ತನ್ನ ವೈವಿಧ್ಯಮಯ ಹಾಡುಗಳ ಮೂಲಕವೇ ಗಾಂಧಿನಗರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಪ್ರೇಮದ ಊರಲಿ ಸಿನಿಮಾದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಚಿತ್ರದ ಬಹುನಿರೀಕ್ಷಿತ ರೈತಂಗೆ ಹೆಣ್ಣು ಯಾರು ಕೊಡ್ತಾರಣ್ಣೋ ಎಂಬ ಹಾಡು ನಾಳೆ ಮಧ್ಯಾಹ್ನ ೨ ಗಂಟೆಗೆ ವನಿಲಾ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದೆ.
ಮನೋಜ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀರಾಮ್, ತಪಸ್ವಿನಿ ಪೂಣಚ್ಚ, ರಂಗಾಯಣ ರಘು ಹಾಗೂ ರಾಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವನಿಲಾ ಎಂಟರ್ಟೈನ್ಮೆಂಟ್ಸ್ ಮತ್ತು ಜನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ್ ಡಿ ಎಸ್ ಹಾಗೂ ರಮೇಶ್ ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ದೇವೇಂದ್ರ ಎಂ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದು, ಡಾ ಕೆ ಮಂಜುನಾಥ್, ರವಿ ಹೊಳಲು ಮತ್ತು ಡಾ ಪ್ರವೀಣ್ ರಾಮಚಂದ್ರ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರಕ್ಕೆ ರಾಜ್‌ಕಾಂತ್ ಎಸ್ ಕೆ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಸಂಕಲನ ಮಾಡಿದ್ದು, ಮನೋಜ್ ಕುಮಾರ್, ಹುಸೇನ್ ಹೆಚ್‌ಡಿಸಿ ಮತ್ತು ಪ್ರಭು ನೃತ್ಯ ನಿರ್ದೇಶನ ಮಾಡಿದ್ದಾರೆ. ಸೋಮು ಬಿದದಿ ಅವರ ಮೇಕಪ್ ಈ ಚಿತ್ರಕ್ಕಿದೆ. ಬಿಡುಗಡೆಯಾಗಲಿರುವ ಈ ಹೊಸ ಹಾಡು ಕೇಳುಗರ ಗಮನ ಸೆಳೆಯುವ ನಿರೀಕ್ಷೆಯಿದೆ.

