HomeIndiaಹೆಡ್‌ಪೋನ್ ಹಾಕಿಕೊಂಡು ಪಬ್ಜಿ ಆಡುವಾಗ ಹೈ-ಬಿಪಿ, ಬ್ರೈನ್ ಹ್ಯಾರ್ಮೇಜ್‌, ಯುವಕ ಸಾವು

ಹೆಡ್‌ಪೋನ್ ಹಾಕಿಕೊಂಡು ಪಬ್ಜಿ ಆಡುವಾಗ ಹೈ-ಬಿಪಿ, ಬ್ರೈನ್ ಹ್ಯಾರ್ಮೇಜ್‌, ಯುವಕ ಸಾವು

ಪಬ್ಜಿ ಗೇಮ್ ಮತ್ತೊಂದು ಅನಾಹುತ ಸೃಷ್ಟಿಸಿದೆ. ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಮೆದುಳಿನ ನರ ಒಡೆದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೇರಠ್‌ ಎಂಬ ಪ್ರದೇಶದಲ್ಲಿ ಪಬ್ಜಿ ಗೇಮ್ ಚಟಕ್ಕೆ ಬಲಿಯಾದ ಯುವಕ ಮೊಹಮ್ಮದ್ ಕೈಫ್ (22). ಈತ ಶುಕ್ರವಾರ ರಾತ್ರಿ ಗೇಮ್ ಆಡುತ್ತಿದ್ದಾಗ ಹಠಾತ್ತಾಗಿ ರಕ್ತದೊತ್ತಡ 300ರ ಗಡಿ ದಾಟಿದೆ, ಇದರಿಂದಾಗಿ ಮೆದುಳಿನ ನರ ಒಡೆದಿದೆ.

ತಕ್ಷಣ ಆತನನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮೊಹಮ್ಮದ್ ಕೈಫ್ ಕುಟುಂಬಕ್ಕೆ ಆಸರೆಯಾಗಿದ್ದ, ಇಡೀ ರಾತ್ರಿ ಗೇಮ್ ಆಡುತ್ತಿದ್ದ ಎಂದು ಪೋಷಕರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನ್‌ಲೈನ್‌ ಗೇಮ್‌ನ ಹುಚ್ಚು ಪ್ರಾಣಕ್ಕೆ ಅಪಾಯವನ್ನು ತರುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಕಳೆದ ವಾರ ಮೀರತ್‌ನಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನೆನಪು ಮಾಸುವ ಮುನ್ನವೇ 22 ವರ್ಷದ ಮೊಹಮ್ಮದ್ ಕೈಫ್ ಪಬ್ಜಿ ಆಟಕ್ಕೆ ಬಲಿಯಾಗಿದ್ದಾನೆ.

ಹೆಡ್‌ಪೋನ್‌ ಹಾಕಿಕೊಂಡು ತಡರಾತ್ರಿಯವರೆಗೆ ಗೇಮ್ ಆಡುತ್ತಿದ್ದಾಗ ರಕ್ತದೊತ್ತಡ ಭಾರೀ ಏರಿಕೆಯಾಗಿತ್ತು. ಇದರ ಪರಿಣಾಮ ಆತನ ಮೆದುಳಿನ ನರವೇ ಒಡೆದುಹೋಗಿದೆ. ಆಸ್ಪತ್ರೆಗೆ ದಾಖಲಿಸಿದರೂ ಸಹ ಆತ ಬದುಕಲಿಲ್ಲ.

ರಿಯಲ್ ಎಸ್ಟೇಟ್ ಉದ್ಯಮಿ ಫಾರೂಕ್ ಅವರ ಏಕೈಕ ಪುತ್ರ ಮೊಹಮ್ಮದ್ ಕೈಫ್ ಶುಕ್ರವಾರ ರಾತ್ರಿ ತನ್ನ ಕೋಣೆಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಮೊಬೈಲ್‌ನಲ್ಲಿ ಪಬ್ಜಿ ಆಡುತ್ತಿದ್ದನು. ಕುಟುಂಬಸ್ಥರ ಪ್ರಕಾರ, ಕೈಫ್‌ಗೆ ಕಳೆದ ನಾಲ್ಕು ತಿಂಗಳುಗಳಿಂದ ಆನ್‌ಲೈನ್ ಗೇಮಿಂಗ್ ಹುಚ್ಚು ಹಿಡಿದಿತ್ತು. ಶುಕ್ರವಾರ ಸುಮಾರು 3 ಗಂಟೆಯ ಸಮಯದಲ್ಲಿ ಗೇಮ್ ಆಡುತ್ತಿದ್ದಾಗ ಆತ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಕೆಳಗೆ ಬಿದ್ದಿದ್ದ.

ಕುಟುಂಬದವರು ಇದನ್ನು ಗಮನಿಸಿ ಕೈಫ್‌ನ ಸ್ಥಿತಿ ನೋಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ಆತನ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಬರುವಾಗ ಕೈಫ್‌ನ ರಕ್ತದೊತ್ತಡ 300ರ ಗಡಿ ದಾಟಿರುವುದನ್ನು ಕಂಡು ವೈದ್ಯರೇ ಆತಂಕಗೊಂಡಿದ್ದರು.

ದೆಹಲಿಯ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಭಾನುವಾರ ಬೆಳಿಗ್ಗೆ ಆತ ಸಾವನ್ನಪ್ಪಿದ್ದಾನೆ. ವೈದ್ಯರ ಪ್ರಕಾರ ವಿಪರೀತ ಒತ್ತಡ ಮತ್ತು ಉದ್ರೇಕದಿಂದಾಗಿ ರಕ್ತದೊತ್ತಡ ಹೆಚ್ಚಾಗಿ, ಮೆದುಳಿನ ನರ ಒಡೆದಿದ್ದೇ ಸಾವಿಗೆ ಪ್ರಮುಖ ಕಾರಣವಾಗಿದೆ.

ರೀಲ್ಸ್ ಹುಚ್ಚು: ಕೈಫ್‌ನ ತಂದೆ ಫಾರೂಕ್ ಮಾತನಾಡಿ, ಮಗ ಮೊದಲು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದನು. ಆದರೆ ಕಳೆದ ಕೆಲವು ತಿಂಗಳುಗಳಿಂದ ಅವನಿಗೆ ಪಬ್ಜಿ ಚಟ ಹೆಚ್ಚಾಗಿತ್ತು. ಅವನು ಹಗಲು-ರಾತ್ರಿ ಎನ್ನದೆ ಗೇಮ್ ಆಡುತ್ತಿದ್ದನು. ಇಡೀ ರಾತ್ರಿ ಎಚ್ಚರವಿದ್ದು ಗೇಮ್ ಆಡುತ್ತಿದ್ದ ಕೈಫ್‌ಗೆ ಕುಟುಂಬದವರು ಹಲವು ಬಾರಿ ಬುದ್ಧಿ ಹೇಳಲು ಮತ್ತು ತಡೆಯಲು ಪ್ರಯತ್ನಿಸಿದ್ದರು.

ಕೈಫ್ ಏಕೈಕ ಪುತ್ರನಾಗಿದ್ದು, ಅವನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರು ಕಂಗಾಲಾಗಿದ್ದಾರೆ.

ವೈದ್ಯರ ಪ್ರಕಾರ ಆನ್‌ಲೈನ್ ಗೇಮ್‌ಗಳು ಯುವಕರ ಮೆದುಳಿನಲ್ಲಿ ಡೋಪಮೈನ್ಮಟ್ಟವನ್ನು ಹೆಚ್ಚಿಸುತ್ತವೆ, ಇದು ಅವರಲ್ಲಿ ವ್ಯಸನ ಅಥವಾ ಚಟವನ್ನು ಉಂಟುಮಾಡುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular