HomeLatest Newsಉದ್ಯೋಗಿಗಳಿಗೆ ಗುಡ್ ನ್ಯೂಸ್‌ ; UPI ಮೂಲಕ ಪಿಎಫ್ ಹಣ ವಿತ್‌ಡ್ರಾ! ಸೆಪ್ಟೆಂಬರ್‌ನಿಂದಲೇ ಸೇವೆ ಲಭ್ಯ

ಉದ್ಯೋಗಿಗಳಿಗೆ ಗುಡ್ ನ್ಯೂಸ್‌ ; UPI ಮೂಲಕ ಪಿಎಫ್ ಹಣ ವಿತ್‌ಡ್ರಾ! ಸೆಪ್ಟೆಂಬರ್‌ನಿಂದಲೇ ಸೇವೆ ಲಭ್ಯ

ಇಪಿಎಫ್‌ಒ ಇತ್ತೀಚಿನ ದಿನಗಳಲ್ಲಿ ಹಲವು ಹೊಸ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಪಿಎಫ್ ವಿತ್‌ಡ್ರಾ ಸೇರಿದಂತೆ ಹಲವು ನಿಯಮಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡಲಾಗುತ್ತಿದೆ. ಇದೀಗ ಪಿಎಫ್ ಕ್ಲೇಮ್‌ಗಳ ಪಾವತಿ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಶೀಘ್ರದಲ್ಲೇ ಯುಪಿಐ ಮೂಲಕ ಪಿಎಫ್ ಹಣ ವಿತ್‌ಡ್ರಾ ಮಾಡುವ ಸೌಲಭ್ಯ ಲಭ್ಯವಾಗುವ ಸಾಧ್ಯತೆಯಿದೆ.

ನಿಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್‌ಡ್ರಾ ಮಾಡಲು ಬಯಸುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗೆ ಮಹತ್ವದ್ದಾಗಿದೆ. ಇನ್ನು ಸುಮಾರು ಒಂದು ತಿಂಗಳೊಳಗೆ ಪಿಎಫ್ ಯುಪಿಐ ವಿತ್‌ಡ್ರಾ ಆಯ್ಕೆ ಲಭ್ಯವಾಗುವ ಸಾಧ್ಯತೆಯಿದೆ. ಈ ಸೌಲಭ್ಯದ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದ್ದು, ಪಿಎಫ್ ಖಾತೆದಾರರು ಯಾವಾಗ ಲಭ್ಯವಾಗಲಿದೆ ಎಂದು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ಹಲವು ಬಾರಿ ತಿಳಿಸಿತ್ತು.

ಇದೀಗ ಈ ಸೌಲಭ್ಯಕ್ಕೆ ದಾರಿ ಸುಗಮವಾಗಿದ್ದು, ಸೆಪ್ಟೆಂಬರ್‌ನಲ್ಲಿ ಇಪಿಎಫ್‌ಒ ಈ ಫೀಚರ್‌ ಅನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಇಪಿಎಫ್‌ಒ ಮೂಲಗಳು ತಿಳಿಸಿವೆ. ಈ ಸೇವೆ ಜಾರಿಗೆ ಬಂದರೆ ಯುಪಿಐ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಪಿಎಫ್ ಹಣವನ್ನು ಪಡೆಯಲು ಸಾಧ್ಯವಾಗಬಹುದು. ಕ್ಲೇಮ್‌ ಮೊತ್ತಕ್ಕಾಗಿ ಹಲವು ದಿನಗಳ ಕಾಲ ಕಾಯುವ ಅಗತ್ಯವೂ ಕಡಿಮೆಯಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಪಿಐ ಮೂಲಕ ಪಿಎಫ್ ಹಣವನ್ನು ಹೇಗೆ ಪಡೆಯಬಹುದು?

ಕೇಂದ್ರ ಸರ್ಕಾರದ ಸಂಸ್ಥೆಯಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಸ್ತುತ ಯುಪಿಐ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಎನ್‌ಪಿಸಿಐ ಮತ್ತು ಇಪಿಎಫ್‌ಒ ಒಟ್ಟಾಗಿ ಪಿಎಫ್ ಯುಪಿಐ ವಿತ್‌ಡ್ರಾ ಸೇವೆಯನ್ನು ಅಭಿವೃದ್ಧಿಪಡಿಸುತ್ತಿವೆ. ಈ ವ್ಯವಸ್ಥೆ ಸದ್ಯ ಪರೀಕ್ಷಾ ಹಂತದಲ್ಲಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.ಎನ್‌ಪಿಸಿಐ ಸಹಕಾರದೊಂದಿಗೆ ಇಪಿಎಫ್‌ಒ ಈ ಹೊಸ ಸೌಲಭ್ಯವನ್ನು ಜಾರಿಗೆ ತರಲಿದೆ. ಎನ್‌ಪಿಸಿಐನ ಭೀಮ್ ಯುಪಿಐ ಆ್ಯಪ್‌ನಲ್ಲಿ ಮೊದಲು ಪಿಎಫ್ ವಿತ್‌ಡ್ರಾ ಸೌಲಭ್ಯವನ್ನು ಪರಿಚಯಿಸುವ ಸಾಧ್ಯತೆಯಿದೆ. ಯುಪಿಐಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಪಿಎಫ್ ಹಣವನ್ನು ಪಡೆಯಲು ಸಾಧ್ಯವಾಗಲಿದೆ.

ಇದರಿಂದ ಕ್ಲೇಮ್ ಸಲ್ಲಿಕೆ ಹಾಗೂ ಪಾವತಿ ಪ್ರಕ್ರಿಯೆ ಮತ್ತಷ್ಟು ವೇಗವಾಗಲಿದೆ. ಕ್ಲೇಮ್ ಅನುಮೋದನೆಯಾದ ಬಳಿಕ ಯುಪಿಐಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಬಹುದು.ಮೊದಲ ಹಂತದಲ್ಲಿ ಭೀಮ್ ಆ್ಯಪ್‌ನಲ್ಲಿ ಈ ಸೇವೆ ಲಭ್ಯವಾಗಲಿದ್ದು, ನಂತರ ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಇತರ ಯುಪಿಐ ಪ್ಲಾಟ್‌ಫಾರ್ಮ್‌ಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

ಹಂತ ಹಂತವಾಗಿ ಎಲ್ಲಾ ಯುಪಿಐ ಪ್ಲಾಟ್‌ಫಾರ್ಮ್‌ಗಳಿಗೆ ವಿಸ್ತರಣೆ

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಯುಪಿಐ ಪ್ಲಾಟ್‌ಫಾರ್ಮ್‌ಗಳಲ್ಲಿ ಪಿಎಫ್ ವಿತ್‌ಡ್ರಾ ಸೌಲಭ್ಯವನ್ನು ಪರಿಚಯಿಸಲಾಗುತ್ತದೆ. ಆದರೆ ಯುಪಿಐ ಮೂಲಕ ಪಿಎಫ್ ಹಣ ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

  • ಸದಸ್ಯರ ಯುಎಎನ್ (UAN) ಸಕ್ರಿಯವಾಗಿರಬೇಕು.
  • ಆಧಾರ್, ಪ್ಯಾನ್ ಹಾಗೂ ಬ್ಯಾಂಕ್ ಕೆವೈಸಿ ವಿವರಗಳು ಅಪ್‌ಡೇಟ್ ಆಗಿರಬೇಕು.
  • ಬ್ಯಾಂಕ್ ಖಾತೆಯು ಯುಪಿಐಗೆ ಲಿಂಕ್ ಆಗಿರಬೇಕು.
  • ಮೊದಲು ಇಪಿಎಫ್‌ಒ ಪೋರ್ಟಲ್ ಮೂಲಕ ಪಿಎಫ್ ಕ್ಲೇಮ್ ಸಲ್ಲಿಸಬೇಕು.
  • ಅಧಿಕಾರಿಗಳು ಕ್ಲೇಮ್ ಅನ್ನು ಅನುಮೋದಿಸಿದ ಬಳಿಕ ಹಣ ವರ್ಗಾವಣೆಯಾಗುತ್ತದೆ.

ಯುಪಿಐ ಸೌಲಭ್ಯ ಬಂದರೂ ಇಚ್ಛೆಯಂತೆ ಯಾವಾಗ ಬೇಕಾದರೂ ಪಿಎಫ್ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಉದ್ಯೋಗ ಕಳೆದುಕೊಂಡ ಸಂದರ್ಭ, ಆರೋಗ್ಯ ತುರ್ತು ಪರಿಸ್ಥಿತಿ, ಶಿಕ್ಷಣ, ವಿವಾಹ ಸೇರಿದಂತೆ ಇಪಿಎಫ್‌ಒ ನಿಯಮಗಳಲ್ಲಿ ಅನುಮತಿಸಲಾದ ಸಂದರ್ಭಗಳಲ್ಲಿ ಮಾತ್ರ ಪಿಎಫ್ ಹಣವನ್ನು ಹಿಂಪಡೆಯಬೇಕಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular