HomeKarnatakaಆಧಾರ್ ಸೇವೆಗಳನ್ನು ಮತ್ತಷ್ಟು ಹೆಚ್ಚಿಸಿದ ಅಂಚೆ ಇಲಾಖೆ: ಸಮೀಪದ ಕಚೇರಿಗಳಲ್ಲೇ ವ್ಯವಸ್ಥೆ

ಆಧಾರ್ ಸೇವೆಗಳನ್ನು ಮತ್ತಷ್ಟು ಹೆಚ್ಚಿಸಿದ ಅಂಚೆ ಇಲಾಖೆ: ಸಮೀಪದ ಕಚೇರಿಗಳಲ್ಲೇ ವ್ಯವಸ್ಥೆ

ಬಳ್ಳಾರಿ: ಜಿಲ್ಲೆಯ ನಾಗರಿಕರಿಗೆ ಸುಲಭ, ಸುರಕ್ಷಿತ ಹಾಗೂ ಪಾರದರ್ಶಕ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಚೆ ಇಲಾಖೆ (ಬಳ್ಳಾರಿ ವಿಭಾಗ) ಜಿಲ್ಲೆಯ ವಿವಿಧ ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆಗಳನ್ನು ಮತ್ತಷ್ಟು ಬಲಪಡಿಸಿದೆ.

ಸಾರ್ವಜನಿಕರಿಗೆ ತಮ್ಮ ಸಮೀಪದ ಅಂಚೆ ಕಚೇರಿಯಲ್ಲೇ ಗುಣಮಟ್ಟದ ಆಧಾರ್ ಸೇವೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 12 ಆಧಾರ್ ಕೌಂಟರ್‌ಗಳು ತರಬೇತಿ ಪಡೆದ ಸಿಬ್ಬಂದಿ ಹಾಗೂ ಆಧುನಿಕ ಬಯೋಮೆಟ್ರಿಕ್ ಸಾಧನಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಬಳ್ಳಾರಿ ಜಿಲ್ಲೆಯ ಆಧಾರ್ ಕೇಂದ್ರಗಳ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿ ಮುಖ್ಯ ಅಂಚೆ ಕಚೇರಿ: 3 ಕೌಂಟರ್‌ಗಳು

ಕೌಲ್ ಬಜಾರ್ ಅಂಚೆ ಕಚೇರಿ: 1 ಕೌಂಟರ್

ಕಾAಟೋನ್ ಮೆಂಟ್ ಅಂಚೆ ಕಚೇರಿ: 1 ಕೌಂಟರ್

ಗಾAಧಿನಗರ ಅಂಚೆ ಕಚೇರಿ: 1 ಕೌಂಟರ್

ಕುರುಗೋಡು ಅಂಚೆ ಕಚೇರಿ: 1 ಕೌಂಟರ್

ಸಿರಿಗೇರಿ ಅಂಚೆ ಕಚೇರಿ: 1 ಕೌಂಟರ್

ಸಿರುಗುಪ್ಪ ಅಂಚೆ ಕಚೇರಿ: 1 ಕೌಂಟರ್

ಸAಡೂರು ಅಂಚೆ ಕಚೇರಿ: 1 ಕೌಂಟರ್

ಡಿ.ಟಿ. ಶಿಪ್ ಅಂಚೆ ಕಚೇರಿ: 1 ಕೌಂಟರ್

ಕAಪ್ಲಿ ಅಂಚೆ ಕಚೇರಿ: 1 ಕೌಂಟರ್

ಲಭ್ಯವಿರುವ ಆಧಾರ್ ಸೇವೆಗಳು:

ಹೊಸ ನೋಂದಣಿ: ಅರ್ಹರಿಗೆ ಸಂಪೂರ್ಣ ಉಚಿತವಾಗಿ ಹೊಸ ನೋಂದಣಿ.

ಬಯೋಮೆಟ್ರಿಕ್ ನವೀಕರಣ: ಫೋಟೋ, ಬೆರಳಚ್ಚು ಹಾಗೂ ಐರಿಸ್ ನವೀಕರಣ.

ಡೆಮೋಗ್ರಫಿಕ್ ನವೀಕರಣ: ಮೊಬೈಲ್ ಸಂಖ್ಯೆ, ವಿಳಾಸ, ಹೆಸರು, ಜನ್ಮ ದಿನಾಂಕ ಹಾಗೂ ಲಿಂಗ ತಿದ್ದುಪಡಿ.

ದಾಖಲೆ ನವೀಕರಣ ಹಾಗೂ ಯುಐಡಿಎಐ ಅನುಮೋದಿತ ಇತರೆ ಸೇವೆಗಳು.

ಸಾರ್ವಜನಿಕರಲ್ಲಿ ಮನವಿ:

ಹೊಸ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ನವೀಕರಣ ಸೇವೆಗಳಿಗೆ ಯುಐಡಿಎಐ ನಿಗದಿಪಡಿಸಿರುವ ಅಧಿಕೃತ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತದೆ. ನಾಗರಿಕರು ದೂರದ ಪ್ರಯಾಣ ಹಾಗೂ ಅನಗತ್ಯ ಅಲೆದಾಟವನ್ನು ತಪ್ಪಿಸಲು ತಮ್ಮ ಸಮೀಪದ ಅಂಚೆ ಕಚೇರಿಗೆ ಅಗತ್ಯ ಮೂಲ ದಾಖಲೆಗಳೊಂದಿಗೆ ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಅಂಚೆ ಕಚೇರಿಗಳ ಅಧೀಕ್ಷಕರು (ಬಳ್ಳಾರಿ ವಿಭಾಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular