ಬೆಂಗಳೂರು: ರಾಜ್ಯ ಸರ್ಕಾರದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾತೆ ಹಂಚಿಕೆಯ ಪಟ್ಟಿಯನ್ನು ಲೋಕಭವನಕ್ಕೆ ರವಾನಿಸಿದ್ದಾರೆ. ಹೌದು. ಕರ್ನಾಟಕದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಹಲವು ಸುತ್ತಿನ ಚರ್ಚೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮಟ್ಟದ ಸಮಾಲೋಚನೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
ಈ ಪೈಕಿ ಚಲುವರಾಯಸ್ವಾಮಿ ಅವರಿಗೆ ಮತ್ತೆ ಕೃಷಿ ಖಾತೆ ನೀಡಲಾಗಿದ್ದು, ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಇಲಾಖೆ ಜವಾಬ್ದಾರಿ ಮುಂದುವರಿದಿದೆ. ರಿಜ್ವಾನ್ ಅರ್ಷದ್ ಅವರಿಗೆ ಆಹಾರ ಖಾತೆ ನೀಡಲಾಗಿದೆ.
ಖಾತೆ ಹಂಚಿಕೆ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದೊಳಗೆ ಚರ್ಚೆ ನಡೆದಿತ್ತು. ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಂಡಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಹೊಸ ಸಚಿವರು ತಮ್ಮ ಇಲಾಖೆಗಳ ಪರವಾಗಿ ಸಕ್ರಿಯವಾಗಿ ಭಾಗವಹಿಸುವ ನಿರೀಕ್ಷೆಯಿದೆ.
ನೂತನ ಸಚಿವರಿಗೆ ನೀಡಿರುವ ಖಾತೆಗಳ ವಿವರ ಹೀಗಿದೆ:
- ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ
- ಎನ್. ಚಲುವರಾಯಸ್ವಾಮಿ – ಕೃಷಿ ಇಲಾಖೆ
- ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
- ಮಧು ಬಂಗಾರಪ್ಪ – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
- ಜಮೀರ್ ಅಹಮದ್ ಖಾನ್ – ವಸತಿ ಇಲಾಖೆ
- ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ
- ಕೆ.ಹೆಚ್. ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ
- ಕೆ.ಎಸ್. ಬಸವಂತಪ್ಪ – ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
- ಡಾ. ಅಜಯ್ ಸಿಂಗ್ – ಅರಣ್ಯ ಇಲಾಖೆ
- ಎಸ್.ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂ ವಿಜ್ಞಾನ ಇಲಾಖೆ
- ಪುಟ್ಟರಂಗ ಶೆಟ್ಟಿ – ಪಶು ಸಂಗೋಪನೆ
- ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
- ಹೆಚ್.ಸಿ. ಬಾಲಕೃಷ್ಣ – ಸಣ್ಣ ನೀರಾವರಿ ಇಲಾಖೆ
- ಯು ಟಿ ಖಾದರ್, ಆರೋಗ್ಯ
ಖಾತೆ ಹಂಚಿಕೆಯ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಭವನಕ್ಕೆ ಕಳುಹಿಸಿದ್ದು, ಅಧಿಕೃತ ಅನುಮೋದನೆಯ ಬಳಿಕ ಖಾತೆ ಹಂಚಿಕೆ ಅಂತಿಮಗೊಳ್ಳಲಿದೆ.

