HomeLatest Newsಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದರೆ ಏನಾಗುತ್ತೆ? ನಿಮ್ಮ ದೇಹದಲ್ಲಿ ಆಗುವ ಈ ಬದಲಾವಣೆಗಳನ್ನು...

ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದರೆ ಏನಾಗುತ್ತೆ? ನಿಮ್ಮ ದೇಹದಲ್ಲಿ ಆಗುವ ಈ ಬದಲಾವಣೆಗಳನ್ನು ಕೇಳಿದರೆ ಅಚ್ಚರಿ ಪಡ್ತೀರಾ

ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವುದು ಕೇವಲ ಹಳೆಯ ಸಂಪ್ರದಾಯವಲ್ಲ, ಇದೊಂದು ಅತ್ಯುತ್ತಮ ಆರೋಗ್ಯಕರ ಅಭ್ಯಾಸ. ತಣ್ಣೀರು ಕುಡಿಯುವುದಕ್ಕಿಂತ ಬಿಸಿ ನೀರು ಕುಡಿಯುವುದು ದೇಹಕ್ಕೆ ಹೆಚ್ಚಿನ ಲಾಭಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳ ಕುರಿತಾದ ಮಾಹಿತಿ ಇಲ್ಲಿದೆ.

ಜೀರ್ಣಕ್ರಿಯೆ ಸುಲಭವಾಗುತ್ತದೆ: ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬಿಸಿ ನೀರು ರಾಮಬಾಣ. ಬೆಳಿಗ್ಗೆ 98.6 ಡಿಗ್ರಿ ಫ್ಯಾರನ್‌ಹೀಟ್ ಉಷ್ಣತೆಯ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆ ಸುಗಮವಾಗಿ ಜೀರ್ಣಾಂಗ ವ್ಯೂಹವು ಚುರುಕುಗೊಳ್ಳುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಬಿಸಿ ನೀರು ಕುಡಿಯುವುದರಿಂದ ರಕ್ತನಾಳಗಳು ಹಿಗ್ಗುತ್ತವೆ, ಇದರಿಂದ ಇಡೀ ದೇಹಕ್ಕೆ ರಕ್ತದ ಹರಿವು ಸುಗಮವಾಗುತ್ತದೆ. ಸ್ನಾನ ಮತ್ತು ಸೌನಾ ಥೆರಪಿ ಹೇಗೆ ರಕ್ತ ಪರಿಚಲನೆಗೆ ಸಹಕಾರಿಯೋ, ಹಾಗೆಯೇ ಬಿಸಿ ನೀರು ಕುಡಿಯುವುದು ಕೂಡ ದೇಹದ ಒಳಗಿನಿಂದ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೂಕ ಇಳಿಕೆಗೆ ಸಹಕಾರಿ: ನೀವು ತೂಕ ಇಳಿಸಿಕೊಳ್ಳಲು ಬಯಸಿದ್ದರೆ ಬಿಸಿ ನೀರು ಉತ್ತಮ ಆಯ್ಕೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸಿ ಮೆಟಬಾಲಿಸಂ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ದೇಹದಲ್ಲಿನ ಕ್ಯಾಲರಿಗಳು ಬೇಗನೆ ಕರಗಲು ಶುರುವಾಗುತ್ತವೆ.

ಒತ್ತಡ ಮತ್ತು ಆತಂಕ ದೂರ: ಬಿಸಿ ನೀರು ಕುಡಿಯುವುದು ಕೇಂದ್ರ ನರಮಂಡಲದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಮೆದುಳಿಗೆ ಶಾಂತಿ ನೀಡುವುದರ ಜೊತೆಗೆ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ಬಿಸಿ ನೀರು ಕುಡಿಯುವುದರಿಂದ ಮನಸ್ಸು ಪ್ರಫುಲ್ಲವಾಗಿ ಧನಾತ್ಮಕ ಭಾವನೆಗಳು ಮೂಡುತ್ತವೆ.

ಸ್ನಾಯು ಸೆಳೆತ ಮತ್ತು ನೋವು ನಿವಾರಣೆ: ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾದಂತೆ ಸ್ನಾಯುಗಳಿಗೆ ಬೇಕಾದ ಪೋಷಕಾಂಶ ಮತ್ತು ಆಮ್ಲಜನಕ ಸರಿಯಾಗಿ ತಲುಪುತ್ತದೆ. ಇದು ಸ್ನಾಯುಗಳ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಲ್ಯಾಕ್ಟಿಕ್ ಆಸಿಡ್ ಮಟ್ಟವನ್ನು ತಗ್ಗಿಸಿ ಆರಾಮ ನೀಡುತ್ತದೆ.

ಕೆಲವು ಮುನ್ನೆಚ್ಚರಿಕೆಗಳು: ಬಿಸಿ ನೀರು ಕುಡಿಯುವುದು ಒಳ್ಳೆಯದಾದರೂ ಕೆಲವು ವಿಷಯಗಳನ್ನು ಗಮನಿಸಬೇಕು:

  • ನೀರು ಅತಿಯಾಗಿ ಬಿಸಿಯಾಗಿರಬಾರದು, ಇದರಿಂದ ನಾಲಿಗೆ ಅಥವಾ ಗಂಟಲಿಗೆ ಹಾನಿಯಾಗಬಹುದು.
  • ನಲ್ಲಿಯಿಂದ ಬರುವ ನೇರ ಬಿಸಿ ನೀರನ್ನು ಬಳಸಬೇಡಿ, ಅದನ್ನು ಕಾಯಿಸಿ ಕುಡಿಯುವುದು ಸುರಕ್ಷಿತ.
  • ಅತಿಯಾದ ಉಷ್ಣತೆಯು ಅನ್ನನಾಳದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular