸೆ ನಾಲ್ಕು ತಿಂಗಳ ಗರ್ಭಿಣಿ ಎಂಬುದನ್ನೂ ನೋಡದೇ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮನೆಯಂಗಳದಲ್ಲಿ ರೇಖಾ ನರಳಾಡಿ ಪ್ರಾಣ ಬಿಟ್ಟಿದ್ದಾಳೆ. ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದ ಕವಿತಾಳ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸೊಸೆ ರೇಖಾಳ ಆಸ್ತಿ ಮೇಲೆ ಮಾಅವ ಸಿದ್ದಪ್ಪನಿಗೆ ಕಣ್ಣಿತ್ತಂತೆ. ಪ್ರತಿ ದಿನ ಸೊಸೆಗೆ ಆಸ್ತಿ ವಿಚಾರವಾಗಿ ಕಿರುಕುಳ ನೀಡುತ್ತಿದ್ದನಂತೆ. ಸೊಸೆ ಪೋಷಕರ ಬಳಿಯೂ ಈ ವಿಚಾರ ಕೇಳುತ್ತಿಲ್ಲ. ಸೊಸೆ ಹೆಸರಿನಲ್ಲಿರುವ ಆಸ್ತಿಗಾಗಿ, ಆಕೆ ಮನೆ ಕೆಲಸವನ್ನು, ಹೊಲದ ಕೆಲಸವನ್ನೂ ಮಾಡುತ್ತಿಲ್ಲ ಎಂದು ಅನಗತ್ಯವಾಗಿ ಆರೋಪ ಮಾಡಿ ಮಾವ ಹಿಂಸಿಸುತ್ತಿದ್ದನಂತೆ.

ರೇಖಾ ನಮ್ಮ ಮಾತಿಗಳನ್ನು ಕೇಳುತ್ತಿಲ್ಲ. ಆಕೆಯ ಮಗು ನಮಗೆ ಬೇಡ ಎಂದು ಮಾಅವ ಸಿದ್ದಪ್ಪ ಕ್ಯಾತೆ ತೆಗೆದಿದ್ದನಂತೆ. ಮಾವ ಎಷ್ಟೇ ಹಿಂಸೆ ಕೊಟ್ಟರು ಸಹಿಸಿಕೊಂಡಿದ್ದ ರೇಖಾ ತಂದೆ-ತಾಯಿಗೆ ಈ ವಿಷಯ ಹೇಳಿರಲಿಲ್ಲವಂತೆ. ಇದರಿಂದ ರೇಖಾಳ ಮೇಲೆ ಮಾವನ ಹಿಂಸೆ, ಬೈಗುಳ ವಿಪರೀತಕ್ಕೆ ಹೋಗಿತ್ತು. ಆಕೆಯ ಬಳಿ ಇದ್ದ ಆಸ್ತಿ ವಿಚಾರವಾಗಿಯೇ ಚಾಕುವಿನಿಂದ ಆಕೆಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಆಸೋಪಿ ಸಿದ್ದಪ್ಪ ಬಾಯ್ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular