HomeKarnatakaಉತ್ತರಾಖಂಡ ಹೆಲಿಕಾಪ್ಟರ್‌ ದುರಂತದಲ್ಲಿ ಉದ್ಯಮಿ ಮಗ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆಯೂ ನಿಧನ

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತದಲ್ಲಿ ಉದ್ಯಮಿ ಮಗ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆಯೂ ನಿಧನ

ಹಾಸನ: ಕೆಲ ದಿನಗಳ ಹಿಂದೆ ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತ ಪಟ್ಟಿದ್ದ ಉದ್ಯಮಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ಇದೀಗ ಅವರ ತಂದೆ ಕೂಡ ನಿಧನರಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್‌ಗೌಡ ಅವರ ತಂದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನಿಂಗರಾಜು ಅವರು ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.

ಆನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಪುತ್ರ ಪ್ರತಾಪ್‌ಗೌಡ ಕಂಟ್ರಾಕ್ಟರ್, ಉದ್ಯಮಿಯಾಗಿದ್ದರು. ಮಗನ ಸಾವಿನ ಚಿಂತೆಯಲ್ಲಿದ್ದ ನಿಂಗರಾಜು ಅವರು ನಿನ್ನೆ (ನ.5) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಬಾಚಿಹಳ್ಳಿ ಗ್ರಾಮದಲ್ಲಿ ನಿಂಗರಾಜು ಅವರ ಅಂತ್ಯಕ್ರಿಯೆ ನೆರವೇರಲಿದೆ.

ಉತ್ತರಾಖಂಡಕ್ಕೆ ಯಾತ್ರೆಗೆಂದು ಹೋಗಿದ್ದ ಉದ್ಯಮಿ ಪ್ರತಾಪ್ ಗೌಡ ಸೇರಿ ಬೆಂಗಳೂರಿನ ಐವರು ಸ್ನೇಹಿತರು ತೆರಳಿದ್ದರು. ಬದ್ರಿನಾಥ ದೇವಸ್ಥಾನದಿಂದ ಹೆಲಿಕಾಪ್ಟರ್ ನಲ್ಲಿ ಹಿಂತಿರುಗುತ್ತಿದ್ದಾಗ ಜೋಶಿಮಠದ ಬಳಿ ಹೆಲಿಕಾಪ್ಟರ್ ಪತನಗೊಂಡು ಒಟ್ಟು ಆರು ಜನರು ದುರಂತದಲ್ಲಿ ಮೃತಪಟ್ಟಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular