HomeLatest Newsಸಂಜೆ ಹೊತ್ತಿನ ಹಸಿವಿಗೆ ಬೆಸ್ಟ್ ಚೋಲೆ ಚಾಟ್: ಪ್ರೋಟೀನ್ ಯುಕ್ತ ಈ ತಿಂಡಿ ನಾಲಿಗೆಗೂ ರುಚಿ,...

ಸಂಜೆ ಹೊತ್ತಿನ ಹಸಿವಿಗೆ ಬೆಸ್ಟ್ ಚೋಲೆ ಚಾಟ್: ಪ್ರೋಟೀನ್ ಯುಕ್ತ ಈ ತಿಂಡಿ ನಾಲಿಗೆಗೂ ರುಚಿ, ದೇಹಕ್ಕೂ ಹಿತ

ಬೆಂಗಳೂರು: ಸಂಜೆ ಕೆಂಪಾಗುತ್ತಿದ್ದಂತೆ ಏನಾದರೂ ಖಾರ-ಖಾರವಾಗಿ, ಚಟಪಟ ಅಂತ ಇರುವ ಚಾಟ್ಸ್ ತಿನ್ನಬೇಕು ಅನ್ನಿಸುವುದು ಸಹಜ. ಆದರೆ, ಹೊರಗಿನ ರಸ್ತೆಬದಿಯ ಚಾಟ್ಸ್ ಮಕ್ಕಳ ಆರೋಗ್ಯಕ್ಕೆ ಅಷ್ಟು ಹಿತವಲ್ಲ ಎಂಬ ಆತಂಕ ಪೋಷಕರಲ್ಲಿ ಇದ್ದೇ ಇರುತ್ತದೆ. ಹಾಗಂತ ಆಸೆಯನ್ನು ಹತ್ತಿಕ್ಕಬೇಕಿಲ್ಲ. ಮನೆಯಲ್ಲೇ ಹೋಟೆಲ್ ರುಚಿಯನ್ನು ಮೀರಿಸುವಂತಹ ಪ್ರೋಟೀನ್ ಯುಕ್ತ ಚೋಲೆ ಚಾಟ್ ಮಾಡಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಬಹುದು.

ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಸಾಟಿ ಇಲ್ಲ

ಕಾಬುಲಿ ಚನ್ನಾ ಅಥವಾ ಚೋಲೆಯಿಂದ ತಯಾರಾಗುವ ಈ ಚಾಟ್ ಕೇವಲ ನಾಲಿಗೆಗೆ ರುಚಿ ನೀಡುವುದಷ್ಟೇ ಅಲ್ಲ, ದೇಹಕ್ಕೆ ಬೇಕಾದ ಭರ್ಜರಿ ಪ್ರೋಟೀನ್ ಕೂಡ ಒದಗಿಸುತ್ತದೆ. ವಿಶೇಷವೆಂದರೆ ಚೋಲೆಯಲ್ಲಿರುವ ಗುಣಗಳು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ನೆರವಾಗುತ್ತವೆ. ಈ ಚಾಟ್‌ಗೆ ನಾವು ಸೇರಿಸುವ ತಾಜಾ ಈರುಳ್ಳಿ, ಟೊಮೆಟೊ ಮತ್ತು ಮಸಾಲೆಗಳು ಇದನ್ನು ಕೇವಲ ಸ್ನಾಕ್ಸ್ ಆಗಿ ಉಳಿಸದೆ ಒಂದು ಪೌಷ್ಟಿಕ ಆಹಾರವನ್ನಾಗಿ ಬದಲಿಸುತ್ತವೆ.ನಿಮ್ಮ ಮನೆಯ ಕಿಚನ್‌ನನ್ನೇ ಚಾಟ್ ಸೆಂಟರ್ ಮಾಡುವ ಈ ಸಿಂಪಲ್ ರೆಸಿಪಿ ಹೇಗಿದೆ ಅನ್ನೋದನ್ನ ಹಂತ ಹಂತವಾಗಿ ತಿಳಿಯೋಣ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ 15-20 ನಿಮಿಷಗಳಲ್ಲಿ ನೀವು ಈ ಚೋಲೆ ಚಾಟ್ ತಯಾರಿಸಬಹುದು. ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ಸುಲಭ ಹಂತಗಳು ಇಲ್ಲಿವೆ:

ಬೇಕಾಗುವ ಪದಾರ್ಥಗಳು:

ಬೇಯಿಸಿದ ಚೋಲೆ (ಕಾಬುಲಿ ಚನ್ನಾ)

ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು.

ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ, ಚೋಲೆ ಮಸಾಲೆ, ಚಾಟ್ ಮಸಾಲೆ.

ತುರಿದ ಶುಂಠಿ ಮತ್ತು ಗರಿಗರಿಯಾದ ಆಲೂ ಭುಜಿಯಾ.

ತಯಾರಿಸುವ ಸರಳ ಹಂತಗಳು:

ಒಗ್ಗರಣೆಯ ಸಿದ್ಧತೆ ಮೊದಲು ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ.

ಮಸಾಲೆಗಳ ಮಿಕ್ಸ್ ಈರುಳ್ಳಿ ಬೆಂದ ಮೇಲೆ ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಚೋಲೆ ಮಸಾಲೆಯನ್ನು ಸೇರಿಸಿ. ಮಸಾಲೆಗಳು ಎಣ್ಣೆಯಲ್ಲಿ ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿ.

ಗ್ರೇವಿ ಹದಕ್ಕೆ ತನ್ನಿ ಈಗ ತುರಿದ ಶುಂಠಿ, ಹೆಚ್ಚಿದ ಟೊಮೆಟೊ ಮತ್ತು ಚೋಲೆ ಬೇಯಿಸಿದ ಸ್ವಲ್ಪ ನೀರನ್ನು ಸೇರಿಸಿ. ಟೊಮೆಟೊ ಮೆತ್ತಗಾಗುವವರೆಗೆ ಮಿಶ್ರಣವನ್ನು ಚೆನ್ನಾಗಿ ಕಲಸಿ.

ಚೋಲೆ ಸೇರ್ಪಡೆ ಈಗ ಬೇಯಿಸಿಟ್ಟುಕೊಂಡ ಚೋಲೆಯನ್ನು ಬಾಣಲೆಗೆ ಹಾಕಿ. ಚಾಟ್ ಹೋಟೆಲ್ ಶೈಲಿಯಲ್ಲಿ ದಪ್ಪವಾಗಿ (Thick) ಬರಬೇಕೆಂದರೆ, ಸೌಟಿನಿಂದ ಕೆಲವು ಚೋಲೆಗಳನ್ನು ಕಿವುಚಿ (Mash). ಇದರಿಂದ ಚಾಟ್ ರುಚಿ ಹೆಚ್ಚುತ್ತದೆ. ಮಿಶ್ರಣವು ಗಟ್ಟಿಯಾಗುವವರೆಗೆ ಸುಮಾರು 5 ನಿಮಿಷ ಬೇಯಿಸಿ.

ಕೊನೆಯಲ್ಲಿ ಚಾಟ್ ಮಸಾಲೆಯನ್ನು ಸೇರಿಸಿ ಒಮ್ಮೆ ಕೈಯಾಡಿಸಿ ಕೆಳಗಿಳಿಸಿ. ಒಂದು ಪ್ಲೇಟ್‌ಗೆ ವರ್ಗಾಯಿಸಿ, ಅದರ ಮೇಲೆ ಹಸಿ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಗರಿಗರಿಯಾದ ಆಲೂ ಭುಜಿಯಾ ಉದುರಿಸಿದರೆ ನಿಮ್ಮ ಮನೆಯಲ್ಲೇ ತಯಾರಿಸಿದ ‘ಚಟ್ಪಟಾ ಚೋಲೆ ಚಾಟ್’ ಸವಿಯಲು ಸಿದ್ಧ

ಚೋಲೆ ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿದ್ದರೆ, ಮಸಾಲೆಗೆ ಉಪ್ಪು ಸೇರಿಸುವಾಗ ಜಾಗರೂಕರಾಗಿರಿ. ಮೇಲೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಿಂಡಿದರೆ ಈ ಚಾಟ್ ರುಚಿ ಇನ್ನು ಹತ್ತು ಪಟ್ಟು ಹೆಚ್ಚಾಗುತ್ತದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular