HomeLatest Newsನಿಮ್ಮ ಆಸ್ತಿ ಮಕ್ಕಳಿಗೆ ಸಿಗಬೇಕೆ? ನಾಮಿನಿ ಜೊತೆ ವಿಲ್ ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ

ನಿಮ್ಮ ಆಸ್ತಿ ಮಕ್ಕಳಿಗೆ ಸಿಗಬೇಕೆ? ನಾಮಿನಿ ಜೊತೆ ವಿಲ್ ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದ ಉಳಿತಾಯವನ್ನು ಮಕ್ಕಳಿಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಒಂದು ಸಣ್ಣ ತಪ್ಪು ನಿಮ್ಮ ಮಕ್ಕಳನ್ನು ಮುಂದೆ ದೊಡ್ಡ ಕಾನೂನು ಸಂಕಷ್ಟಕ್ಕೆ ತಳ್ಳಬಹುದು. ಹೌದು ನಿಮ್ಮ ಹೂಡಿಕೆಗೆ ನೀವು ನಾಮಿನಿ ನೇಮಿಸಿದ ತಕ್ಷಣ ಅವರೇ ಮಾಲೀಕರು ಎಂದು ಭಾವಿಸಬೇಡಿ

ಹಣಕಾಸು ತಜ್ಞರ ಪ್ರಕಾರ ನಿಮ್ಮ ಆಸ್ತಿ ಜಗಳವಿಲ್ಲದೆ ಮಕ್ಕಳಿಗೆ ಸೇರಬೇಕೆಂದರೆ ಕೇವಲ ನಾಮಿನಿ ಸಾಕಾಗುವುದಿಲ್ಲ, ಅದರ ಜೊತೆಗೆ ಒಂದು ನೋಂದಾಯಿತ ವಿಲ್ (Registered Will) ಇರುವುದು ಕಡ್ಡಾಯ.

ನಾಮಿನಿ (Nominee) ಎಂದರೆ ಯಾರು?
ನಾಮಿನಿ ಎಂದರೆ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಹೂಡಿಕೆ ಅಥವಾ ಖಾತೆಗಳನ್ನು ನಿರ್ವಹಿಸಲು ನೀವು ನೇಮಿಸಿದ ವ್ಯಕ್ತಿ. ಅವರು ಆ ಆಸ್ತಿಯ ಕಾವಲುಗಾರ (Custodian) ಮಾತ್ರ, ಮಾಲೀಕರಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಮಿನಿ ಎನ್ನುವವರು ಕೇವಲ ಒಬ್ಬ ಟ್ರಸ್ಟಿ ಇದ್ದಂತೆ. ಷೇರು ಮಾಲೀಕರು ತೀರಿಕೊಂಡಾಗ ಕಂಪನಿಯು ತಾತ್ಕಾಲಿಕವಾಗಿ ನಾಮಿನಿ ಹೆಸರಿಗೆ ಷೇರು ವರ್ಗಾಯಿಸುತ್ತದೆ. ಆದರೆ ಅಂತಿಮವಾಗಿ ಆ ಆಸ್ತಿಯ ಹಕ್ಕು ಕಾನೂನುಬದ್ಧ ವಾರಸುದಾರರಿಗೆ ಸೇರುತ್ತದೆ. ಒಂದು ವೇಳೆ ನೀವು ವಿಲ್ ಬರೆಯದಿದ್ದರೆ, ಕುಟುಂಬದ ಸದಸ್ಯರ ನಡುವೆ ಮಾಲೀಕತ್ವಕ್ಕಾಗಿ ಕಾನೂನು ಸಮರ ಶುರುವಾಗಬಹುದು.

ಕಾನೂನುಬದ್ಧ ವಾರಸುದಾರ (Legal Heir) ಎಂದರೆ ಯಾರು?
ವಾರಸುದಾರ ಎಂದರೆ ಒಬ್ಬ ವ್ಯಕ್ತಿಯ ಮರಣದ ನಂತರ ಅವರ ಆಸ್ತಿಗೆ ಕಾನೂನಿನ ಪ್ರಕಾರ ಹಕ್ಕುಳ್ಳವರು.

ವಿಲ್ ಇದ್ದರೆ: ವಿಲ್‌ನಲ್ಲಿ ಯಾರ ಹೆಸರು ಇದೆಯೋ ಅವರೇ ವಾರಸುದಾರರು.

ವಿಲ್ ಇಲ್ಲದಿದ್ದರೆ: ಭಾರತೀಯ ಉತ್ತರಾಧಿಕಾರ ಕಾಯ್ದೆಯಡಿ ಹತ್ತಿರದ ಸಂಬಂಧಿಗಳು (ಪತ್ನಿ, ಮಕ್ಕಳು, ಪೋಷಕರು) ವಾರಸುದಾರರಾಗುತ್ತಾರೆ.

ವಿಲ್ ಬರೆಯುವುದರಿಂದ ಆಗುವ 3 ಪ್ರಮುಖ ಲಾಭಗಳು:

ಜಗಳಕ್ಕೆ ಆಸ್ಪದವಿಲ್ಲ: ಉದಾಹರಣೆಗೆ ನಿಮಗೆ ಇಬ್ಬರು ಮಕ್ಕಳಿದ್ದು ಒಬ್ಬರಿಗೆ ಷೇರು ಉಳಿಸಿಕೊಳ್ಳುವ ಆಸೆ ಇದ್ದು ಮತ್ತೊಬ್ಬರಿಗೆ ಮಾರುವ ಅವಶ್ಯಕತೆ ಇರಬಹುದು. ವಿಲ್‌ನಲ್ಲಿ ಯಾರಿಗೆ ಎಷ್ಟು ಮತ್ತು ಏನು ಎಂಬುದು ಸ್ಪಷ್ಟವಾಗಿದ್ದರೆ ಜಗಳಕ್ಕೆ ಜಾಗವಿರುವುದಿಲ್ಲ.

ತೆರಿಗೆ ಉಳಿತಾಯ: ಸರಿಯಾಗಿ ವಿಲ್ ಬರೆಸಿ ನೋಂದಣಿ ಮಾಡಿಸುವುದರಿಂದ ಕಾನೂನು ಪ್ರಕ್ರಿಯೆ ಸರಳವಾಗುತ್ತದೆ. ಇದರಿಂದ ಮಕ್ಕಳಿಗೆ ಅನಗತ್ಯ ತೆರಿಗೆ ಹೊರೆ ಮತ್ತು ಪ್ರಕ್ರಿಯೆ ವೆಚ್ಚಗಳು ಕಡಿಮೆಯಾಗುತ್ತವೆ.

ಸುಲಭ ವರ್ಗಾವಣೆ: ವಿಲ್ ಇದ್ದರೆ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್ ಸಂಸ್ಥೆಗಳು ಆಸ್ತಿಯನ್ನು ವಾರಸುದಾರರಿಗೆ ವರ್ಗಾಯಿಸಲು ಹೆಚ್ಚಿನ ದಾಖಲೆಗಳನ್ನು ಕೇಳುವುದಿಲ್ಲ.

ನಾಮಿನಿ ಮತ್ತು ವಾರಸುದಾರ: ವ್ಯತ್ಯಾಸವೇನು?

ಷೇರು ಅಥವಾ ಮ್ಯೂಚುವಲ್ ಫಂಡ್ ಖಾತೆಯಲ್ಲಿ ನೀವು ಯಾರನ್ನಾದರೂ ‘ನಾಮಿನಿ’ ಮಾಡಿದ್ದೀರಾ? ಹಾಗಾದ್ರೆ ಅವರು ನಿಮ್ಮ ಆಸ್ತಿಗೆ ಅಂತಿಮ ಮಾಲೀಕರು ಎಂದು ಭಾವಿಸಬೇಡಿ. ಕಾನೂನಿನ ಪ್ರಕಾರ ನಾಮಿನಿ ಮತ್ತು ವಾರಸುದಾರರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆ ಕನ್ಫ್ಯೂಷನ್ ಇಲ್ಲಿದೆ:

ನಾಮಿನಿ (Nominee) :ಬರೀ ಬ್ಯಾಂಕ್ ಕಾವಲುಗಾರ
ನಾಮಿನಿ ಎಂದರೆ ಆಸ್ತಿಯ ಕೇರ್‌ಟೇಕರ್ ಅಥವಾ ಟ್ರಸ್ಟಿ ಇದ್ದಂತೆ.

    ಹೂಡಿಕೆದಾರರು ಮರಣ ಹೊಂದಿದಾಗ, ಆ ಹಣ ಅಥವಾ ಷೇರುಗಳು ಮಧ್ಯಂತರವಾಗಿ ನಾಮಿನಿಯ ಕೈಗೆ ಹೋಗುತ್ತವೆ.

    ಆದರೆ, ನಾಮಿನಿಯ ಕೆಲಸ ಆ ಹಣವನ್ನು ತಾನೇ ಇಟ್ಟುಕೊಳ್ಳುವುದಲ್ಲ ಬದಲಾಗಿ ನಿಜವಾದ ವಾರಸುದಾರರಿಗೆ ಅದನ್ನು ಮುಟ್ಟಿಸುವುದು.

    ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ಇದನ್ನೇ ಹೇಳಿದೆ: ನಾಮಿನಿ ಮಾಲೀಕನಲ್ಲ ಬರೀ ಹಸ್ತಾಂತರ ಮಾಡುವ ಮಾಧ್ಯಮ.

    ಕಾನೂನುಬದ್ಧ ವಾರಸುದಾರ (Legal Heir) : ಅಸಲಿ ಯಜಮಾನ
    ಕಾನೂನಿನ ಪ್ರಕಾರ ಆಸ್ತಿಯ ಮೇಲೆ ಪೂರ್ಣ ಹಕ್ಕು ಇರುವುದು ವಾರಸುದಾರರಿಗೆ ಮಾತ್ರ.

      ಯಾರು ವಾರಸುದಾರರು?: ಭಾರತೀಯ ಉತ್ತರಾಧಿಕಾರ ಕಾಯ್ದೆ 1925ರ ಪ್ರಕಾರ ಪತಿ/ಪತ್ನಿ, ಮಕ್ಕಳು ಮತ್ತು ಪೋಷಕರು ಈ ಪಟ್ಟಿಗೆ ಬರುತ್ತಾರೆ.

      ಹೆಣ್ಣುಮಕ್ಕಳ ಹಕ್ಕು: 2005ರ ತಿದ್ದುಪಡಿ ನಂತರ ವಿವಾಹಿತ ಪುತ್ರಿಯರಿಗೂ ತಂದೆ-ತಾಯಿಯ ಆಸ್ತಿಯಲ್ಲಿ ಸಮಾನವಾದ ಹಕ್ಕಿದೆ.

      ಒಂದು ವೇಳೆ ನಾಮಿನಿ ಮತ್ತು ವಾರಸುದಾರರ ನಡುವೆ ಜಗಳವಾದರೆ, ನ್ಯಾಯಾಲಯವು ಯಾವಾಗಲೂ ವಾರಸುದಾರರ ಪರವಾಗಿಯೇ ನಿಲ್ಲುತ್ತದೆ.

      For Latest News Updates, Join Our Whatsapp Community🚩
      Abinandan
      Abinandan
      ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
      RELATED ARTICLES

      Most Popular