HomeLatest News'UPI' ಮೂಲಕ ಮಿಸ್ ಆಗಿ ಬೇರೆಯವರಿಗೆ ಹಣ ಕಳುಹಿಸಿದ್ರೆ ತಕ್ಷಣ ಹೀಗೆ ಮಾಡಿ, ರಿಟರ್ನ್ ಆಗುತ್ತೆ!

‘UPI’ ಮೂಲಕ ಮಿಸ್ ಆಗಿ ಬೇರೆಯವರಿಗೆ ಹಣ ಕಳುಹಿಸಿದ್ರೆ ತಕ್ಷಣ ಹೀಗೆ ಮಾಡಿ, ರಿಟರ್ನ್ ಆಗುತ್ತೆ!

ದೇಶದಲ್ಲಿ ಯುಪಿಐ (UPI) ವಹಿವಾಟುಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲೆಡೆ ಯುಪಿಐ ಸ್ಕ್ಯಾನರ್ಗಳು ಕಾಣಸಿಗುತ್ತವೆ. ಇದರಿಂದಾಗಿ ಗ್ರಾಹಕರು ಡಿಜಿಟಲ್ ಪೇಮೆಂಟ್ಗಳಿಗೆ ಅತಿ ಹೆಚ್ಚಾಗಿ ಒಗ್ಗಿಕೊಂಡಿದ್ದಾರೆ. ಈಗ ಯಾರೂ ಜೇಬಿನಲ್ಲಿ ನಗದು (Cash) ಇಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳು ಕೂಡ ಸ್ಕ್ಯಾನರ್ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಯುಪಿಐ ಪಾವತಿಗಳನ್ನು ಸ್ವೀಕರಿಸದಿದ್ದರೆ ಗ್ರಾಹಕರು ಕಡಿಮೆಯಾಗಿ ವ್ಯಾಪಾರ ಕುಂಠಿತವಾಗುವ ಸಾಧ್ಯತೆಯಿದೆ. ಇನ್ನು ಯಾರಿಗಾದರೂ ಹಣ ಕಳುಹಿಸಬೇಕಾದರೂ ಯುಪಿಐ ಮೂಲಕ ಸುಲಭವಾಗಿ ಕಳುಹಿಸುವ ಸೌಲಭ್ಯವಿರುವುದರಿಂದ ಹೆಚ್ಚಿನ ಜನರು ಯುಪಿಐ ಆ್ಯಪ್ಗಳನ್ನು ಬಳಸುತ್ತಿದ್ದಾರೆ. ಇಂತಹ ಸಮಯದಲ್ಲಿ ಒಬ್ಬರಿಗೆ ಕಳುಹಿಸಬೇಕಾದ ಹಣವನ್ನು ಆಕಸ್ಮಿಕವಾಗಿ ಮತ್ತೊಬ್ಬರಿಗೆ ಕಳುಹಿಸುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಹಣವನ್ನು ಮರಳಿ ಪಡೆಯುವುದು ಹೇಗೆ ಎಂದು ನೋಡೋಣ.

ತಕ್ಷಣ ದೂರು ನೀಡಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವು ತಪ್ಪಾಗಿ ಯಾರಿಗಾದರೂ ಹಣ ಕಳುಹಿಸಿದರೆ, ತಕ್ಷಣವೇ ಸಂಬಂಧಿತ ಯುಪಿಐ ಆ್ಯಪ್ನಲ್ಲಿ ದೂರು ನೀಡಿ. ಯುಪಿಐ ಆ್ಯಪ್ನಲ್ಲಿ ನಿಮ್ಮ ವಹಿವಾಟನ್ನು (Transaction) ಆಯ್ಕೆ ಮಾಡಿದರೆ, ಅಲ್ಲಿ ‘ವಿವಾದ’ (Dispute) ಅಥವಾ ‘ತಪ್ಪು ವರ್ಗಾವಣೆ’ (Wrong Transfer) ಎಂಬ ಆಯ್ಕೆ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ ದೂರು ಸಲ್ಲಿಸಬೇಕು. ತಕ್ಷಣ ನಿಮ್ಮ ಬ್ಯಾಂಕ್, ನೀವು ಯಾರಿಗೆ ಹಣ ಕಳುಹಿಸಿದ್ದೀರೋ ಆ ಗ್ರಾಹಕನ ಬ್ಯಾಂಕ್ ಅನ್ನು ಸಂಪರ್ಕಿಸುತ್ತದೆ. ಹಣ ತಪ್ಪಾಗಿ ನಿಮ್ಮ ಖಾತೆಗೆ ಜಮೆಯಾಗಿದೆ ಎಂದು ಸ್ವೀಕೃತಿದಾರರಿಗೆ ತಿಳಿಸಲಾಗುತ್ತದೆ ಮತ್ತು ಅದನ್ನು ಹಿಂತಿರುಗಿಸುವಂತೆ ವಿನಂತಿಸಲಾಗುತ್ತದೆ. ಒಂದು ವೇಳೆ ಸ್ವೀಕೃತಿದಾರರು ಒಪ್ಪಿಕೊಂಡರೆ, ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಮರಳುತ್ತದೆ. ಆದರೆ, ಸ್ವೀಕೃತಿದಾರರು ಸ್ಪಂದಿಸದಿದ್ದರೆ ಅಥವಾ ಹಣ ನೀಡಲು ನಿರಾಕರಿಸಿದರೆ ಬ್ಯಾಂಕ್ ಏನೂ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡುವಂತೆ ಬ್ಯಾಂಕ್ ನಿಮಗೆ ಸೂಚಿಸುತ್ತದೆ.

ಹಣ ಯಾವಾಗ ಮರಳಿ ಬರುತ್ತದೆ?
ನಿಮ್ಮ ಪಾವತಿ ವಿಫಲವಾದಾಗ (Payment Fail) ಅಥವಾ ನೀವು ಹಣ ಕಳುಹಿಸಿದ ಯುಪಿಐ ಐಡಿ ಅಸ್ತಿತ್ವದಲ್ಲಿಲ್ಲದಿದ್ದಾಗ ಹಣ ನಿಮಗೆ ಮರಳಿ ಬರುತ್ತದೆ. ಆದ್ದರಿಂದ ವಹಿವಾಟು ಯಶಸ್ವಿಯಾಗಿದೆಯೇ ಅಥವಾ ವಿಫಲವಾಗಿದೆಯೇ ಎಂದು ಗಮನಿಸಿ. ಒಂದು ವೇಳೆ ವಹಿವಾಟು ಯಶಸ್ವಿಯಾದರೆ (Success), ಹಣ ಮರಳಿ ಬರುವುದು ಸ್ವೀಕೃತಿದಾರರ ಮೇಲೆ ಅವಲಂಬಿತವಾಗಿರುತ್ತದೆ. ನೀವು ತಪ್ಪಾಗಿ ಹಣ ಕಳುಹಿಸಿದ ತಕ್ಷಣವೇ ದೂರು ನೀಡಬೇಕು. ಇದರಿಂದ ಸ್ವೀಕೃತಿದಾರರಿಗೆ ವೇಗವಾಗಿ ಸಂದೇಶ ತಲುಪುತ್ತದೆ. ಇದು ಉದ್ದೇಶಪೂರ್ವಕವಾಗಿ ಕಳುಹಿಸಿದ ಹಣವೇ ಅಥವಾ ಆಕಸ್ಮಿಕವಾಗಿ ನಡೆದಿದೆಯೇ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಖಾತೆಯನ್ನು ಫ್ರೀಜ್ ಮಾಡುವ ಅವಕಾಶ
ಒಂದು ವೇಳೆ ನೀವು ತಪ್ಪಾಗಿ ಹಣ ಕಳುಹಿಸಿದ್ದರೆ, ಬ್ಯಾಂಕುಗಳು ಸ್ವೀಕೃತಿದಾರರ ಖಾತೆಯನ್ನು ಫ್ರೀಜ್ (Freeze) ಮಾಡುವ ಅವಕಾಶವಿರುತ್ತದೆ. ಆದರೆ ಹೀಗೆ ಮಾಡಿದರೂ ಹಣ ಖಂಡಿತವಾಗಿ ಮರಳಿ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ. ನಿಯಮಗಳ ಪ್ರಕಾರ, ಯಾರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆಯೋ ಅದು ಅವರಿಗೆ ಸೇರುತ್ತದೆ. ಈ ನಿಯಮದಿಂದಾಗಿ ತಪ್ಪಾಗಿ ವರ್ಗಾವಣೆಯಾದ ಹಣವನ್ನು ಮರಳಿ ಪಡೆಯುವುದು ಕಷ್ಟಕರವಾಗಿದೆ.

ಯಾರಿಗೆ ದೂರು ಕೊಡಬೇಕು..?

ಬ್ಯಾಂಕಿಂಗ್ ಒಂಬುಡ್ಸ್ಮನ್ (Banking Ombudsman) ಮೊರೆ ಹೋಗಿ
ದೂರು ನೀಡಿದ 30 ದಿನಗಳ ಒಳಗಾಗಿ ನಿಮ್ಮ ಬ್ಯಾಂಕ್ ಯಾವುದೇ ಪರಿಹಾರ ನೀಡದಿದ್ದರೆ, ನೀವು ಆರ್ಬಿಐ (RBI) ನ ಬ್ಯಾಂಕಿಂಗ್ ಒಂಬುಡ್ಸ್ಮನ್ಗೆ ದೂರು ನೀಡಬಹುದು.
• ಇದು ಬ್ಯಾಂಕುಗಳ ವಿರುದ್ಧ ದೂರು ನೀಡಲು ಇರುವ ಸರ್ಕಾರಿ ವ್ಯವಸ್ಥೆ.
• ನೀವು cms.rbi.org.in ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ದೂರು ಸಲ್ಲಿಸಬಹುದು.

ಪೊಲೀಸ್ ದೂರು ಮತ್ತು ಎಫ್ಐಆರ್ (FIR)
ಹಣ ಪಡೆದ ವ್ಯಕ್ತಿಯು ಅದನ್ನು ಹಿಂತಿರುಗಿಸಲು ನಿರಾಕರಿಸಿದರೆ, ಅದು “Criminal Misappropriation of Property” (ಐಪಿಸಿ ಸೆಕ್ಷನ್ 403ರ ಅಡಿಯಲ್ಲಿ – ಈಗಿನ ಭಾರತೀಯ ನ್ಯಾಯ ಸಂಹಿತೆಯ ಅನ್ವಯ) ಎಂದು ಪರಿಗಣಿಸಲಾಗುತ್ತದೆ.
• ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.
• ಪೊಲೀಸರು ನೋಟಿಸ್ ನೀಡಿದಾಗ, ಹಣ ಪಡೆದ ವ್ಯಕ್ತಿಯು ಕಾನೂನು ಕ್ರಮಕ್ಕೆ ಹೆದರಿ ಹಣ ಹಿಂತಿರುಗಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಲೀಗಲ್ ನೋಟಿಸ್ (Legal Notice)
ಒಂದು ವೇಳೆ ಮೊತ್ತ ದೊಡ್ಡದಾಗಿದ್ದರೆ, ವಕೀಲರ ಮೂಲಕ ಹಣ ಪಡೆದ ವ್ಯಕ್ತಿಗೆ ‘ಲೀಗಲ್ ನೋಟಿಸ್’ ಕಳುಹಿಸಬಹುದು. ಇದು ಸಿವಿಲ್ ಮೊಕದ್ದಮೆಗೆ ಮೊದಲ ಹಂತವಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ನೋಟಿಸ್ ಹಂತದಲ್ಲೇ ಸಮಸ್ಯೆ ಬಗೆಹರಿಯುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು
• ಸಮಯ: ತಪ್ಪು ನಡೆದ 24 ರಿಂದ 48 ಗಂಟೆಗಳ ಒಳಗಾಗಿ ದೂರು ನೀಡುವುದು ತುಂಬಾ ಮುಖ್ಯ.
• ಸ್ಕ್ರೀನ್’ ಶಾಟ್: ವಹಿವಾಟಿನ ಸ್ಕ್ರೀನ್ ಶಾಟ್ ಮತ್ತು ನಿಮಗೆ ಬಂದ SMS ಅನ್ನು ಸುರಕ್ಷಿತವಾಗಿರಿಸಿ.
• ಸೌಜನ್ಯ: ಮೊದಲು ಆ ವ್ಯಕ್ತಿಯನ್ನು ಫೋನ್ ಮೂಲಕ ಸಂಪರ್ಕಿಸಿ ಸಮಾಧಾನವಾಗಿ ಕೇಳಿ ನೋಡಿ, ಏಕೆಂದರೆ ಕೆಲವೊಮ್ಮೆ ಅವರು ತಿಳಿಯದೆ ಹಣ ಬಳಸಿಕೊಂಡಿರಬಹುದು.

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    Most Popular