HomeIndiaBig Update: 8th Pay Commission, ಸರ್ಕಾರಿ ನೌಕರರ ಗಮನಕ್ಕೆ

Big Update: 8th Pay Commission, ಸರ್ಕಾರಿ ನೌಕರರ ಗಮನಕ್ಕೆ

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಕುರಿತು ಬಿಗ್ ಅಪ್‌ಡೇಟ್ ಇದೆ. ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ 8ನೇ ಕೇಂದ್ರ ವೇತನ ಆಯೋಗವನ್ನು ಘೋಷಣೆ ಮಾಡಿದೆ.

ಜನವರಿ 2025ರಲ್ಲಿ ಸರ್ಕಾರವು ಅಧಿಕೃತವಾಗಿ ಆಯೋಗ ಸ್ಥಾಪನೆ ಮಾಡಿದೆ. ಆಯೋಗ ಸುಮಾರು 50 ಲಕ್ಷ ಕೇಂದ್ರ ನೌಕರರು ಮತ್ತು 65-69 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗುವಂತೆ ವೇತನ, ಭತ್ಯೆಗಳು ಮತ್ತು ಪಿಂಚಣಿ ಪರಿಷ್ಕರಣೆಗೆ ಶಿಫಾರಸು ಮಾಡಲಿದೆ.

ಈಗ 8ನೇ ವೇತನ ಆಯೋಗ ತನ್ನ ವೆಬ್‌ ಸೈಟ್ ಬಿಡುಗಡೆ ಮಾಡಿದೆ. ಸರ್ಕಾರಿ ನೌಕರರು, ಪ್ರಮುಖ ಭಾಗಿದಾರರ ಮೂಲಕ ಸಲಹೆಗಳನ್ನು ಆಹ್ವಾನಿಸಿದೆ. ವೇತನ, ಭತ್ಯೆ, ಪಿಂಚಣಿ ಕುರಿತು ಸರ್ಕಾರಿ ನೌಕರರು, ನಿವೃತ್ತ ನೌಕರರು ವೆಬ್‌ಸೈಟ್ ಮೂಲಕ ತಮ್ಮ ಅಭಿಪ್ರಾಯವನ್ನು ದಾಖಲು ಮಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೆಬ್‌ಸೈಟ್‌ ಪ್ರಕಾರ ಒಂದು ಸಾಮಾನ್ಯ ಪ್ರಶ್ನಾವಳಿಗಳನ್ನು ರಚನೆ ಮಾಡಲಾಗಿದ್ದು, ಅದಕ್ಕೆ ಎಲ್ಲಾ ಭಾಗಿದಾರರ ಮೂಲಕ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಅಭಿಪ್ರಾಯಗಳನ್ನು ಕ್ರೂಢೀಕರಣ ಮಾಡಿ, ಆಯೋಗ ತನ್ನ ವರದಿಗೆ ಬಳಕೆ ಮಾಡಿಕೊಳ್ಳಲಿದೆ.

ಪ್ರಕಟಣೆಯಲ್ಲಿ ಏನಿದೆ?: 8ನೇ ವೇತನ ಆಯೋಗವು ಅಭಿಪ್ರಾಯ/ ಸಲಹೆ/ ಸೂಚನೆಗಳನ್ನು ಆಹ್ವಾನಿಸಿದೆ. MyGov.in ವೆಬ್ ಪೋರ್ಟ್‌ಲ್ ಮೂಲಕ 18 ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಚಿವರು, ಇಲಾಖೆಗಳು, ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ನೌಕರರು, ನ್ಯಾಯಾಂಗ ಅಧಿಕಾರಿಗಳು, ಸರ್ಕಾರಿ ನೌಕರರು, ಸರ್ಕಾರಿ ನೌಕರರ ಸಂಘಟನೆಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದು ಎಂದು ಹೇಳಿದೆ.

ಕೇಂದ್ರ ಸರ್ಕಾರದ ಹಾಲಿ ಉದ್ಯೋಗಿಗಳು, ನಿವೃತ್ತರು, ಸಂಶೋಧಕರು, ಸಾಮಾನ್ಯ ಜನರು ಸಹ ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದು. ಯಾವುದೇ ವ್ಯಕ್ತಿ, ಸಂಘಟನೆ ನೀಡಿದ ಅಭಿಪ್ರಾಯವನ್ನು ಗೌಪ್ಯವಾಗಿ ಇಡಲಾಗುತ್ತದೆ.

ಈ ವೆಬ್‌ಸೈಟ್ ಮೂಲಕ ಅಭಿಪ್ರಾಯವನ್ನು ನೀಡಲು ಮಾರ್ಚ್ 16, 2026 ಅಂತಿಮ ದಿನವಾಗಿದೆ. ಎಲ್ಲರೂ ಸಹ ವೆಬ್‌ಸೈಟ್ ಮೂಲಕವೇ ಅಭಿಪ್ರಾಯವನ್ನು ದಾಖಲಿಸಬೇಕಿದೆ. ಕಾಗದದ ಮೂಲಕ, ಇ-ಮೇಲ್ ಮೂಲಕ ಸಲ್ಲಿಸುವ ಅಭಿಪ್ರಾಯಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ಜನರ ಅನುಕೂಲಕ್ಕಾಗಿ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಪ್ರಶ್ನಾವಳಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ಆಸಕ್ತರು ಪ್ರಶ್ನಾವಳಿಗಳನ್ನು ಸರಿಯಾಗಿ ಓದಿಕೊಂಡು ತಮ್ಮ ಅಭಿಪ್ರಾಯಗಳನ್ನು ಸಲ್ಲಿಕೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜನವವರಿ 2025ರಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಯಂತೆ ಅವರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ಪರಿಷ್ಕರಣೆ ಮಾಡಲು 8ನೇ ವೇತನ ಆಯೋಗ ರಚನೆಯನ್ನು ಘೋಷಣೆ ಮಾಡಿತು.

ಆದರೆ ಈ ಕುರಿತು ಅಧಿಕೃತವಾಗಿ ಆದೇಶವನ್ನು ಹೊರಡಿಸಿದ್ದು, ನವೆಂಬರ್ 3, 2025ರಲ್ಲಿ. ಆಯೋಗ ತನ್ನ ವರದಿಯನ್ನು ಸಲ್ಲಿಕೆ ಮಾಡಲು ಆದೇಶದಲ್ಲಿ 18 ತಿಂಗಳ ಗಡುವು ವಿಧಿಸಲಾಗಿದೆ.

8ನೇ ವೇತನ ಆಯೋಗದ ವರದಿಯನ್ನು ಯಾವ ದಿನಾಂಕದಿಂದ ಅನುಷ್ಠಾನ ಮಾಡಲಾಗುತ್ತದೆ? ಎಂದು ಕೇಂದ್ರ ಸರ್ಕಾರ ಇನ್ನೂ ಸಹ ಘೋಷಣೆ ಮಾಡಿಲ್ಲ. 2025ರ ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, “ಯಾವಾಗ 8ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ ಮಾಡಬೇಕು  ಎಂದು ಸರ್ಕಾರ ತೀರ್ಮಾನ ಮಾಡಲಿದೆ. ಆ ಸಮಯದಲ್ಲಿ ಅಗತ್ಯ ಅನುದಾನವನ್ನು ಹೊಂದಿಸಲಾಗುತ್ತದೆ” ಎಂದು ಹೇಳಿದ್ದರು.

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು 7ನೇ ಕೇಂದ್ರ ವೇತನ ಆಯೋಗದ ವರದಿಯಂತೆ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ಪಡೆಯುತ್ತಿದ್ದಾರೆ. ಸರ್ಕಾರಿ ನೌಕರರು 8ನೇ ಆಯೋಗದ ಶಿಫಾರಸುಗಳು ಜನವರಿ 1, 2026 ರಿಂದ ಜಾರಿಗೆ ಬರುವ ನಿರೀಕ್ಷೆಯಲ್ಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular