HomeLatest Newsಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಶೈಲಿ ಮರುಸೃಷ್ಟಿ:ಇಂಗ್ಲೆಂಡ್ ವಿರುದ್ಧ ಭಾರತ ಭಿನ್ನಚೇತನರ ತಂಡಕ್ಕೆ ಭಾರಿ ಗೆಲುವು

ಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಶೈಲಿ ಮರುಸೃಷ್ಟಿ:ಇಂಗ್ಲೆಂಡ್ ವಿರುದ್ಧ ಭಾರತ ಭಿನ್ನಚೇತನರ ತಂಡಕ್ಕೆ ಭಾರಿ ಗೆಲುವು

ಲಂಡನ್ ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಭಿನ್ನಚೇತನರ ಕ್ರಿಕೆಟ್ ತಂಡ 118 ರನ್ ಗಳ ಬೃಹತ್ ಜಯ ಸಾಧಿಸಿದೆ. ಪಂದ್ಯದ ಗೆಲುವಿನ ಸಂಭ್ರಮದಲ್ಲಿ ಆಟಗಾರರು ಲಾರ್ಡ್ಸ್ ಬಾಲ್ಕನಿಯಲ್ಲಿ ಬ್ಲೇಜರ್ ಕಚೇರಿ ಸಂಭ್ರಮಿಸುವ ಮೂಲಕ 2002 ರಲ್ಲಿ ಸೌರವ್ ಗಂಗೂಲಿ ಪ್ರದರ್ಶಿಸಿದ್ದ ಐಕಾನಿಕ್ ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಅರ್ಜುನ್ ಗವಾರೆ ಅವರ 68 ರನ್ ಹಾಗೂ ನಾಯಕ ಮಜೀದ್ ಮಗ್ರೆ ಅವರ ಕೇವಲ 19 ಎಸೆತಗಳಲ್ಲಿ ಮೂಡಿಬಂದ ಅಬ್ಬರದ 63 ರನ್ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ಹಿಲಾಲ್ ಅಹ್ಮದ್ ವಾನಿ ಹಾಗೂ ಜಯೇಶ್ ಪರ್ಮಾರ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಕೇವಲ 88 ರನ್ ಗಳಿಗೆ ಆಲೌಟ್ ಮಾಡಲಾಯಿತು.

ಈ ಪಂದ್ಯದಲ್ಲಿ ಭಾರತ ಜಯಗಳಿಸಿದರೂ ಏಳು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 4-3 ಅಂತರದಿಂದ ಕೈವಶ ಮಾಡಿಕೊಂಡಿದೆ. ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಲಾರ್ಡ್ಸ್ ಅಂಗಳದ ಬಾಲ್ಕನಿಯಲ್ಲಿ ಬ್ಲೇಜರ್ ತೆಗೆದು ದೇಶದ ಧ್ವಜ ಹಾರಿಸಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾರೀರಿಕ, ಶ್ರವಣ ಮತ್ತು ಕಲಿಕಾ ನ್ಯೂನತೆ ಹೊಂದಿರುವ ಕ್ರೀಡಾಪಟುಗಳು ಒಟ್ಟಾಗಿ ಈ ಭಿನ್ನಚೇತನರ ಕ್ರಿಕೆಟ್ ಮಾದರಿಯಲ್ಲಿ ಪಾಲ್ಗೊಳ್ಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“>

“>

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular