HomeKarnatakaಜಾತಕ ತೋರಿಸಲು ಹೋಗಿದ್ದ ಯುವತಿ ಮೇಲೆ ದೇವಸ್ಥಾನದ ಅರ್ಚಕನಿಂದಲೇ ಅತ್ಯಾಚಾರ

ಜಾತಕ ತೋರಿಸಲು ಹೋಗಿದ್ದ ಯುವತಿ ಮೇಲೆ ದೇವಸ್ಥಾನದ ಅರ್ಚಕನಿಂದಲೇ ಅತ್ಯಾಚಾರ

ಚಿಕ್ಕಮಗಳೂರು: ಮದುವೆಗಾಗಿ ಯುವತಿಯೊಬ್ಬಳು ಜಾತಕ ತೋರಿಸಲು ಹೋಗಿದ್ದ ವೇಳೆ ದೇವಸ್ಥಾನದ ಅರ್ಚಕರೇ ಯುವತಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೊರಟ್ಟಿ ಗ್ರಾಮದ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ವಿರುದ್ಧ ಅತ್ಯಾಚಾರವೆಸಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಂತ್ರಸ್ತ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಕೃಷ್ಣರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾತಕ ತೋರಿಸಲೆಂದು ಯುವತಿ ಅರ್ಚಕನನ್ನು ಭೇಟಿಯಾಗಿದ್ದರು. ಈ ವೇಳೆ ಅರ್ಚಕ ಕೃಷ್ಣರಾವ್ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಹಲವು ಬಾರಿ ಯುವತಿ ಮೇಲೆ ಆತ ದೌರ್ಜನ್ಯವೆಸಗಿದ್ದಾಗಿ ಯುವತ್ ಆರೋಪಿಸಿದ್ದಾರೆ.

ನಿನ್ನ ಜಾತಕದಲ್ಲಿ ದೋಷವಿದೆ. ಅದಕ್ಕೆ ತಡೆಯೊಡ್ಡಬೇಕು ಎಂದು ಯುವತಿಯನ್ನು ಅರ್ಚಕ ಹೆದರಿಸಿದ್ದನಂತೆ. ದೋಷ ಪರಿಹಾರ ಹೇಳುತ್ತೇನೆ ಎಂದು ಕರೆದು ಯುವತಿಯನ್ನು ಪದೇ ಪದೇ ಅತ್ಯಚಹಾರವೆಸಗಿದ್ದಾಗಿ ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬಣಕಲ್ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular