HomeKarnatakaಠೇವಣಿ ಹಣ ಕೊಡದೇ ಪಂಗನಾಮ ಹಾಕಿದ ಸೊಸೈಟಿಗೆ ದಂಡ, ಪರಿಹಾರ ನೀಡಲು ಆದೇಶ

ಠೇವಣಿ ಹಣ ಕೊಡದೇ ಪಂಗನಾಮ ಹಾಕಿದ ಸೊಸೈಟಿಗೆ ದಂಡ, ಪರಿಹಾರ ನೀಡಲು ಆದೇಶ

ಧಾರವಾಡ: ಠೇವಣಿ ಹಣ ಕೊಡದೇ ಪಂಗನಾಮ ಹಾಕಿದ ವಿ.ಎಸ್. ಸಾಧುನವರ ಸೊಸೈಟಿಗೆ ದಂಡ ವಿಧಿಸಿದ್ದು, ಪರಿಹಾರ ನೀಡಲು ಆದೇಶಿಸಲಾಗಿದೆ.

ಧಾರವಾಡದ ನಿವಾಸಿಯಾದ ಮುದಕಪ್ಪ ಎಮ್. ನಿಂಬೋಜಿ, ಪರಪ್ಪ ಗುಳಪ್ಪನವರ ಹಾಗೂ ನಾಗಪ್ಪ ಬಡಿಗೇರ, ಎಂಬುವವರು ಎದುರುದಾರರ ಸೊಸೈಟಿಯ ಸದಸ್ಯರಾಗಿ ಎಲ್ಲರೂ ಸೇರಿ ಸುಮಾರು 4 ಲಕ್ಷಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಠೇವಣಿಯಾಗಿ ಇಟ್ಟಿದ್ದರು ಠೇವಣಿ ಅವಧಿ ಮುಗಿದ ಮೇಲೆ ಬಡ್ಡಿ ಸಮೇತ ತಮ್ಮ ಠೇವಣಿ ಹಣ ವಾಪಸ್ಸು ಕೊಡುವಂತೆ 3 ಜನ ದೂರುದಾರರು ಎದುರುದಾರರ ಸೊಸೈಟಿಗೆ ಹಲವು ಬಾರಿ ವಿನಂತಿಸಿದರೂ ಎದುರುದಾರರು ಹಣ ಹಿಂದಿರುಗಿಸಲಿಲ್ಲ.  ದೂರುದಾರರ ಯಾವುದೇ ಕೋರಿಕೆಯನ್ನು ಅವರು ಪರಿಗಣಿಸಲಿಲ್ಲ.  ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ಸೊಸೈಟಿಯ ಚೇರ್ಮನರಾದ ವಿ.ಎಸ್. ಸಾಧುನವರ ಮೇಲೆ ಕ್ರಮ ಕೈಗೊಂಡು ತಮ್ಮ ಎಫ್.ಡಿ. ಮತ್ತು ಉಳಿತಾಯ ಖಾತೆಯ ಹಣವನ್ನು ಕೊಡಿಸುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿನಾಂಕ:20.03.2026 ರಂದು 3 ಜನ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.          

ಸದರಿ ದೂರುಗಳನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮಹಿಳಾ ಸದಸ್ಯರು, ಪ್ರಭು. ಹಿರೇಮಠ ಸದಸ್ಯರು, ದೂರುದಾರರು ಎದುರುದಾರರ ಸೊಸೈಟಿಯಲ್ಲಿ ಎಫ್.ಡಿ ಮತ್ತು ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಠೇವಣಿ ಅವಧಿ ಮುಗಿದ ಮೇಲೆ ಬಡ್ಡಿ ಸಮೇತ ದೂರುದಾರರ ಹಣವನ್ನು ಹಿಂದಿರುಗಿಸುವುದು ಎದುರುದಾರ ಸೋಸೈಟಿಯ ಆದ್ಯ ಕರ್ತವ್ಯವಾಗಿದೆ.  ಆದರೆ 3 ಜನ ದೂರುದಾರರು ಠೇವಣಿ ಅವಧಿ ಮುಗಿದ ಮೇಲೆ ಹಲವಾರುಬಾರಿ ಹೋಗಿ ಎದುರುದಾರರನ್ನು ತಮ್ಮ ಹಣ ವಾಪಸ್ಸು ಕೊಡುವಂತೆ ವಿನಂತಿಸಿದರೂ ಎದುರುದಾರ ಸೋಸೈಟಿಯವರ ಹಣ ಹಿಂದಿರುಗಿಸಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಹಣ ಹಿಂದಿರುಗಿಸುವ ಬಗ್ಗೆ ಎದುರುದಾರರಿಂದ ಯಾವುದೇ ಭರವಸೆಯು ಇಲ್ಲವಾದ್ದರಿಂದ ಎದುರುದಾರರ ಸೋಸೈಟಿಯ ಚೇರ್ಮನ್ನರಾದ ವೀರುಪಾಕ್ಷಿ  ಸಾಧುನವರ ಗ್ರಾಹಕರಾದ ದೂರುದಾರರಿಗೆ ಮೋಸ ವೆಸಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ತೀರ್ಪು ನೀಡಿದೆ.  ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎಲ್ಲ 3 ಜನ ದೂರುದಾರರು ಇಟ್ಟಿರುವ ಠೇವಣಿ ಮತ್ತು ಅದರ ಮೇಲೆ ಬಡ್ಡಿ ಲೆಕ್ಕ ಹಾಕಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ತಲಾ ರೂ.50,000/- ಪರಿಹಾರ ಹಾಗೂ ತಲಾ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಚೇರ್ಮನ್ ವಿರುಪಾಕ್ಷಿ ಸಾಧುನವರಿಗೆ ನಿರ್ದೇಶಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular