HomeLatest NewsBIG NEWS: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳುವು ಪ್ರಕರಣ: ವೈಜ್ಞಾನಿಕ ವಿಶ್ಲೇಷಣಾ ವರದಿ SIT...

BIG NEWS: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳುವು ಪ್ರಕರಣ: ವೈಜ್ಞಾನಿಕ ವಿಶ್ಲೇಷಣಾ ವರದಿ SIT ಗೆ ಹಸ್ತಾಂತರ

ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷ್ವೇಷಣಾ ವರಿಯನ್ನು ಎಸ್ ಐಟಿಗೆ ಹಸ್ತಾಂತರಿಸಲಾಗಿದೆ.

ಶಬರಿಮಲೆ ದೇವಸ್ಥಾನದ ವಿವಿಧ ಕಲಾಕೃತಿ ಹಾಗೂ ಬಾಗಿಲು ಚೌಕಟ್ಟುಗಳನ್ನೊಳಗೊಂಡ ತಾಮ್ರದ ಕವಚಗಳ ಮೇಲೆ ಲೇಪಿಸಿರುವ ಚಿನ್ನ ನಾಪತ್ತೆ ಪ್ರಕರಣ ವೈಜ್ಞಾನಿಕ ವಿಶ್ಲೇಷಣಾ ವರದಿಯನ್ನು ಕೇರಳ ಹೈಕೋರ್ಟ್ ಆದೇಶದಂತೆ ತ್ವರಿತ ನ್ಯಾಯಾಲಯ ಶನಿವಾರ ಎಸ್ ಐಟಿಗೆ ಹಸ್ತಾಂತರಿಸಿದೆ.

ತಿರುವನಂತಪುರಂ ನ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರ ಸಿದ್ಧಪಡಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅದನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್ ಐಟಿ ಅಧಿಕಾರಿಗಳು ಸೋಮವಾರ ಕೇರಳ ಹೈಕೋರ್ಟ್ ಗೆ ವರದಿಯ ಬಗ್ಗೆ ವಿವರಿಸಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

For Latest News Updates, Join Our Whatsapp Community🚩
RELATED ARTICLES

Most Popular