ಬೆಂಗಳೂರು: ಖಾಸಗಿ ಶಾಲೆಗಳು ವಿವಿಧ ತರಗತಿಗಳಿಗೆ ನಿಗದಿಪಡಿಸಿದ ಶುಲ್ಕದ ವಿವರಗಳನ್ನು ಶಿಕ್ಷಣ ಸಂಸ್ಥೆಯ ಫಲಕ, ಶಾಲೆಯ ಜಾಲತಾಣಗಳಲ್ಲಿ ಪ್ರಕಟಿಸಬೇಕು. ಶಿಕ್ಷಣ ಇಲಾಖೆಗೂ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಈ ಕುರಿತಾಗಿ ಸುತ್ತೋಲೆ ಹೊರಡಿಸಲಾಗಿದೆ.
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಿಗದಿಪಡಿಸಿರುವ ಶುಲ್ಕದ ವಿವರ ಪ್ರಕಟಿಸುವ ಬಗ್ಗೆ
ಶಿಕ್ಷಣ ಹಕ್ಕು ಕಾಯಿದೆ-2009 ಮತ್ತು ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012.
ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. ದಾಖಲಾತಿ ಪ್ರಕ್ರಿಯೆ, ದಾಖಲಾತಿ ಶುಲ್ಕ ಮತ್ತು ಎ ಇನ್ನಿತರೆ ಇನ್ನಿತರೆ ಶುಲ್ಕವನ್ನು ಪಡೆಯುವ ಸಂಬಂಧ ಉಲ್ಲೇಖದ ಶಿಕ್ಷಣ ಹಕ್ಕುಕಾಯಿದೆ -2009 ರನ್ವಯ ಈ ಕೆಳಕಂಡಂತೆ ತಿಳಿಸಲಾಗಿದೆ.
“ಕ್ಯಾಪಿಟಟನ್ ಶುಲ್ಕ” ವಿಭಾಗವು ಶಾಲೆಯಿಂದ ಸೂಚಿಸಲಾದ ಶುಲ್ಕವನ್ನು ಹೊರತುಪಡಿಸಿ ಯಾವುದೇ ರೀತಿಯ ದೇಣಿಗೆ ಅಥವಾ ಕೊಡುಗೆ ಅಥವಾ 2(ಬಿ)-ಪಾವತಿಯನ್ನು ಸೂಚಿಸುತ್ತದೆ;
ಸೆಕ್ಷನ್ 13 (1) ಪ್ರವೇಶಕ್ಕೆ ಕ್ಯಾಪಿಟೇಶನ್ ಶುಲ್ಕ ಮತ್ತು ಸ್ಕ್ರೀನಿಂಗ್ ವಿಧಾನವಿಲ್ಲ.
(1) ಯಾವುದೇ ಶಾಲೆ ಅಥವಾ ವ್ಯಕ್ತಿಯು ಮಗುವನ್ನು ದಾಖಲಿಸಿಕೊಳ್ಳುವಾಗ, ಯಾವುದೇ ಕ್ಯಾಪಿಟೇಶನ್ ಶುಲ್ಕವನ್ನು ಸಂಗ್ರಹಿಸಬಾರದು ಮತ್ತು ಮಗುವನ್ನು ಅಥವಾ ಅವನ ಅಥವಾ ಅವಳ ಹೆತ್ತವರನ್ನು ಅಥವಾ ಪೋಷಕರನ್ನು ಯಾವುದೇ ಸ್ಕ್ರೀನಿಂಗ್ ಕಾರ್ಯವಿಧಾನಕ್ಕೆ ಒಳಪಡಿಸಬಾರದು.
(2) ಯಾವುದೇ ಶಾಲೆ ಅಥವಾ ವ್ಯಕ್ತಿ, ಉಪ-ವಿಭಾಗ (1) ರ ನಿಬಂಧನೆಗಳನ್ನು ಉಲ್ಲಂಘಿಸಿದರೆ, –
(ಎ) ಕ್ಯಾಪಿಟೇಶನ್ ಶುಲ್ಕವನ್ನು ಪಡೆದರೆ, ವಿಧಿಸಲಾದ ಕ್ಯಾಪಿಟೇಶನ್ ಶುಲ್ಕದ ಹತ್ತು ಪಟ್ಟು ದಂಡದಿಂದ ಶಿಕ್ಷೆಗೆ ಗುರಿಯಾಗತಕ್ಕದ್ದು;
(ಬಿ) ಮಗುವನ್ನು ಸ್ಕ್ರೀನಿಂಗ್ ಕಾರ್ಯವಿಧಾನಕ್ಕೆ ಒಳಪಡಿಸಿದರೆ, ಮೊದಲ ಉಲ್ಲಂಘನೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳವರೆಗೆ ಮತ್ತು ನಂತರದ ಪ್ರತಿ ಉಲ್ಲಂಘನೆಗೆ ಐವತ್ತು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಬಹುದು.
ಶಿಕ್ಷಣ ಹಕ್ಕು ಕಾಯ್ದೆ-2009ರ ಸೆಕ್ಷನ್-2(b) ರಂತೆ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿದ ಶುಲ್ಕವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ (SATS) ಸಾರ್ವಜನಿಕರು ಮತ್ತು ಪೋಷಕರಿಗೆ ಲಭವಾಗುವಂತೆ ಪ್ರಕಟಪಡಿಸಲು ಹಾಗೂ ಶುಲ್ಕ ವಸೂಲಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಕ್ಷನ್-13ರ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ.
ತಮ್ಮ ವ್ಯಾಪ್ತಿಯ ಯಾವುದೇ ಶಾಲೆಗಳು ಸೆಕ್ಷನ್-2(b) ಮತ್ತು ಸೆಕ್ಷನ್ 13(1) ಅನ್ನು ಉಲ್ಲಂಘಿಸಿರುವ ಬಗ್ಗೆ ದೂರುಗಳು ದಾಖಲಾದಲ್ಲಿ, ಸೆಕ್ಷನ್ 13(2)a ಮತ್ತು ಸೆಕ್ಷನ್ 13(2)b ರಂತೆ ಹಾಗೂ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ-23ರಲ್ಲಿ ತಿಳಿಸಿದಂತೆ ಅಗತ್ಯ ಕ್ರಮವಹಿಸಲು ಎಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.


