HomeLatest Newsರುಚಿಕರ ಉಪ್ಪಿನಕಾಯಿ ವರ್ಷವಿಡೀ ಫ್ರೆಶ್ ಆಗಿರಬೇಕೆ? ಇಲ್ಲಿದೆ ನೋಡಿ ಸಿಂಪಲ್ ಅಂಡ್ ಬೆಸ್ಟ್ ಉಪ್ಪಿನಕಾಯಿ ಫಾರ್ಮುಲಾ

ರುಚಿಕರ ಉಪ್ಪಿನಕಾಯಿ ವರ್ಷವಿಡೀ ಫ್ರೆಶ್ ಆಗಿರಬೇಕೆ? ಇಲ್ಲಿದೆ ನೋಡಿ ಸಿಂಪಲ್ ಅಂಡ್ ಬೆಸ್ಟ್ ಉಪ್ಪಿನಕಾಯಿ ಫಾರ್ಮುಲಾ

ಊಟಕ್ಕೆ ಹೆಚ್ಚಿನ ರುಚಿ ನೀಡುವ ಉಪ್ಪಿನಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಕೆಲವೇ ದಿನಗಳಲ್ಲಿ ಬೂಸ್ಟ್ ಬರುವುದು ಅಥವಾ ಹಾಳಾಗುವುದು ಅನೇಕರ ದೂರು. ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿಗಳಿಗಿಂತ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಆರೋಗ್ಯಕರವಾದರೂ, ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುತ್ತದೆ. ನಿಮ್ಮ ಕೈರುಚಿಯ ಉಪ್ಪಿನಕಾಯಿ ದೀರ್ಘಕಾಲ ಬಾಳಿಕೆ ಬರಲು ಇಲ್ಲಿವೆ ಐದು ಪ್ರಮುಖ ಸಲಹೆಗಳು.

೧. ಸರಿಯಾದ ಜಾಡಿ ಮತ್ತು ತುಂಬುವ ವಿಧಾನ ಉಪ್ಪಿನಕಾಯಿ ಹಾಕಲು ಯಾವಾಗಲೂ ಅಗಲವಾದ ಬಾಯಿ ಇರುವ ಗಾಜಿನ ಜಾಡಿ ಅಥವಾ ಭರಣಿಗಳನ್ನು ಬಳಸಿ. ಜಾಡಿಗೆ ಉಪ್ಪಿನಕಾಯಿ ಹಾಕುವಾಗ ಅದನ್ನು ಪೂರ್ಣವಾಗಿ ತುಂಬಿಸಿ. ಜಾಡಿಯ ಮೇಲ್ಭಾಗದಲ್ಲಿ ಗಾಳಿ ಉಳಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಗಾಳಿಯ ಸಂಪರ್ಕವಿದ್ದರೆ ಉಪ್ಪಿನಕಾಯಿ ಬೇಗನೆ ಬೂಸ್ಟ್ ಹಿಡಿಯುವ ಸಾಧ್ಯತೆ ಇರುತ್ತದೆ.

೨. ಲೋಹದ ಬಳಕೆ ಬೇಡ ಉಪ್ಪಿನಕಾಯಿ ಸಂಗ್ರಹಿಸುವ ಜಾಡಿಗಳಿಗೆ ಲೋಹದ ಮುಚ್ಚಳಗಳನ್ನು ಬಳಸಬೇಡಿ. ಉಪ್ಪಿನಕಾಯಿಯಲ್ಲಿರುವ ಹುಳಿ ಅಥವಾ ವಿನೆಗರ್ ಲೋಹದೊಂದಿಗೆ ರಾಸಾಯನಿಕ ಕ್ರಿಯೆ ನಡೆಸಿ ಉಪ್ಪಿನಕಾಯಿ ಹಾಳಾಗುವಂತೆ ಮಾಡುತ್ತದೆ. ಅದೇ ರೀತಿ ಉಪ್ಪಿನಕಾಯಿ ತೆಗೆಯಲು ಲೋಹದ ಚಮಚ ಬಳಸುವ ಬದಲು ಪ್ಲಾಸ್ಟಿಕ್ ಅಥವಾ ಮರದ ಚಮಚಗಳನ್ನು ಬಳಸುವುದು ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

೩. ಶುಚಿತ್ವ ಮತ್ತು ಸ್ಟೆರಿಲೈಸೇಶನ್ ಉಪ್ಪಿನಕಾಯಿ ಹಾಕುವ ಮುನ್ನ ಜಾಡಿಯನ್ನು ಬಿಸಿ ನೀರಿನಿಂದ ತೊಳೆದು ಸಂಪೂರ್ಣವಾಗಿ ಒಣಗಿಸಿ. ಅದರಲ್ಲಿ ಸ್ವಲ್ಪವೂ ತೇವಾಂಶ ಇರಬಾರದು. ಸಾಧ್ಯವಾದರೆ ಜಾಡಿಯನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಒಣ ಹತ್ತಿ ಬಟ್ಟೆಯಿಂದ ಒರೆಸಿ. ತೇವಾಂಶವಿದ್ದರೆ ಉಪ್ಪಿನಕಾಯಿ ಎರಡೇ ದಿನದಲ್ಲಿ ಹಾಳಾಗುತ್ತದೆ.

೪. ಸಂಗ್ರಹಿಸುವ ಜಾಗ ಉಪ್ಪಿನಕಾಯಿ ಜಾಡಿಯನ್ನು ತೇವಾಂಶವಿರುವ ಜಾಗದಲ್ಲಿ ಇಡಬೇಡಿ. ಒಣಗಿದ ಮತ್ತು ಸೂರ್ಯನ ನೇರ ಬೆಳಕು ಬೀಳದ ಜಾಗದಲ್ಲಿ ಸಂಗ್ರಹಿಸಿಡುವುದು ಅದರ ಬಾಳಿಕೆಯನ್ನು ಹೆಚ್ಚಿಸುತ್ತದೆ. ಅಡುಗೆ ಮನೆಯಲ್ಲಿ ಒಲೆಗೆ ಹತ್ತಿರವಿರುವ ಜಾಗಕ್ಕಿಂತ ತಂಪಾದ ಮತ್ತು ಒಣಗಿದ ಜಾಗವೇ ಇದಕ್ಕೆ ಸೂಕ್ತ.

೫. ಪ್ರತ್ಯೇಕ ಡಬ್ಬಿಗಳ ಬಳಕೆ ನೀವು ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನಕಾಯಿ ತಯಾರಿಸಿದ್ದರೆ, ದಿನನಿತ್ಯದ ಬಳಕೆಗೆ ಒಂದು ಸಣ್ಣ ಜಾಡಿಯಲ್ಲಿ ಸ್ವಲ್ಪ ತೆಗೆದಿಟ್ಟುಕೊಳ್ಳಿ. ದೊಡ್ಡ ಜಾಡಿಯನ್ನು ಪದೇ ಪದೇ ತೆರೆಯುವುದರಿಂದ ಮತ್ತು ಚಮಚ ಹಾಕುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆದು ಇಡೀ ಉಪ್ಪಿನಕಾಯಿ ಹಾಳಾಗಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular