HomeEntertainmentನ್ಯೂಯಾರ್ಕ್‌ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಕೆಂಪು ಸೀರೆಯಲ್ಲಿ ನಟಿಯ ಹಾಟ್ ಲುಕ್ ವೈರಲ್

ನ್ಯೂಯಾರ್ಕ್‌ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಕೆಂಪು ಸೀರೆಯಲ್ಲಿ ನಟಿಯ ಹಾಟ್ ಲುಕ್ ವೈರಲ್

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ತಮ್ಮ ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ತೆಗೆಸಲಾದ ಈ ಫೋಟೋಗಳಲ್ಲಿ ಅವರು ಕೆಂಪು ಬಣ್ಣದ ಮಿನುಗು ಸೀರೆಯಲ್ಲಿ ಅತ್ಯಂತ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸ್ಟ್ರಾಪ್‌ಲೆಸ್ ಬ್ಲೌಸ್ ಹಾಗೂ ಆಧುನಿಕ ಶೈಲಿಯ ಸೀರೆ ಉಡುಗೆಯಲ್ಲಿ ಮಿಂಚಿರುವ ಪೂಜಾ, ಅದಕ್ಕೆ ತಕ್ಕಂತೆ ಮುಕ್ತ ಕೇಶರಾಶಿ ಹಾಗೂ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ. ಬಂಗಾರದ ಬಣ್ಣದ ಮೆಟ್ಟಿಲುಗಳ ಬಳಿ ಅವರು ನೀಡಿದ ಪೋಸ್‌ಗಳು ಅವರ ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಎತ್ತಿಹಿಡಿದಿವೆ.

ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೂಜಾ ಹೆಗ್ಡೆ, ಅಲ್ಲಿನ ಸಾರ್ವಜನಿಕ ಪ್ರತಿನಿಧಿಗಳಿಂದ ಗೌರವ ಗೌರವಾದರಗಳನ್ನೂ ಸ್ವೀಕರಿಸಿದ್ದರು. ಆ ಪ್ರವಾಸದ ವೇಳೆಯಲ್ಲಿ ತೆಗೆಸಿದ ಈ ರೆಡ್ ಹಾಟ್ ಫೋಟೋಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಫ್ಯಾಷನ್ ಪ್ರಿಯರ ಮನ ಗೆದ್ದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular